ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಜಲಗಿ ಬಂದ್ ಯಶಸ್ವಿ

Last Updated 30 ಡಿಸೆಂಬರ್ 2017, 6:39 IST
ಅಕ್ಷರ ಗಾತ್ರ

ಗೋಕಾಕ: ಕೌಜಲಗಿ ಹೋಬಳಿಯನ್ನು ಗೋಕಾಕ ತಾಲ್ಲೂಕಿನಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿ ನಿಯೋಜಿತ ಕೌಜಲಗಿ ತಾಲ್ಲೂಕು ರಚನಾ ಹೋರಾಟ ಸಮಿತಿ ಕರೆ ನೀಡಿದ್ದ ಕೌಜಲಗಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಅಂಗಡಿ, ಶಾಲಾ, ಕಾಲೇಜು ಬಂದ್‌ ಆಗಿದ್ದವು. ವಾಹನ ಸಂಚಾರ ಇರಲಿಲ್ಲ. ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ, ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಲಾಯಿತು.

ಬಂದ್ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಗ್ರಾಮದ ವಿವಿಧ ರಸ್ತೆಗಳಲ್ಲಿ ಸಂಚರಿಸಿತು. ನಂತರ ಗ್ರಾಮ ಪಂಚಾಯ್ತಿ ಮುಂದೆ ಬಹಿರಂಗ ಸಭೆ ನಡೆಯಿತು.

ನಿಯೋಜಿತ ಕೌಜಲಗಿ ತಾಲ್ಲೂಕು ರಚನಾ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಅಶೋಕ ಪರುಶೆಟ್ಟಿ, ಕೌಜಲಗಿ ಹೋಬಳಿಯ ವಿವಿಧ ಗ್ರಾಮಗಳ ಮುಖಂಡರಾದ ರಾಮಯ್ಯ ಮಠದ, ಎಸ್.ಬಿ.ಲೋಕಣ್ಣವರ, ಬಿ.ಜಿ.ಬಳಗಾರ, ಸುಭಾಸ ಕೌಜಲಗಿ, ಅಶೋಕ ಉದ್ದಪ್ಪನವರ, ಜಾಕೀರ ಜಮಾದಾರ ಹಾಗೂ ಭಾಗೋಜಿಕೊಪ್ಪದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೌಜಲಗಿ ತಾಲ್ಲೂಕು ಘೋಷಣೆಯ ಅವಶ್ಯಕತೆ ಮತ್ತು ಕೌಜಲಗಿ ಹೋಬಳಿಯನ್ನು ಗೋಕಾಕ ತಾಲ್ಲೂಕಿನಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಶಿವಲಿಂಗ ಬಳಗಾರ, ಲಕ್ಷ್ಮಣ ಚಂದರಗಿ, ಸಿದ್ದಪ್ಪ ಹಳ್ಳೂರ, ಮಹಾಂತಪ್ಪ ಶಿವನಮಾರಿ, ಮಾರುತಿ ಥರಕಾರ, ರಮಜಾನ ಪೋದಿ, ಕರೆಪ್ಪ ಬಿಸಗುಪ್ಪ, ಬಸಪ್ಪ ದಳವಾಯಿ, ನೀಲಪ್ಪ ಕೆವಟಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT