ವಿಜಯಪುರ

ರಸಗೊಬ್ಬರ ಖರೀದಿಗೆ ಆಧಾರ್ ಕಡ್ಡಾಯ

ಚಿಲ್ಲರೆ ಮಾರಾಟಗಾರರು ತಮ್ಮಲ್ಲಿರುವ ಸಹಾಯ ಧನ ನೀಡಲ್ಪಡುವ ರಸಗೊಬ್ಬರಗಳನ್ನು ಈ ಉಪಕರಣದ ಮೂಲಕವೇ ಕಡ್ಡಾಯವಾಗಿ ಮಾರಾಟ ಮಾಡಬೇಕು ಎಂದು ಸೂಚಿಸಲಾಗಿದೆ.

ವಿಜಯಪುರ: ಕೇಂದ್ರ ಸರ್ಕಾರ ರಸಗೊಬ್ಬರಗಳ ಮಾರಾಟದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ, ರೈತ ಫಲಾನುಭವಿಗೆ ರಸಗೊಬ್ಬರ ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು, ನೇರ ನೆರವು ವರ್ಗಾವಣೆ (ಡೈರೆಕ್ಟ್‌ ಬೆನಿಫಿಟ್ ಟ್ರಾನ್ಸ್‌ಫರ್ ಡಿ.ಬಿ.ಟಿ) ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸುತ್ತಿದ್ದು, ರಾಜ್ಯದಲ್ಲಿ ಜ 1ರಿಂದ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.

ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ 304 ಚಿಲ್ಲರೆ ಮಾರಾಟಗಾರರಿಗೆ (ಪಾಯಿಂಟ್‌ ಆಫ್ ಸೇಲ್ - ಪಿ.ಓ.ಎಸ್) ಉಪಕರಣ ವಿತರಿಸಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆ ತಿಳಿಸಿದೆ.

ಚಿಲ್ಲರೆ ಮಾರಾಟಗಾರರು ತಮ್ಮಲ್ಲಿರುವ ಸಹಾಯ ಧನ ನೀಡಲ್ಪಡುವ ರಸಗೊಬ್ಬರಗಳನ್ನು ಈ ಉಪಕರಣದ ಮೂಲಕವೇ ಕಡ್ಡಾಯವಾಗಿ ಮಾರಾಟ ಮಾಡಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ಪಿ.ಓ.ಎಸ್ ಬಳಸದೆ ಮಾರಾಟ ಮಾಡಿದರೆ, ಅಂತಹ ಮಾರಾಟಗಾರರ ರಸಗೊಬ್ಬರ ಮಾರಾಟ ಪರವಾನಗಿಯನ್ನು ಯಾವುದೇ ನೋಟೀಸ್ ನೀಡದೇ ರದ್ದುಗೊಳಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಇಲಾಖೆ ಎಚ್ಚರಿಸಿದೆ.

ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಎಂ.ಎಫ್.ಎಂ.ಎಸ್, ಐಡಿ ಪಡೆದು, ಪಿ.ಓ.ಎಸ್ ಉಪಕರಣದಲ್ಲಿ ಹಾಲಿ ಇರುವ ದಾಸ್ತಾನನ್ನು ಕೃಷಿ ಇಲಾಖೆಯಿಂದ ದಾಖಲಿಸಿ, ಕಡ್ಡಾಯವಾಗಿ ಪಿ.ಓ.ಎಸ್ ಉಪಕರಣದ ಮುಖಾಂತರವೇ ರಸಗೊಬ್ಬರ ವಿತರಿಸಲು ಎಚ್ಚರಿಕೆ ನೀಡಲಾಗಿದೆ. ಇಲ್ಲದಿದ್ದರೆ ರಸಗೊಬ್ಬರ ನಿಯಂತ್ರಣ ಕಾಯ್ದೆಯನ್ವಯ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ರಸಗೊಬ್ಬರಗಳ ಒಟ್ಟು ಬೆಲೆ ನೀಡಿ ಖರೀದಿಸಲು ರೈತರಿಗೆ ದುಬಾರಿಯಾಗುತ್ತದೆ ಎಂಬ ಕಾರಣದಿಂದ ರೈತರು ಸಬ್ಸಿಡಿ ದರದಲ್ಲಿಯೇ ಮಾರಾಟ ಬೆಲೆ (ಎಂ.ಆರ್.ಪಿ) ಪಾವತಿಸಿ ಖರೀದಿಸಲು ಅನುವು ಮಾಡಿಕೊಡಲಾಗಿದೆ. ಪಿ.ಓ.ಎಸ್ ಯಂತ್ರದಲ್ಲಿ ದಾಖಲಾದ ರಸಗೊಬ್ಬರದ ಚಿಲ್ಲರೆ ಮಾರಾಟದ ಅಂಕಿ ಅಂಶ ಆಧರಿಸಿ, ಕಂಪೆನಿಗಳಿಗೆ ಸಬ್ಸಿಡಿ ವರ್ಗಾಯಿಸಲಾಗುತ್ತದೆ. ರಸಗೊಬ್ಬರಗಳನ್ನು ಪಿ.ಓ.ಎಸ್ ಉಪಕರಣದ ಮುಖಾಂತರ ಖರೀದಿಸಲು ರೈತರು ಕಡ್ಡಾಯವಾಗಿ ತಮ್ಮ ಆಧಾರ್ ಸಂಖ್ಯೆ ನೀಡಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ವಿಜಯಪುರ
ಕೊನೆ ಕ್ಷಣದಲ್ಲಿ ಬೆಳ್ಳುಬ್ಬಿಗೆ ಮನ್ನಣೆ

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ, ನಿಗೂಢವಾದ ನಡೆಯನ್ನು ನಾಮಪತ್ರ ಸಲ್ಲಿಕೆಯ ಅಂತಿಮ ದಿನದ ಮುನ್ನಾ ದಿನವಾದ ಸೋಮವಾರ, ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ...

24 Apr, 2018

ವಿಜಯಪುರ
ಅಪ್ಪು, ಬೆಳ್ಳುಬ್ಬಿ ವಿರುದ್ಧದ ಪೋಸ್ಟ್‌ಗಳು ವೈರಲ್‌

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆ ಪೂರ್ಣಗೊಳ್ಳುವ ಮುನ್ನವೇ, ವಿಜಯಪುರ ನಗರ ಕ್ಷೇತ್ರದ ಚುನಾವಣಾ ಅಖಾಡದಲ್ಲಿನ ಕೆಸರೆರಚಾಟ ತಾರಕಕ್ಕೇರಿದೆ.

24 Apr, 2018
ಬಲ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಕೆ

ವಿಜಯಪುರ
ಬಲ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಕೆ

24 Apr, 2018
ಮಾವಿನ ಕೊರತೆ; ಗಗನಕ್ಕೇರಿದ ಬೆಲೆ

ವಿಜಯಪುರ
ಮಾವಿನ ಕೊರತೆ; ಗಗನಕ್ಕೇರಿದ ಬೆಲೆ

23 Apr, 2018
ಸಂರಕ್ಷಣೆಗೆ ‘ಸಾಕ್ಷ್ಯಚಿತ್ರ’ದ ಬೆಂಬಲ; ಶಿಫಾರಸು

ಆಲಮಟ್ಟಿ
ಸಂರಕ್ಷಣೆಗೆ ‘ಸಾಕ್ಷ್ಯಚಿತ್ರ’ದ ಬೆಂಬಲ; ಶಿಫಾರಸು

23 Apr, 2018