ಚೇಳೂರು

ಚೇಳೂರ್‌ ಬಂದ್ ಸಂಪೂರ್ಣ ಯಶಸ್ವಿ

ತಾಲ್ಲೂಕು ಕೇಂದ್ರ ರಚನೆ ಹೋರಾಟ ಸಮಿತಿ ಸದಸ್ಯರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರು.

ಚೇಳೂರು: ಚೇಳೂರು ಗ್ರಾಮವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಗುರುವಾರ ನಡೆಸಿದ ಬಂದ್‌ ಸಂಪೂರ್ಣ ಯಶಸ್ವಿಯಾಯಿತು. ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚಿ ಬಂದ್‌ಗೆ ಸಹಕರಿಸಿದವು. ವಾಹನ ಸಂಚಾರ ಇರಲಿಲ್ಲ. ಪೆಟ್ರೋಲ್‌ ಬಂಕ್‌, ಬ್ಯಾಂಕ್‌, ನಾಡಕಚೇರಿ ಮತ್ತು ವಿವಿಧ ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನೂ ಮುಚ್ಚಲಾಗಿತ್ತು. ಜನದಟ್ಟನೆಯಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾಹನಗಳಿಲ್ಲದೆ ಪರಸ್ಥಳದ ಪ್ರಯಾಣಿಕರು ಪರದಾಡಿದರು.

ತಾಲ್ಲೂಕು ಕೇಂದ್ರ ರಚನೆ ಹೋರಾಟ ಸಮಿತಿ ಸದಸ್ಯರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರು. ನಂತರ ಪಂಚಾಯಿತಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ಚೇಳೂರು ಗ್ರಾಮವಲ್ಲದೆ ಹೋಬಳಿ ವ್ಯಾಪ್ತಿಯ ಆರು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಸ್ವಯಂಘೋಷಿತ ಬಂದ್ ಮಾಡಲಾಗಿತ್ತು. ಹೋರಾಟ ಸಮಿತಿಯ ಸದಸ್ಯರಾದ ರಮಾದೇವಿ, ಎನ್.ವಿ.ಬಯ್ಯಪ್ಪ, ಎಸ್.ವೈ.ವೆಂಕಟರವಣಾರೆಡ್ಡಿ, ಕಡ್ಡಿಲು ವೆಂಕಟರವಣ, ಜಿ.ವಿ.ಕೃಷ್ಣಾರೆಡ್ಡಿ, ಅಲುವೇಲಮ್ಮ, ಕೆ.ವಿ.ಶ್ರೀನಿವಾಸರೆಡ್ಡಿ, ಎ.ಎನ್.ಆಂಜನೇಯರೆಡ್ಡಿ, ನಾಗರಾಜ, ಬಾವಾಜಾನ್, ಖಾದರ್, ವಕೀಲರಾದ ನಾರಾಯಣ, ರವೀಂದ್ರ ರೆಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಅಸಮಾಧಾನ ಹುಟ್ಟುಹಾಕಿದ ಮುಖ್ಯಮಂತ್ರಿ ಮಾತು

ಚಿಕ್ಕಬಳ್ಳಾಪುರ
ಅಸಮಾಧಾನ ಹುಟ್ಟುಹಾಕಿದ ಮುಖ್ಯಮಂತ್ರಿ ಮಾತು

22 Jan, 2018
ಸರಳ ಮದುವೆ ಹೆಚ್ಚು ನಡೆಯಲಿ

ಚಿಕ್ಕಬಳ್ಳಾಪುರ
ಸರಳ ಮದುವೆ ಹೆಚ್ಚು ನಡೆಯಲಿ

22 Jan, 2018
ಎರಡನೇ ಬಾರಿಯೂ ಮುಂದುವರಿದ ಗೊಂದಲ?

ಚಿಕ್ಕಬಳ್ಳಾಪುರ
ಎರಡನೇ ಬಾರಿಯೂ ಮುಂದುವರಿದ ಗೊಂದಲ?

21 Jan, 2018
ಬಾಗೇಪಲ್ಲಿ: ಇಂದು ಬಡವರ ಮದುವೆ ‘ಹಬ್ಬ’

ಚಿಕ್ಕಬಳ್ಳಾಪುರ
ಬಾಗೇಪಲ್ಲಿ: ಇಂದು ಬಡವರ ಮದುವೆ ‘ಹಬ್ಬ’

21 Jan, 2018
ಮಳೆಗಾಲದಲ್ಲಿ ನರಕ, ವರ್ಷವಿಡೀ ನಡುಕ!

ಚಿಕ್ಕಬಳ್ಳಾಪುರ
ಮಳೆಗಾಲದಲ್ಲಿ ನರಕ, ವರ್ಷವಿಡೀ ನಡುಕ!

20 Jan, 2018