ಉಡುಪಿ

‘ಶ್ರೀಮನ್ನ್ಯಾಯಸುಧಾ, ತಾತ್ಪರ್ಯಚಂದ್ರಿಕಾ ಮಂಗಲೋತ್ಸವ’

ಪರ್ಯಾಯದ ಅವಧಿ ಮುಗಿದ ನಂತರವೂ ಮಾಡಬೇಕಾದ ಹಲವು ಕೆಲಸಗಳಿವೆ. ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿ ಸರ್ಕಾರ ನೀಡಿರುವ 2 ಎಕರೆ ಜಾಗದಲ್ಲಿ ಸುಮಾರು ₹20 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು

ಉಡುಪಿ: ಶ್ರೀಮನ್ನ್ಯಾಯಸುಧಾ ಮಂಗಲೋತ್ಸವ ಹಾಗೂ ತಾತ್ಪರ್ಯಚಂದ್ರಿಕಾ ಮಂಗಲೋತ್ಸವ ಕ್ರಮವಾಗಿ ಜನವರಿ 5 ಮತ್ತು 6ರಂದು ನಡೆಯಲಿದೆ. ಜ.1ರಿಂದ 15ರ ವರೆಗೆ ವಿದ್ವತ್‌ಗೋಷ್ಠಿ ನಡೆಯಲಿದ್ದು ಹೊರ ರಾಜ್ಯದ ವಿದ್ವಾಂಸರು ಉಪನ್ಯಾಸ ನೀಡಲಿದ್ದಾರೆ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 5ರಂದು ನಡೆಯುವ ಕಾರ್ಯಕ್ರಮದಲ್ಲಿ ಉತ್ತರಾಧಿ ಮಠದ ಸತ್ಯಾತ್ಮತೀರ್ಥ ಸ್ವಾಮೀಜಿ, ವ್ಯಾಸರಾಜ ಮಠದ ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠದ ವಿದ್ಯೇಶತೀರ್ಥ ಸ್ವಾಮೀಜಿ ಹಾಗೂ ಅಷ್ಟಮಠದ ಶ್ರೀಗಳು ಉಪಸ್ಥಿತರಿರುವರು ಎಂದರು.

1 ರಂದು ಸಂಜೆ 5 ಗಂಟೆಗೆ ಮೊದಲ ವಿದ್ವತ್‌ಗೋಷ್ಠಿ ನಡೆಯಲಿದ್ದು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರು ಉಪನ್ಯಾಸ ನೀಡುವರು. 14ರಂದು ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

₹11 ಕೋಟಿಯ ಅಭಿವೃದ್ಧಿ ಕಾರ್ಯ: ₹3.50 ಕೋಟಿ ವೆಚ್ಚದಲ್ಲಿ ರಾಜಾಂಗಣದ ಮೇಲ್ಬಾಗದಲ್ಲಿ ಮಧ್ವಾಂಗಣ ನಿರ್ಮಾಣ, ₹3.50 ಕೋಟಿ ವೆಚ್ಚದಲ್ಲಿ ಕೃಷ್ಣ ಮಠದ ಒಳಾಂಗಣ ನವೀಕರಣ ಸೇರಿದಂತೆ ಒಟ್ಟು ₹11 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳು ಸಂಪನ್ನಗೊಂಡಿವೆ. ಯಾತ್ರಿಕರಿಗೆ ಅನುಕೂಲ ಮಾಡಿಕೊಡಲು ಯಾತ್ರಿ ನಿವಾಸವನ್ನೂ ನಿರ್ಮಾಣ ಮಾಡಲಾಗಿದೆ. ಪಾಜಕ ಕ್ಷೇತ್ರದಲ್ಲಿ ₹5 ಕೋಟಿ ವೆಚ್ಚದಲ್ಲಿ ವಿದ್ಯಾಸಂಸ್ಥೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಪರ್ಯಾಯದ ಅವಧಿ ಮುಗಿದ ನಂತರವೂ ಮಾಡಬೇಕಾದ ಹಲವು ಕೆಲಸಗಳಿವೆ. ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿ ಸರ್ಕಾರ ನೀಡಿರುವ 2 ಎಕರೆ ಜಾಗದಲ್ಲಿ ಸುಮಾರು ₹20 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಪುಣೆಯಲ್ಲಿ ಕೃಷ್ಣ ಮಂದಿರ ನಿರ್ಮಿಸುವ ಯೋಚನೆ ಇದೆ. ಉಡುಪಿ, ಶಿವಮೊಗ್ಗದಲ್ಲಿ ಸಾರ್ವಜನಿಕ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗುವುದು, ಅಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.

ಪರ್ಯಾಯದ ಅವಧಿಯಲ್ಲಿ ಅಂದುಕೊಂಡಿದ್ದನ್ನು ಬಹುತೇಕ ಮಾಡಲಾಗಿದೆ. ಪರ್ಯಾಯದ ಸಂದರ್ಭ ಹಾಗೂ ಆ ನಂತರ ಭಕ್ತರು ನೀಡಿದ ಹಣವನ್ನು ಅದಕ್ಕಾಗಿ ಬಳಸಲಾಗಿದೆ. ಆದರೆ 1 ಕೋಟಿ ಸಸಿ ವಿತರಿಸುವ ಕಾರ್ಯ ಮಾತ್ರ ಪೂರ್ಣವಾಗಲಿಲ್ಲ ಎಂದರು. ಪ್ರಧಾನಿ ಅವರನ್ನು ಮಠಕ್ಕೆ ಆಹ್ವಾನಿಸಲಾಗಿತ್ತು, ಆದರೆ ಅವರು ಬಂದಿಲ್ಲ. ಆಹ್ವಾನ ನೀಡುವುದಷ್ಟೇ ನಮ್ಮ ಕೆಲಸ ಎಂದರು.

* * 

‘ಮುಂದಿನ ಬಾರಿ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಅವರೇ ಪರ್ಯಾಯ ಪೀಠ ಏರುವರು. ಅವರಿಗೆ ಮಾರ್ಗದರ್ಶನ– ನೆರವು ನೀಡುತ್ತೇನೆ’.
ವಿಶ್ವೇಶತೀರ್ಥ ಸ್ವಾಮೀಜಿ
ಪೇಜಾವರ ಮಠ

Comments
ಈ ವಿಭಾಗದಿಂದ ಇನ್ನಷ್ಟು
ಪಾರ್ಕಿಂಗ್‌ ಸ್ಥಳದಲ್ಲಿದ್ದ ಅಂಗಡಿ ತೆರವು

ಉಡುಪಿ
ಪಾರ್ಕಿಂಗ್‌ ಸ್ಥಳದಲ್ಲಿದ್ದ ಅಂಗಡಿ ತೆರವು

20 Jan, 2018

ಉಡುಪಿ
ಕಾನೂನು ಉಲ್ಲಂಘಿಸುವ ಖಾಸಗಿ ಬಸ್ ವಿರುದ್ಧ ಕ್ರಮ

ಮಟ್ಕಾ ದಂಧೆಯ ಬಗ್ಗೆ ನಾಲ್ಕು ದೂರುಗಳು ಬಂದವು. ಮಟ್ಕಾ ದಂಧೆ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಪರ್ಯಾಯದಂತಹ ಕಾರ್ಯಕ್ರಮ ಇದ್ದರೂ ಕಳೆದ ವಾರ 13...

20 Jan, 2018
ಮುಂಬೈನಿಂದ ಬಂದವು ವಿಶೇಷ ಯಂತ್ರ

ಉಡುಪಿ
ಮುಂಬೈನಿಂದ ಬಂದವು ವಿಶೇಷ ಯಂತ್ರ

19 Jan, 2018

ಉಡುಪಿ
ಶಿಶು, ತಾಯಿ ಮರಣ ಪ್ರಮಾಣ ಇಳಿಕೆ

ರೋಗಗಳು ಹರಡದಂತೆ ತಡೆಯುವುದು ಮತ್ತು ಆರೋಗ್ಯ ಕಾಯ್ದುಕೊಳ್ಳುವುದು ಹೊಸ ಆರೋಗ್ಯ ನೀತಿಯ (2017) ಪ್ರಮುಖ ಧ್ಯೇಯವಾಗಿದೆ

19 Jan, 2018

ಉಡುಪಿ
ಕೃಷ್ಣನ ಒಲಿಸಲು ಭಕ್ತಿ, ಜ್ಞಾನ, ವೈರಾಗ್ಯ ಅಗತ್ಯ

ಶ್ರೀಕೃಷ್ಣನನ್ನು ಕಟ್ಟಿ ಹಾಕಬೇಕಾದರೆ ಮೂರು ದಾರಗಳು ಅವಶ್ಯಕ. ಭಕ್ತಿ, ಜ್ಞಾನ, ವೈರಾಗ್ಯ ಎಂಬ ದಾರಗಳಿಂದ ಕೃಷ್ಣನನ್ನು ಕಟ್ಟಿ, ಒಲಿಸಿಕೊಳ್ಳಬಹುದು ಎಂದು ಪೇಜಾವರ ಮಠದ ವಿಶ್ವೇಶ...

19 Jan, 2018