ಯಮಕನಮರಡಿ

ಆಧಾರ್‌ ಕಾರ್ಡ್‌ ಪಡೆಯಲು ಗ್ರಾಮಸ್ಥರ ಪರದಾಟ

ಈ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಆಗಮಿಸುವುದಿಲ್ಲ. ಆಗಾಗ ವಿದ್ಯುತ್ ಕೈಕೊಡುತ್ತದೆ.

ಯಮಕನಮರಡಿ: ಸಮೀಪದ ಪಾಶ್ಚಾಪೂರದಲ್ಲಿ ಆಧಾರ್‌ ಕಾರ್ಡ್‌ ಮಾಡುವ ಸಿಬ್ಬಂದಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಆಧಾರ ಕಾರ್ಡ್‌ ಮಾಡಿಸಲು ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಈ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಆಗಮಿಸುವುದಿಲ್ಲ. ಆಗಾಗ ವಿದ್ಯುತ್ ಕೈಕೊಡುತ್ತದೆ. ಇಂತಹ ಸಂದರ್ಭದಲ್ಲಿ ಬಳಸಲು ಇಡಲಾಗಿರುವ ಬ್ಯಾಟರಿಗಳು ಕೆಟ್ಟುಹೋಗಿವೆ. ಪಾಶ್ಚಾಪುರ, ಮಾವನೂರ, ಬಸ್ಸಾಪುರ, ಶಿರೂರ ಹಾಗೂ ಗೋಕಾಕ ತಾಲ್ಲೂಕಿನ ಸಾರ್ವಜನಿಕರು ಈ ಕೇಂದ್ರಕ್ಕೆ ಬೆಳಿಗ್ಗೆಯೇ ಬಂದು ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ.

ತಕ್ಷಣ ಈ ಸಮಸ್ಯೆಯನ್ನು ಬಗೆಹರಿಸಲು ತಾಲ್ಲೂಕು ಆಡಳಿತ ಗಮನಹರಿಸಬೇಕು. ಈ ಕೇಂದ್ರಕ್ಕೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಬೇಕು, ಹೊಸ ಬ್ಯಾಟರಿ ಒದಗಿಸಬೇಕು ಎಂದು ಪಾಶ್ಚಾಪೂರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಬೈಲಹೊಂಗಲ
ಪಾಟೀಲ ಪರ ಮಹಿಳೆಯರ ಪ್ರಚಾರ

‘ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿರುವ ಡಾ.ವಿಶ್ವನಾಥ ಪಾಟೀಲ ಅವರನ್ನು ಎರಡನೇ ಬಾರಿ ಆಯ್ಕೆ ಮಾಡಿ ಬೈಲಹೊಂಗಲ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಮತಕ್ಷೇತ್ರವನ್ನಾಗಿ ಮಾಡಲು ಸಹಕರಿಸಬೇಕು’...

18 Apr, 2018
ಜಗತ್ತಿನ ಶ್ರೇಷ್ಠ ದಾರ್ಶನಿಕ ಅಂಬೇಡ್ಕರ್‌

ಬೆಳಗಾವಿ
ಜಗತ್ತಿನ ಶ್ರೇಷ್ಠ ದಾರ್ಶನಿಕ ಅಂಬೇಡ್ಕರ್‌

18 Apr, 2018

ರಾಮದುರ್ಗ
ಕುರುಬರ ಅಭಿವೃದ್ಧಿಗೆ ಶ್ರಮಿಸಿದ ಅಭ್ಯರ್ಥಿ ಬೆಂಬಲಿಸಲು ನಿರ್ಧಾರ

‘ಯಾವುದೇ ರಾಜಕಾರಣಿ ಅಥವಾ ರಾಜಕೀಯ ಪಕ್ಷದವರು ಕುರುಬ ಸಮಾಜದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ’ ಎಂಬುದನ್ನು ಸಮಾಜದ ಪ್ರತಿಯೊಬ್ಬರೂ ಗುರುತಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ...

18 Apr, 2018

ಬೆಳಗಾವಿ
ಲಿಂಗಾಯತ ಧರ್ಮ: ವಿಶ್ವಸಂಸ್ಥೆವರೆಗೆ ಹೋರಾಟ

‘ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಂಸತ್ತಿನಲ್ಲಿ ದೊರಕಿದ ನಂತರ ವಿಶ್ವ ಮಾನ್ಯತೆ ಪಡೆಯಲು ವಿಶ್ವಸಂಸ್ಥೆಯವರೆಗೂ ಹೋರಾಟ ನಡೆಸಲಾಗುವುದು’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ...

18 Apr, 2018

ಬೆಳಗಾವಿ
ತೊಗಾಡಿಯಾ ಲಾಭ ಪಡೆದವರು ಮಾತನಾಡಲಿ

‘ವಿಶ್ವ ಹಿಂದೂ ಪರಿಷತ್‌ ಮುಖಂಡ ಪ್ರವೀಣ ತೊಗಾಡಿಯಾ ಅವರಿಂದ ಲಾಭ ಪಡೆದಿರುವ ಬಿಜೆಪಿ ನಾಯಕರು ಮೌನ ವಹಿಸಿರುವುದೇಕೆ? ಅವರು ಮೂಡಿಸಿದ ಹಿಂದುತ್ವದ ಜಾಗೃತಿಯಿಂದಲೇ ಸಂಸದರಾಗಿ...

17 Apr, 2018