ಅಫಜಲಪುರ

ಗ್ರಾಮಗಳ ಮೂಲ ಸೌಲಭ್ಯಕ್ಕೆ ಮೊದಲು ಆದ್ಯತೆ: ಮಾಲೀಕಯ್ಯ

ದೇವಲಗಾಣಗಾಪುರದ ದತ್ತ ದೇವಸ್ಥಾನಕ್ಕೆ ಬೇರೆ ರಾಜ್ಯಗಳಿಂದ ಯಾತ್ರಿಕರು ಬರುವುದರಿಂದ ಇಲ್ಲಿ ಹೆಚ್ಚಿನ ಸುಧಾರಣೆಗಳು ಅಗತ್ಯವಾಗಿವೆ. ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ

ಅಫಜಲಪುರ: ತಾಲ್ಲೂಕಿನ ಗ್ರಾಮಗಳಲ್ಲಿ ಮೂಲಸೌಲಭ್ಯ ಕಲ್ಪಸಲು ಮೊದಲು ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ತಿಳಿಸಿದರು. ತಾಲ್ಲೂಕಿನ ದೇವಲಗಾಣಗಾಪುರದ ವಾರ್ಡ್‌ ನಂ. 5ರ ಲಕ್ಷ್ಮೀ ನಗರದಲ್ಲಿ ಸುಮಾರು ₹ 20 ಲಕ್ಷದ ಸಿಮೆಂಟ್‌ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಈಗಾಗಲೇ ತಾಲ್ಲೂಕಿನಲ್ಲಿ ಮುಖ್ಯರಸ್ತೆಗಳು ನಿರ್ಮಾಣ ಮಾಡಲಾಗಿದೆ. ಕೆಲವು ಕಡೆ ರಾಜ್ಯ– ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ಕೆಲವು ಕಡೆ ಗ್ರಾಮಾಂತರದಲ್ಲಿಯೂ ಸಿಮೆಂಟ್‌ ರಸ್ತೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ದೇವಲಗಾಣಗಾಪುರದ ದತ್ತ ದೇವಸ್ಥಾನಕ್ಕೆ ಬೇರೆ ರಾಜ್ಯಗಳಿಂದ ಯಾತ್ರಿಕರು ಬರುವುದರಿಂದ ಇಲ್ಲಿ ಹೆಚ್ಚಿನ ಸುಧಾರಣೆಗಳು ಅಗತ್ಯವಾಗಿವೆ. ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಮಹೇಶ ಗುತ್ತೇದಾರ, ತಾ.ಪಂ ಸದಸ್ಯ ಭಗವಂತ ಜಕಬಾ, ಖಾದಿ ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಲ್ಲಿನಾಥ ಪಾಟೀಲ ಹಾಗೂ ಮುಖಂಡರಾದ ದೇವೇಂದ್ರ ಜಮಾದಾರ, ಮಲ್ಲಿಕಾರ್ಜುನ ವಡಗೇರಿ, ಪಿಂಟು ಮನಿಯಾರ, ದಿಗಂಬರ ಕರಜಗಿ, ಅನ್ವರ್ ತಾಂಬೋಳಿ, ದತ್ತು ಸಿಂಧೆ, ಬಸವರಾಜ ಭಜಂತ್ರಿ, ಅರ್ಚಕರಾದ ಬಾಳುಭಟ್‌ ಪೂಜಾರಿ, ನರೇಂದ್ರ ಭಟ್‌ ಪೂಜಾರಿ, ಕರುಣಾಕರ ಭಟ್‌ ಪೂಜಾರಿ, ಪ್ರವೀಣ ಭಟ್‌ ಪೂಜಾರಿ, ಗುಂಡು ಭಟ್ ಪೂಜಾರಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಕಲಬುರ್ಗಿ ಚಿತ್ರಸಂತೆಯಲ್ಲಿ ಕಲೆಯ ಬಲೆ

ಕಲಬುರ್ಗಿ
ಕಲಬುರ್ಗಿ ಚಿತ್ರಸಂತೆಯಲ್ಲಿ ಕಲೆಯ ಬಲೆ

22 Jan, 2018

ಕಲ್ಬುರ್ಗಿ
‘ಗೌರವಾದರ ವರ್ತಮಾನಕ್ಕೆ ಅನ್ವಯಿಸಲಿ’

‘ಬುದ್ಧಿ ಜೀವಿಗಳು ಮತ್ತು ಸಮಾಜ‘ ಕುರಿತು ಮಾತನಾಡಿದ ಸಾಹಿತಿ ಮಹಾದೇವ ಬಡಿಗೇರ, ‘ಬುದ್ಧಿ ಜೀವಿಗಳು ಎಂದರೆ ಬರಹಗಾರರು, ಸಾಹಿತಿಗಳು ಹಾಗೂ ಇತಿಹಾಸಕಾರರು ಎಂಬ ಭಾವನೆ ಇದೆ. ...

22 Jan, 2018
ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಭೀಕರ ದಾಳಿ: ದಂಡೆ

ಕಲಬುರ್ಗಿ
ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಭೀಕರ ದಾಳಿ: ದಂಡೆ

21 Jan, 2018
ರಾಜ್ಯದಲ್ಲಿ ಜೆಡಿಎಸ್‌ಗೆ ಅವಕಾಶ ನೀಡಿ: ಕುಮಾರಸ್ವಾಮಿ ಮನವಿ

ಜೇವರ್ಗಿ
ರಾಜ್ಯದಲ್ಲಿ ಜೆಡಿಎಸ್‌ಗೆ ಅವಕಾಶ ನೀಡಿ: ಕುಮಾರಸ್ವಾಮಿ ಮನವಿ

21 Jan, 2018
ಅಭಿವೃದ್ಧಿಗಾಗಿ ಕಾಯುತ್ತಿರುವ ಪ್ರವಾಸಿ ತಾಣಗಳು

ಚಿಂಚೋಳಿ
ಅಭಿವೃದ್ಧಿಗಾಗಿ ಕಾಯುತ್ತಿರುವ ಪ್ರವಾಸಿ ತಾಣಗಳು

20 Jan, 2018