ನರಗುಂದ

ಮಹದಾಯಿ ಯೋಜನೆ ಜಾರಿಗೆ ಆಗ್ರಹ: ಕೊಣ್ಣೂರಿನಲ್ಲಿ ಹೆದ್ದಾರಿ ತಡೆ

‘ಮಹದಾಯಿಗಾಗಿ ಉಗ್ರ ಹೋರಾಟ ಕೈಗೊಳ್ಳಬೇಕು. ಚುನಾವಣೆಗಳನ್ನು ಬಹಿಷ್ಕರಿಸಿ, ಈ ಭಾಗದ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಬೇಕು’

ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಮಠಾಧೀಶರ ನೇತೃತ್ವದಲ್ಲಿ ನರಗುಂದ ತಾಲ್ಲೂಕಿನ ಕೊಣ್ಣೂರಲ್ಲಿ ಗುರುವಾರ ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಯಿತು

ನರಗುಂದ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ತಾಲ್ಲೂಕಿನ ಕೊಣ್ಣೂರಿನಲ್ಲಿ ವಿರಕ್ತಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ರೈತರು ಹಾಗೂ ಆಟೋ, ಟೆಂಪೂ ಚಾಲಕರು, ಮಾಲೀಕರು ಗುರುವಾರ ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ, ಪ್ರತಿಭಟನೆ ನಡೆಸಿದರು.

ಕೆಲ ಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಪ್ರಯಾಣಿಕರು ಪರದಾಡಿದರು. ರೈತರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಕೇಂದ್ರ, ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಖಂಡಿಸಿ ಘೋಷಣೆ ಕೂಗಿದರು. ‘ಮಹದಾಯಿ ಯೋಜನೆ ಜಾರಿಗೊಳ್ಳುವವರೆಗೂ ಹೋರಾಟ ಬಿಡುವುದಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದರು.

‘ಮಹದಾಯಿಗಾಗಿ ಉಗ್ರ ಹೋರಾಟ ಕೈಗೊಳ್ಳಬೇಕು. ಚುನಾವಣೆಗಳನ್ನು ಬಹಿಷ್ಕರಿಸಿ, ಈ ಭಾಗದ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಅಪ್ಪಣಗೌಡ ಅರ್ಭಣದ, ಶಿವಾನಂದ ಹೇಳಿದರು. ಮಂಜು ಕುರಿ, ಶಂಕ್ರಣ್ಣ ವಾಲಿ, ಮುತ್ತುಸ್ವಾಮಿ ಮಳಲಿ, ಆಟೋ, ಟೆಂಪೂ ಚಾಲಕರು, ಮಾಲೀಕರು, ರೈತರು, ಮಹಿಳೆಯರು ಭಾಗವಹಿಸಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಮತದಾನ ಜಾಗೃತಿ; ಟಾಂಗಾ ಏರಿದ ಡಿಸಿ

ಗದಗ
ಮತದಾನ ಜಾಗೃತಿ; ಟಾಂಗಾ ಏರಿದ ಡಿಸಿ

25 Apr, 2018

ರೋಣ
ರೋಣ: ಸಿದ್ದರಾಮಯ್ಯಗೆ ಅದ್ಧೂರಿ ಸ್ವಾಗತ

ಬಾದಾಮಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ರೋಣ ಮಾರ್ಗದಿಂದ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೋಣ ಪಟ್ಟಣದ ಸೂಡಿ ವೃತ್ತದಲ್ಲಿ ಶಾಸಕ ಜಿ.ಎಸ್.ಎಸ್...

25 Apr, 2018
ಅಕ್ರಮಗಳ ತಾಣವಾದ ಆಶ್ರಯ ಮನೆ

ನರೇಗಲ್
ಅಕ್ರಮಗಳ ತಾಣವಾದ ಆಶ್ರಯ ಮನೆ

25 Apr, 2018

ಗದಗ
ಮೆರವಣಿಗೆ; ಅಭ್ಯರ್ಥಿಗಳ ಬಲ ಪ್ರದರ್ಶನ

ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಸೇರಿದಂತೆ 13 ಅಭ್ಯರ್ಥಿಗಳು ಮಂಗಳವಾರ ಗದಗ ಮತಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು. ಇದರ ಭಾಗವಾಗಿ ಆಯಾ ಪಕ್ಷಗಳ...

25 Apr, 2018
ರಸ್ತೆ ವಿಭಜಕದ ನಡುವೆ ಬೆಳಕಿನ ಹಂದರ

ಗದಗ
ರಸ್ತೆ ವಿಭಜಕದ ನಡುವೆ ಬೆಳಕಿನ ಹಂದರ

23 Apr, 2018