ಜ.1ರಿಂದ ಕನ್ನಡ ಜಾನಪದ ನಿತ್ಯೋತ್ಸವ
ಮಧ್ಯಾಹ್ನ 2 ಘಂಟೆಗೆ ಸೊಲ್ಲಾಪುರದ ಸರ್ಕಾರಿ ಪ್ರೌಢಶಾಲಾ ಅವರಣದಲ್ಲಿ ಕನ್ನಡ ಜಾನಪದ ನಿತ್ಯೋತ್ಸವ ಆರಂಭವಾಗಲಿದೆ.
ಚಿಕ್ಕಮಗಳೂರು: ಜಿಲ್ಲಾ ಕನ್ನಡ ಜಾನಪದ ಪರಿಷತ್ ವತಿಯಿಂದ ಜ.1ರಿಂದ 31ರವರೆಗೆ ಕನ್ನಡ ಜಾನಪದ ನಿತ್ಯೋತ್ಸವವನ್ನು ಜಿಲ್ಲೆಯ ವಿವಿದೆಡೆ ಏರ್ಪಡಿಸಲಾಗಿದೆ. ಜ.1ರ ಬೆಳಿಗ್ಗೆ 7.30ಕ್ಕೆ ತರೀಕೆರೆ ತಾಲ್ಲೂಕಿನ ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನದ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ.
ಮಧ್ಯಾಹ್ನ 2 ಘಂಟೆಗೆ ಸೊಲ್ಲಾಪುರದ ಸರ್ಕಾರಿ ಪ್ರೌಢಶಾಲಾ ಅವರಣದಲ್ಲಿ ಕನ್ನಡ ಜಾನಪದ ನಿತ್ಯೋತ್ಸವ ಆರಂಭವಾಗಲಿದೆ. ರಾಜ್ಯ ಕನ್ನಡ ಜಾನಪದ ಪರಿಷತ್ ಕಾರ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಮುಖ್ಯ ಶಿಕ್ಷಕ ರಮೇಶ್ ಅಧ್ಯಕ್ಷತೆ ವಹಿಸುವರು.
ಜ.14ರಂದು ಕೊಪ್ಪ ತಾಲ್ಲೂಕಿನ ಬಸ್ತಿ ಗ್ರಾಮದ ಸಮುದಾಯಭವನದಲ್ಲಿ ಸಂಜೆ 4 ಗಂಟೆಗೆ ಸಂಕ್ರಾಂತಿ ಸಂಭ್ರಮ ಆಯೋಜಿಸಲಾಗಿದೆ. ಸಹಕಾರಿ ಸಾರಿಗೆ ಸಂಸ್ಥೆ ಅಧ್ಯಕ್ಷ ಧರ್ಮಪ್ಪ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಜೈನ ಸಮುದಾಯದ ಮುಖಂಡ ಶಾಂತಕುಮಾರ್ ಜೈನ್ ಅಧ್ಯಕ್ಷತೆ ವಹಿಸುವರು ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.