ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದದ ಕೂದಲಿಗೆ..

Last Updated 29 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

* ರಾಜಗಿರೆ ಸೊಪ್ಪನ್ನು ನುಣ್ಣಗೆ ಅರೆದು ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ನಂತರ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತಿದೆ.

* ಮೆಂತ್ಯೆಸೊಪ್ಪನ್ನು ಅರೆದು ತಲೆಗೆ ಹಚ್ಚಿಕೊಳ್ಳುವುದರಿಂದ ಹೊಟ್ಟು ನಿವಾರಣೆ ಯಾಗುವುದರ ಜೊತೆಗೆ ಕೂದಲು ಚೆನ್ನಾಗಿ ಬೆಳೆಯುತ್ತದೆ.

* ಬೂದುಗುಂಬಳಕಾಯಿ ಸಿಪ್ಪೆಯನ್ನು ಅರೆದು ಎಳ್ಳೆಣ್ಣೆಯಲ್ಲಿ ಸೇರಿಸಿ ಸ್ವಲ್ಪ ಕಾಯಿಸಿ ನೀರಿನಂಶ ಹೋದ ಮೇಲೆ ಇಳಿಸಿ ಶೋಧಿಸಿ ಇಡಬೇಕು. ಈ ಎಣ್ಣೆಯನ್ನು ನಿತ್ಯ ಕೂದಲಿಗೆ ಮತ್ತು ಕೂದಲ ಬೂಡಕ್ಕೆ ಹಚ್ಚುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ.

* ಮೆಂತ್ಯದ ಕಾಳನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಏಳು ದಿನ ಬಿಸಿಲಿನಲ್ಲಿರಿಸಿ ನಂತರ ನಿತ್ಯ ಉಪಯೋಗಿಸುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತವೆ.

* ಗುಲಾಬಿ ಜಲ, ನಿಂಬೆರಸ ಮತ್ತು ಚಂದನದ ಪುಡಿ ಬೇರಸಿ ನೀರಿನಿಂದ ತಲೆ ಕೂದಲು ತೊಳೆದುಕೊಳ್ಳಿ ಇದರಿಂದ ಕೂದಲು ಸೊಂಪಾಗಿ ಬೆಳೆಯುವಲ್ಲದೆ, ಸುಗಂಧ ಭರಿತ ವಾಸನೆ ಬರುತ್ತದೆ.

* ಕಡಲೆಹಿಟ್ಟು ಮತ್ತು ಹೆಸರುಹಿಟ್ಟು, ಮೆಂತ್ಯೆ (ರುಬ್ಬಿ) ಹಿಟ್ಟು ತಯಾರಿಸಿ ಇಟ್ಟುಕೊಳ್ಳಬೇಕು. ಈ ಹಿಟ್ಟನ್ನು ಎಲ್ಲಾ ಋತುವಿನಲ್ಲಿ ತಲೆಗೆ ಉಪಯೋಗಿಸಿಕೊಳ್ಳಿ.

* ತಲೆಹೊಟ್ಟನ್ನು ನಿವಾರಣೆಗೆ ಮೊಸರು ಸ್ವಲ್ಪ ಬಾದಾಮಿ ಎಣ್ಣೆ ಮತ್ತು ನಿಂಬೆರಸ ಇವೆಲ್ಲವೂ ಬೇರೆಸಿ ತಲೆಯ ಕೂದಲಿನ ಬೂಡಕ್ಕೆ ಹಚ್ಚಿಕೊಳ್ಳುವುದರಿಂದ ತಲೆ ಕೂದಲು ಬೆಳೆಯುದಲ್ಲದೆ ಕೂದಲ ಬೂಡಕ್ಕೆ ಮಾಯಿಶ್ಚರೈಸರ್‌ ಆಗಿ ಕೆಲಸ ಮಾಡುತ್ತದೆ.

* ನಿಂಬೆರಸ ಮತ್ತು ತೆಂಗಿನ ಎಣ್ಣೆಯ ತಲೆಬುರುಡೆಗೆ ಮಾಯಿಶ್ಚರೈಸರ್‌ ಕೆಲಸ ಮಾಡುತ್ತದೆ. ಇದಲ್ಲದೆ ನೈಸರ್ಗಿಕವಾಗಿ ತಲೆಹೊಟ್ಟು ನಿವಾರಣೆ ಮಾಡುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ. ಚಳಿಗಾಲಕ್ಕೆ ತುಂಬಾ ಸಹಕಾರಿ.

* ಕೂದಲಿಗೆ ಪೇರಳೆಹಣ್ಣು ಅಥವಾ ಸೇಬುಹಣ್ಣು ಮಾತ್ರವಲ್ಲದೆ ಅದರ ಎಲೆಗಳೂ ಕೂಡಾ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಪೇರಳೆಯಲ್ಲಿರುವ ವಿಟಮೀನ್‌ ಬಿ2, ವಿಟಮೀನ್‌ ಬಿ3, ಅಂಶಗಳು ದೊರೆಯುತ್ತದೆ. ತಲೆ ಕೂಡಲು ಉದುರುವುದನ್ನು ತಡೆಗಟ್ಟಬಹುದು.

* ಸೀಗೆಕಾಯಪುಡಿ 2 ದೊಡ್ಡ ಚಮಚಕ್ಕೆ, ಬೆಟ್ಟದ ನೆಲ್ಲಿಕಾಯಿಪುಡಿ ಒಂದು ದೊಡ್ಡ ಚಮಚ, ತುಳಿಸಿ ಎಲೆಪುಡಿ ಒಂದು ಚಮಚ ಬೆರೆಸಿ ಕೂದಲು ತೊಳೆಯಲು ಬಳಸಬಹುದು. ಇದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

* ದಾಸವಾಳ ಹೂವನ್ನು ನೆನಸಿ ರುಬ್ಬಿ ಅದಕ್ಕೆ ಅಂಟುವಾಳ ಕಾಯಿಯನ್ನು ರಸವನ್ನು ಹಾಕಿ ಅದರ ಜೊತೆ ಮೆಂತೆಪುಡಿ ಒಂದು ಚಮಚ ಬೆರೆಸಿ ಹಚ್ಚಿ ಕೂದಲನ್ನು ತೊಳೆದುಕೊಳ್ಳಿ.

* ಬಾದಾಮಿ ಎಣ್ಣೆ ಮತ್ತು ಆಲಿವ್‌ ಎಣ್ಣೆಯ ಮಿಶ್ರಣವನ್ನು ಕೂದಲಿನ ಬುಡಕ್ಕೆ ಲೇಪಿಸಿ. ಈ ಮಿಶ್ರಣವನ್ನೂ ವಾರಕ್ಕೊಮ್ಮೆ ಬಳಸುತ್ತಿದ್ದರೆ ಅದೂ ತಲೆಹೊಟ್ಟನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತದೆ.

* ಮೊಸರು, ಮೊಟ್ಟೆ ಮತ್ತು ಬಾಳೆ ಪ್ಯಾಕ್‌ ಬಳಸಿ. ಅದು ಇದು ತೇವವನ್ನೂ ಕಾಪಾಡುವ ಶಕ್ತಿಯನ್ನು ಹೊಂದಿದೆ. ಇದಲ್ಲದೆ ಕೂದಲು ಸೊಂಪಾಗಿ ಬೆಳೆಯುತ್ತವೆ.

ಆಕಾಶ್‌ ಲೋಖಂಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT