ಕಾಬೂಲ್‌

ಕಾಬೂಲ್‌ ಸರಣಿ ಸ್ಫೋಟ 40 ಮಂದಿ ಸಾವು

ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನ ಕೇಂದ್ರ ಭಾಗದಲ್ಲಿರುವ ಶಿಯಾ ಸಮುದಾಯದ ಸಾಂಸ್ಕೃತಿಕ ಕೇಂದ್ರದಲ್ಲಿ ಗುರುವಾರ ಸಂಭವಿಸಿದ ಸರಣಿ ಸ್ಫೋಟದಲ್ಲಿ 40 ಮಂದಿ ಮೃತಪಟ್ಟು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಕಾಬೂಲ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡವರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವ ಸ್ಥಳೀಯರು

ಕಾಬೂಲ್‌: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನ ಕೇಂದ್ರ ಭಾಗದಲ್ಲಿರುವ ಶಿಯಾ ಸಮುದಾಯದ ಸಾಂಸ್ಕೃತಿಕ ಕೇಂದ್ರದಲ್ಲಿ ಗುರುವಾರ ಸಂಭವಿಸಿದ ಸರಣಿ ಸ್ಫೋಟದಲ್ಲಿ 40 ಮಂದಿ ಮೃತಪಟ್ಟು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸಾವು, ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆಂತರಿಕ ಭದ್ರತಾ ಸಚಿವಾಲಯ ತಿಳಿಸಿದೆ. ಐಎಸ್‌ ಸಂಘಟನೆ ಈ ಸ್ಫೋಟದ ಹೊಣೆ ಹೊತ್ತುಕೊಂಡಿದೆ. ಗುಪ್ತಚರ ಇಲಾಖೆ ಕಚೇರಿ ಆವರಣದಲ್ಲಿ ಬುಧವಾರ ಆರು ನಾಗರಿಕರನ್ನು ಬಲಿ ಪಡೆದ ಐಎಸ್‌ ಆತ್ಮಾಹುತಿ ದಾಳಿಯ ಬೆನ್ನಲ್ಲೇ ಈ ಘಟನೆ ನಡೆದಿದೆ.

ಅಫ್ಗಾನಿಸ್ತಾನದ ಮೇಲಿನ ಸೋವಿಯತ್‌ ರಷ್ಯಾದ ದಾಳಿಯ 38ನೇ ವರ್ಷಾಚರಣೆ ಸಮಾರಂಭ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ.

ಶಿಯಾಟ್‌ ತಬಾವನ್‌ ಸಾಂಸ್ಕೃತಿಕ ಕೇಂದ್ರದಲ್ಲಿ ಒಂದರ ನಂತರ ಒಂದರಂತೆ ಒಟ್ಟು ಮೂರು ಬಾಂಬ್‌ ಸ್ಫೋಟಿಸಿವೆ.

ಮೊದಲ ಬಾಂಬ್‌ ಮಾತ್ರ ಪ್ರಬಲವಾಗಿತ್ತು. ಉಳಿದೆರೆಡು ಬಾಂಬ್‌ ಅಷ್ಟೊಂದು ಶಕ್ತಿಶಾಲಿಯಾಗಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

40 ಕಿ.ಮೀ ನಿರ್ಬಂಧ
ಪಾಕ್‌ ರಾಜತಾಂತ್ರಿಕರ ಓಡಾಟಕ್ಕೆ ನಿರ್ಬಂಧ

ಪಾಕಿಸ್ತಾನದ ರಾಜತಾಂತ್ರಿಕರು ತಮ್ಮ ರಾಜತಾಂತ್ರಿಕ ಕಚೇರಿಯ 40 ಕಿ.ಮೀ ವ್ಯಾಪ್ತಿಯ ಆಚೆಗೆ ಸಂಚರಿಸದಂತೆ ಅಮೆರಿಕ ನಿರ್ಬಂಧ ಹೇರಿದೆ. ಮೇ 1ರಿಂದ ಜಾರಿಗೆ ಬರಲಿದೆ.

19 Apr, 2018
ಚೀನಾದಿಂದ ಆರ್ಥಿಕ ಕಾರಿಡಾರ್‌ಗೆ ಪ್ರಸ್ತಾವ

ಭಾರತ– ನೇಪಾಳ–ಚೀನಾಕ್ಕೆ ಸಂಪರ್ಕ
ಚೀನಾದಿಂದ ಆರ್ಥಿಕ ಕಾರಿಡಾರ್‌ಗೆ ಪ್ರಸ್ತಾವ

19 Apr, 2018
‘21ರಿಂದ ಸುಷ್ಮಾ ಚೀನಾ ಪ್ರವಾಸ ರಾಜಕೀಯ ವಿಶ್ವಾಸ ವೃದ್ಧಿ’

ಪರಸ್ಪರ ಮಾತುಕತೆ
‘21ರಿಂದ ಸುಷ್ಮಾ ಚೀನಾ ಪ್ರವಾಸ ರಾಜಕೀಯ ವಿಶ್ವಾಸ ವೃದ್ಧಿ’

19 Apr, 2018

ಎರಡನೇ ಮಹಾ ಯುದ್ಧ
ಮಹಾಯುದ್ಧ ಕಾಲದ ಬಾಂಬ್‌ ಪತ್ತೆ!

ಬರ್ಲಿನ್‌ ಕೇಂದ್ರ ರೈಲ್ವೆ ನಿಲ್ದಾಣದ ಬಳಿ ಕಟ್ಟಡ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಎರಡನೇ ಮಹಾ ಯುದ್ಧ ಕಾಲದ ಸಜೀವ ಬಾಂಬ್‌ ಪತ್ತೆಯಾಗಿದೆ ಎಂದು ಪೊಲೀಸರು...

19 Apr, 2018
ಅತ್ಯಾಚಾರ: ವಿಶ್ವಸಂಸ್ಥೆ ಖಂಡನೆ

ಕಠಿಣ ಕ್ರಮಕ್ಕೆ ಆಗ್ರಹ
ಅತ್ಯಾಚಾರ: ವಿಶ್ವಸಂಸ್ಥೆ ಖಂಡನೆ

19 Apr, 2018