ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ರೈತರ ಮುತ್ತಿಗೆ

Last Updated 30 ಡಿಸೆಂಬರ್ 2017, 5:42 IST
ಅಕ್ಷರ ಗಾತ್ರ

ಮುದಗಲ್: ರಾಂಪುರ ಏತನೀರಾವರಿ ಅಚ್ಚುಕಟ್ಟು ಪ್ರದೇಶ ರೈತರು ಕೆಬಿಜೆಎಲ್ ಎಇಇ ಹರ್ಷ ಅವರಿಗೆ ರಾಂಪುರ ಕ್ರಾಸ್ ಬಳಿ ಗುರುವಾರ ಮುತ್ತಿಗೆ ಹಾಕಿ ಸಮರ್ಪಕವಾಗಿ ನೀರು ಬಿಡುವಂತೆ ಒತ್ತಾಯಿಸಿದರು.

‘ವಾರ ಬಂದಿ ಮೇಲೆ ನೀರು ಬಿಡುತ್ತಿದ್ದು, ಕಾಲುವೆಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ. ಇದರಿಂದ ಬಿತ್ತಿದ ಬೆಳೆಗೆ ನೀರು ಇಲ್ಲದೆ ಬೆಳೆ ಹಾಳಾಗುವ ಹಂತದಲ್ಲಿವೆ. ವಾರಬಂದಿಯಲ್ಲಿ ಒಂದೇ ಮೋಟರ್ ಚಲಾವಣೆ ಮಾಡುತ್ತಿದ್ದಾರೆ. ಇದರಿಂದ ನೀರಿನ ಕೊರತೆಯಾಗುತ್ತಿದೆ. ಸಮರ್ಪಕವಾಗಿ ನೀರು ಬಿಡಬೇಕು’ ಎಂದು ಒತ್ತಾಯಿಸಿದರು.

ಶಾಸಕ ಮಾನಪ್ಪ ವಜ್ಜಲ ಎರಡು ದಿನ ಕಾಲುವೆ ನೀರು ಹರಿಸಿಎಂದು ಎಇಇ ಅವರಿಗೆ ಸೂಚಿಸಿದರು. ವೀರನಗೌಡ ಲಕ್ಕಿಹಾಳ, ಗಿರಿಮಲ್ಲನಗೌಡ, ಬಸನಗೌಡ ಕಂಬಳಿ, ಯಂಕನಗೌಡ ಐದನಾಳ, ನಿಂಗನಗೌಡ ಪಾಟೀಲ, ಶಿವನಗೌಡ ಪಾಟೀಲ, ಶಂಕ್ರಪ್ಪ ಆಶಿಹಾಳ, ರುದ್ರಗೌಡ, ಗಂಗಾಧರ ಮಾಸ್ತರ, ಬಸನಗೌಡ ಮೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT