ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾದ ಸಿನಾಬಂಗ್‌ ಪರ್ವತದಲ್ಲಿ ಜ್ವಾಲಾಮುಖಿ

Last Updated 29 ಡಿಸೆಂಬರ್ 2017, 20:23 IST
ಅಕ್ಷರ ಗಾತ್ರ

ಜಕಾರ್ತಾ: ಇಂಡೊನೇಷ್ಯಾದ ಸಿನಾಬಂಗ್‌ ಪರ್ವತದಲ್ಲಿ ಜ್ವಾಲಾಮುಖಿ ಸಂಭವಿಸಿದ್ದು, ಇದು ಈ ವರ್ಷದ ಅತಿದೊಡ್ಡ ಸ್ಫೋಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜ್ವಾಲಾಮುಖಿಯ ಪರಿಣಾಮ ಆಕಾಶದಲ್ಲಿ ದಟ್ಟ ಹೊಗೆ ಮತ್ತು ಬೂದಿ ಹೊರಹೊಮ್ಮುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹಲವು ವರ್ಷಗಳ ಬಳಿಕ 2010ರಲ್ಲಿ ಜ್ವಾಲಾಮುಖಿ ಸಂಭವಿಸಿತ್ತು. 2015ರಿಂದ ನಿರಂತರವಾಗಿ ಜ್ವಾಲಾಮುಖಿ ಸಂಭವಿಸುತ್ತಿರುವ ಕಾರಣ 3 ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.

ಪರ್ವತದಿಂದ ಚಿಮ್ಮುತ್ತಿರುವ ದಟ್ಟ ಹೊಗೆ ಮತ್ತು ಬೂದಿಯಿಂದಾಗಿ ಸುಮಾತ್ರ ದ್ವೀಪದ ಸಾವಿರಾರು ಜನರು ತೊಂದರೆಗೆ ಸಿಲುಕಿದ್ದಾರೆ. ಆದರೆ, ಯಾರೂ ಗಾಯಗೊಂಡಿಲ್ಲ. ಬೆಳೆಗಳಿಗೆ ಹಾನಿಯಾಗಿದೆ ಎಂದು ವಿಪತ್ತು ನಿರ್ವಹಣಾ ಏಜೆನ್ಸಿಯ ಮುಖ್ಯಸ್ಥ ನಾತಾ ನೈಲ್‌ ತಿಳಿಸಿದ್ದಾರೆ.

2014ರ ಫೆಬ್ರುವರಿಯಲ್ಲಿ ಸಂಭವಿಸಿದ್ದ ಜ್ವಾಲಾಮುಖಿಗೆ 16 ಜನರು ಬಲಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT