ವಿಶ್ವಸಂಸ್ಥೆಯ ಸಹಾಯಕ ಮಹಾಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಪುರಿ

‘ಲಿಂಗ ತಾರತಮ್ಯ ನಿವಾರಣೆ: ಭಾರತಕ್ಕೆ ಸವಾಲು’

‘ಲಿಂಗ ತಾರತಮ್ಯ ನಿವಾರಿಸುವಲ್ಲಿ ಭಾರತ ಭಾರಿ ದೊಡ್ಡ ಸವಾಲು ಎದುರಿಸುತ್ತಿದೆ’ ಎಂದು ವಿಶ್ವಸಂಸ್ಥೆಯ ಸಹಾಯಕ  ಮಹಾಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಪುರಿ ತಿಳಿಸಿದ್ದಾರೆ.

ಲಕ್ಷ್ಮಿ ಪುರಿ

ವಾಷಿಂಗ್ಟನ್‌: ‘ಲಿಂಗ ತಾರತಮ್ಯ ನಿವಾರಿಸುವಲ್ಲಿ ಭಾರತ ಭಾರಿ ದೊಡ್ಡ ಸವಾಲು ಎದುರಿಸುತ್ತಿದೆ’ ಎಂದು ವಿಶ್ವಸಂಸ್ಥೆಯ ಸಹಾಯಕ  ಮಹಾಪ್ರಧಾನ ಕಾರ್ಯದರ್ಶಿ ಲಕ್ಷ್ಮಿ ಪುರಿ ತಿಳಿಸಿದ್ದಾರೆ.

‘ಸರ್ಕಾರಗಳು ಮಹಿಳೆಯರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿವೆ. ವಿಶೇಷ ಯೋಜನೆಗಳನ್ನು ಸಹ ರೂಪಿಸಿವೆ. ಆದರೂ ಇನ್ನೂ ಪೂರ್ಣಪ್ರಮಾಣದಲ್ಲಿ ಮಹಿಳೆಯರ ಸಬಲೀಕರಣವಾಗುತ್ತಿಲ್ಲ. ಹೀಗಾಗಿ, ಇನ್ನೂ ಹೆಚ್ಚಿನ ಗಮನ ನೀಡಬೇಕಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಅಗತ್ಯವಿದೆ ಮತ್ತು ಪೊಲೀಸರಿಗೆ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತರಬೇತಿ ನೀಡಬೇಕಾಗಿದೆ’ ಎಂದು ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಂದು ಯೋಜನೆಯಲ್ಲೂ ಮಹಿಳೆಯರಿಗೆ ಆದ್ಯತೆ ನೀಡುತ್ತಿದ್ದಾರೆ. ಹೊಸ ಯೋಜನೆಗಳನ್ನು ಸಹ ರೂಪಿಸಿದ್ದಾರೆ. ಮಹಿಳೆಯರ ಪರ ರೂಪಿಸಿರುವ ಯೋಜನೆಗಳು ಹೆಚ್ಚು ವೇಗ ಪಡೆದುಕೊಳ್ಳುವ ಮೂಲಕ ಎಲ್ಲ ವರ್ಗದ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಸೇರಬೇಕಾಗಿದೆ’ ಎಂದು ವಿವರಿಸಿದ್ದಾರೆ.

‘ನಗರ ಪ್ರದೇಶದಲ್ಲಿ ಮಹಿಳೆಯರು ವಿವಿಧ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದೇ ರೀತಿ, ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ವಿಭಿನ್ನ ರೀತಿಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಅತಿ ಬಡವರು ಇನ್ನೂ ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ತುರ್ತು ಅಗತ್ಯವಿದೆ’ ಎಂದು ಹೇಳಿದ್ದಾರೆ.

2013ರಿಂದ ವಿಶ್ವಸಂಸ್ಥೆಯ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿರುವ ಲಕ್ಷ್ಮಿ ಪುರಿ ಅವರು, ಈಗ ಹುದ್ದೆಯನ್ನು ತೊರೆಯುತ್ತಿದ್ದಾರೆ. ಇವರ ಪತಿ ಹರದೀಪ್‌ ಪುರಿ ಕೇಂದ್ರ ಸಚಿವ ಸಂಪುಟದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ರಾಜ್ಯ ಖಾತೆ ಸಚಿವರಾಗಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಇಸ್ಲಾಮಾಬಾದ್‌
ಪಾಕ್‌ ದಿನಾಚರಣೆಯಲ್ಲಿ ಭಾರತದ ಅಧಿಕಾರಿಗಳು ಭಾಗಿ

ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಪಾಕಿಸ್ತಾನ ದಿನಾಚರಣೆಯಲ್ಲಿ ಇದೇ ಪ್ರಥಮ ಬಾರಿಗೆ ಭಾರತೀಯ ಸೇನೆಯ ಅಧಿಕಾರಿಗಳು ಮತ್ತು ರಾಜತಾಂತ್ರಿಕರು ಪಾಲ್ಗೊಂಡಿದ್ದರು.

24 Mar, 2018
ಅಮೆರಿಕ ವಿರುದ್ಧ ಚೀನಾ ಪ್ರತೀಕಾರ

ಬೀಜಿಂಗ್‌
ಅಮೆರಿಕ ವಿರುದ್ಧ ಚೀನಾ ಪ್ರತೀಕಾರ

24 Mar, 2018
ದೆಹಲಿ–ಟೆಲ್ ಅವಿವ್‌ ನೇರ ವಿಮಾನಯಾನ

ಟೆಲ್ ಅವಿವ್
ದೆಹಲಿ–ಟೆಲ್ ಅವಿವ್‌ ನೇರ ವಿಮಾನಯಾನ

24 Mar, 2018
‘457 ವೀಸಾ’ ರದ್ದು

ಮೆಲ್ಬರ್ನ್‌
‘457 ವೀಸಾ’ ರದ್ದು

24 Mar, 2018
ಟ್ರಂಪ್‌ ಜತೆ ಪ್ರೀತಿಯಾಗಿತ್ತು: ಲೈಂಗಿಕ ಸಂಪರ್ಕದ ವಿವರ ಬಿಚ್ಚಿಟ್ಟ ಮಾಜಿ ರೂಪದರ್ಶಿ

ಪ್ಲೇಬಾಯ್‌ ರೂಪದರ್ಶಿ
ಟ್ರಂಪ್‌ ಜತೆ ಪ್ರೀತಿಯಾಗಿತ್ತು: ಲೈಂಗಿಕ ಸಂಪರ್ಕದ ವಿವರ ಬಿಚ್ಚಿಟ್ಟ ಮಾಜಿ ರೂಪದರ್ಶಿ

23 Mar, 2018