ವಿರಾಜಪೇಟೆ

ಆಧುನಿಕ ಭಾರತ ಕಟ್ಟಲು ಶ್ರಮಿಸಿದ ಕಾಂಗ್ರೆಸ್‌

‘ಪ್ರತಿಯೊಬ್ಬರಿಗೂ ಸಮಾನತೆ ದೊರಕಬೇಕೆಂಬ ಆಶಯದಿಂದ ಡಾ.ಬಿ.ಆರ್. ಅಂಬೇಡ್ಕರ್‌ ಸಂವಿಧಾನವನ್ನು ರೂಪಿಸಿದರು. ಎಲ್ಲರಿಗೂ ಸಮಾನತೆ ಹಾಗೂ ಸ್ವಾತಂತ್ರ್ಯ ದೊರಕಿದ್ದರಿಂದಲೇ ಟೀ ಮಾಡುವ ವ್ಯಕ್ತಿ ಪ್ರಧಾನಮಂತ್ರಿಯಾಗಲು ಸಾಧ್ಯವಾಯಿತು

ವಿರಾಜಪೇಟೆ: ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಶ್ರಮಿಸಿದ ಕಾಂಗ್ರೆಸ್‌, ಸ್ವಾತಂತ್ರ್ಯದ ಬಳಿಕ ಆಧುನಿಕ ಭಾರತವನ್ನು ಕಟ್ಟುವಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಂ.ಪೂವಯ್ಯ ಹೇಳಿದರು.

ಪಕ್ಷದ 133ನೇ ಸಂಸ್ಥಾಪನಾ ದಿನದ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ಹಾಗೂ ನಗರ ಕಾಂಗ್ರೆಸ್ ವತಿಯಿಂದ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಕ್ಷವು ತನ್ನ ಆಡಳಿತದ ಅವಧಿಯಲ್ಲಿ ದೇಶವನ್ನು ಜಾತ್ಯತೀತ, ಪ್ರಗತಿಪರ ರಾಷ್ಟ್ರವನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.

ನಗರ ಘಟಕದ ಅಧ್ಯಕ್ಷ ಜಿ.ಜಿ.ಮೋಹನ್, ‘ಪ್ರತಿಯೊಬ್ಬರಿಗೂ ಸಮಾನತೆ ದೊರಕಬೇಕೆಂಬ ಆಶಯದಿಂದ ಡಾ.ಬಿ.ಆರ್. ಅಂಬೇಡ್ಕರ್‌ ಸಂವಿಧಾನವನ್ನು ರೂಪಿಸಿದರು. ಎಲ್ಲರಿಗೂ ಸಮಾನತೆ ಹಾಗೂ ಸ್ವಾತಂತ್ರ್ಯ ದೊರಕಿದ್ದರಿಂದಲೇ ಟೀ ಮಾಡುವ ವ್ಯಕ್ತಿ ಪ್ರಧಾನಮಂತ್ರಿಯಾಗಲು ಸಾಧ್ಯವಾಯಿತು. ಸಂವಿಧಾನದ ವಿರುದ್ಧ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ’ ಎಂದು ಹೇಳಿದರು.

ಕಾಂಗ್ರೆಸ್ ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಸಿ. ಕಾರ್ಯಪ್ಪ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಸಲಾಂ, ಪಕ್ಷದ ಮುಖಂಡರಾದ ವಿ.ಕೆ. ಸತೀಶ್, ಜಾನ್ಸನ್, ಶಶಿಧರ್, ಶೆರಿನ್, ಪಟ್ಟಣ ಪಂಚಾಯಿತಿ ಸದಸ್ಯೆ ಶೀಬಾ ಪೃಥ್ವಿನಾಥ್, ಪೊನ್ನಕ್ಕಿ ಪೂವಮ್ಮ, ಗಂಗಮ್ಮ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಅಪ್ಪಾರಂಡ, ಮೂಕಳಮಾಡಕ್ಕೆ ಭರ್ಜರಿ ಗೆಲುವು

ನಾಪೊಕ್ಲು
ಅಪ್ಪಾರಂಡ, ಮೂಕಳಮಾಡಕ್ಕೆ ಭರ್ಜರಿ ಗೆಲುವು

26 Apr, 2018

ಮಡಿಕೇರಿ
ಮನವೊಲಿಕೆಗೆ ಮುಂದಾದ ಡಿಕೆಶಿ

ಮಡಿಕೇರಿ ಕ್ಷೇತ್ರದಿಂದ ನಾಪಂಡ ಮುತ್ತಪ್ಪ, ವಿರಾಜಪೇಟೆ ಕ್ಷೇತ್ರದಿಂದ ಹರೀಶ್‌ ಬೋಪಣ್ಣ ಹಾಗೂ ಪದ್ಮಿನಿ ಪೊನ್ನಪ್ಪ ಅವರು ಬಂಡಾಯವೆದ್ದು ನಾಮಪತ್ರ ಸಲ್ಲಿಸಿರುವುದು ಕಾಂಗ್ರೆಸ್‌ಗೆ ನುಂಗಲಾರದ ಬಿಸಿತುಪ್ಪವಾಗಿ...

26 Apr, 2018
 ದೈಹಿಕ ಶಿಕ್ಷಣ ಶಿಕ್ಷಕರ ಪುಸ್ತಕ ಪ್ರೀತಿ...

ಕುಶಾಲನಗರ
ದೈಹಿಕ ಶಿಕ್ಷಣ ಶಿಕ್ಷಕರ ಪುಸ್ತಕ ಪ್ರೀತಿ...

26 Apr, 2018
ತಪ್ಪಿದ ತಾಳಮೇಳ: ಸೊರಗಿದ ಕ್ಷೇತ್ರ

ಮಡಿಕೇರಿ
ತಪ್ಪಿದ ತಾಳಮೇಳ: ಸೊರಗಿದ ಕ್ಷೇತ್ರ

25 Apr, 2018
ಗುಡುಗು– ಸಿಡಿಲು ಸಹಿತ ಧಾರಾಕಾರ ಮಳೆ

ಕುಶಾಲನಗರ
ಗುಡುಗು– ಸಿಡಿಲು ಸಹಿತ ಧಾರಾಕಾರ ಮಳೆ

25 Apr, 2018