ತುಮಕೂರು

ನಕಲಿ ಮತದಾರರ ಹೆಸರು ತೆಗೆಯಲು ಒತ್ತಾಯ

ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ನಕಲಿ ಮತದಾರರ ಹೆಸರು ತೆಗೆದು ಹಾಕಬೇಕು. ಲೋಪ, ದೋಷಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಬಿಜೆಪಿ ನಗರ ಘಟಕವು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ತುಮಕೂರು: ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ನಕಲಿ ಮತದಾರರ ಹೆಸರು ತೆಗೆದು ಹಾಕಬೇಕು. ಲೋಪ, ದೋಷಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಬಿಜೆಪಿ ನಗರ ಘಟಕವು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ತುಮಕೂರು ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಿಗೆ ಆಮಿಷ ತೋರಿಸುತ್ತಿರುವವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಗೋವಿಂದರಾಜು ಅವರು ನಗರದ ಅಸಂಘಟಿತ ಕಾರ್ಮಿಕರನ್ನು, ಅನಕ್ಷರಸ್ಥರನ್ನು, ಬಡವರನ್ನು, ಕೊಳಚೆ ಪ್ರದೇಶದ ನಿವಾಸಿಗಳನ್ನು, ಅದರಲ್ಲೂ ಮಹಿಳಾ ಮತದಾರರನ್ನು ಬಸ್‌ಗಳಿಗೆ ದೇವಸ್ಥಾನಗಳಿಗೆ ಕರೆದುಕೊಂಡು ಆಮಿಷವೊಡ್ಡಿದ್ದಾರೆ. ಹೆತ್ತೇನಹಳ್ಳಿ ಮಾರಮ್ಮ, ಶೂಲದ ಆಂಜನೇಯಸ್ವಾಮಿ ದೇವಸ್ಥಾನ, ದೇವರಾಯನದುರ್ಗ, ಲಕ್ಷ್ಮಿನರಸಿಂಹಸ್ವಾಮಿ ದೇವಾಲಯಗಳಿಗೆ ಕರೆದುಕೊಂಡು ಹೋಗಿದ್ದರು. ₹ 1ರಿಂದ 2 ಸಾವಿರ ಹಣ ಕೊಟ್ಟಿದ್ದಾರೆ ಎಂದು ಆಪಾದಿಸಿದರು.

’ಸಿಂಗಂದೂರು ಚೌಡೇಶ್ವರಿ ಪೋಟೊ ನೀಡಿ ನನಗೆ ಮತ ಹಾಕಬೇಕೆಂದು ಹಾಗೂ ತಾಳಿಯ ಮೇಲೆ, ಮಕ್ಕಳ ಮೇಲೆ ಆಣೆ ಪ್ರಮಾಣ ಮಾಡಿಸಿದ್ದಾರೆ. ಇದು ಸಂವಿಧಾನ ವಿರೋಧಿಯಾದುದು. ಇವರು ವಿರುದ್ಧ ಕ್ರಮ ಜರುಗಿಸಬೇಕು, ಇವರಿಗೆ ಸಹಕರಿಸುತ್ತಿರುವ ಕೆಲ ಏಜೆಂಟರಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯ ಮಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಜ್ಯೋತಿ ಗಣೇಶ್, ನಗರ ಮಂಡಲ ಅಧ್ಯಕ್ಷ ಸಿ.ಎನ್.ರಮೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವೀಶ್, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಡೆಲ್ಟಾ ರವಿಕುಮಾರ್, ಪಾಲಿಕೆ ಸದಸ್ಯ ಕರುಣಾರಾಧ್ಯ, ಇಂದ್ರಕುಮಾರ್, ನಗರಸಭಾ ಮಾಜಿ ಸದಸ್ಯ ಡಿ.ಆರ್.ಬಸವರಾಜು, ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಗುಬ್ಬಿ
ಗುಬ್ಬಿ: ಬಾಜಾ ಬಜಂತ್ರಿ ಇಲ್ಲದೆ ನಾಮಪತ್ರ ಸಲ್ಲಿಕೆ

ಗುಬ್ಬಿ ವಿಧಾನ ಸಭಾ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳು ಬಾಜಾ ಬಜಂತ್ರಿ ಇಲ್ಲದೆ ಗುರುವಾರ ನಾಮಪತ್ರ ಸಲ್ಲಿಸಿದರು.

20 Apr, 2018

ತುಮಕೂರು
ಒಳಪೆಟ್ಟಿನ ರಾಜಕೀಯ; ಎಲ್ಲರಲ್ಲೂ ಭಯ

ಬಂಡಾಯ, ಹೆಚ್ಚಿದ ಸ್ಪರ್ಧಾಂಕ್ಷಿಗಳು,‌ ಪಕ್ಷೇತರರು, ಒಳ ಒಪ್ಪಂದದ ವಿಷಯಗಳು ಈ ಸಲ ಚುನಾವಣೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಿವೆ.

20 Apr, 2018

ತುಮಕೂರು
ಮಾದಿಗರ ಕಡೆಗಣಿಸಿದ ಕಾಂಗ್ರೆಸ್; ದಸಂಸ ಅಸಮಾಧಾನ

ಕಾಂಗ್ರೆಸ್‌ ಪ್ರಕಟಿಸಿರುವ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾವ ಕ್ಷೇತ್ರದಿಂದಲೂ ಮಾದಿಗ ಸಮುದಾಯದವರಿಗೆ ಟಿಕೆಟ್ ನೀಡಿಲ್ಲ. ಇದನ್ನು ದಲಿತ ಸಂಘರ್ಷ ಸಮಿತಿ...

19 Apr, 2018
ನಮ್ಮ ಮತ ಮಾರಾಟಕ್ಕಿಲ್ಲ: ಜಾಗೃತಿ ಅಭಿಯಾನ

ಜನಜಾಗೃತಿ
ನಮ್ಮ ಮತ ಮಾರಾಟಕ್ಕಿಲ್ಲ: ಜಾಗೃತಿ ಅಭಿಯಾನ

19 Apr, 2018

ತುಮಕೂರು
ಹೆದ್ದಾರಿಯಲ್ಲಿ ಬಿದ್ದ ಕಂತೆ ಕಂತೆ ನೋಟು; ವಿಡಿಯೊ ವೈರಲ್

ಜಿಲ್ಲೆಯ ಕುಣಿಗಲ್ ಆಲಪ್ಪನ ಗುಡ್ಡೆ ಬಳಿ ರಾಷ್ಟ್ರೀಯ ಹೆದ್ದಾರಿ 48ರ ರಸ್ತೆ ವಿಭಜಕದಲ್ಲಿ ₹ 100, 500 ಮುಖ ಬೆಲೆಯ ಕಂತೆ ಕಂತೆ ನೋಟುಗಳನ್ನು...

19 Apr, 2018