ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯ್ತಿಗಳ ಕರ ₹ 4.41 ಕೋಟಿ ಬಾಕಿ: ಬಸವನಗೌಡ

Last Updated 30 ಡಿಸೆಂಬರ್ 2017, 8:36 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನಲ್ಲಿ 61 ಗ್ರಾಮ ಪಂಚಾಯ್ತಿಗಳು ಕಾರ್ಯನಿರ್ವಹಿಸುತ್ತಿದ್ದು, 202 ಚಾರಕ್ ಹಾಗೂ 47 ಬೇಚಾರಕ್ ಗ್ರಾಮಗಳು ಸೇರಿ ಒಟ್ಟು 249 ಕಂದಾಯ ಗ್ರಾಮಗಳು ಇವೆ. 2016ನೇ ಸಾಲಿನಲ್ಲಿ 61 ಗ್ರಾಮ ಪಂಚಾಯ್ತಿಗಳಿಂದ ಒಟ್ಟು ₹ 4.37 ಕೋಟಿ ಕರ ವಸೂಲಿ ಮಾಡುವ ಗುರಿ ನೀಡಲಾಗಿದ್ದು, ಇದರಲ್ಲಿ ಕೇವಲ ₹ 1.59 ಕೋಟಿ ಮಾತ್ರ ಕರ ವಸೂಲಿಯಾಗಿದೆ. ಇನ್ನೂ ₹ 4.41 ಕೋಟಿ ಕರ ವಸೂಲಿಯನ್ನು ಬಾಕಿ ಉಳಿಸಿಕೊಂಡಿವೆ ಎಂದು ಜಿಲ್ಲಾ ಪಂಚಾಯ್ತಿ ಯೋಜನಾಧಿಕಾರಿ ಬಸವನಗೌಡ ತಿಳಿಸಿದರು.

ಶುಕ್ರವಾರ ತಾಲ್ಲೂಕು ಪಂಚಾಯ್ತಿ ಜಮಾಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾಲ್ಲೂಕಿನ 61 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಅಗತ್ಯ ಕುಡಿಯುವ ನೀರಿನ ವ್ಯವಸ್ಥೆಗಾಗಿ 296 ಕೊಳವೆಬಾವಿ ನೀರು ಸರಬರಾಜು ಯೋಜನೆಗಳು, 292 ಕಿರು ನೀರು ಸರಬರಾಜು ಯೋಜನೆಗಳು, 272 ಕೈ ಪಂಪ್‌, 4 ಬಹು ಗ್ರಾಮ ಕುಡಿಯುವ ನೀರು ಯೋಜನೆಗೆ 37 ಗ್ರಾಮಗಳು ಸೇರಿದ್ದು, 5 ತೆರೆದಬಾವಿಗಳು ಕಾರ್ಯನಿರ್ವಹಿಸುತ್ತಿವೆ.

ತಾಲ್ಲೂಕು ಪಂಚಾಯ್ತಿಗಳಿಗೆ ವಿವಿಧ ಯೋಜನೆ ಅಡಿ ಒಟ್ಟು ₹ 1.97 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ₹ 1.91 ಕೋಟಿ ಅನುದಾನವನ್ನು ಸದುಪಯೋಗಪಡಿಸಿಕೊಳ್ಳಲಾಗಿದೆ. ಶುಲ್ಕ ಯೋಜನೆಯಲ್ಲಿ ₹ 6.76 ಲಕ್ಷ ಹಣ ಮಾತ್ರ ಉಳಿಕೆಯಾಗಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿಯವರು ಹೆಚ್ಚಿನ ಪ್ರಮಾಣದಲ್ಲಿ ಕರ ವಸೂಲಿಯನ್ನು ಕಡ್ಡಾಯ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. 49 ಪಂಚಾಯ್ತಿಗಳಲ್ಲಿ ಅಭಿವೃದ್ಧಿ ಅಧಿ ಕಾರಿಗಳು ಇದ್ದು, ಇನ್ನು 12 ಹುದ್ದೆಗಳು ಖಾಲಿ ಇವೆ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಇ.ಆರ್. ಸುಜಾತಾ ಬಸವರಾಜ್, ಇಒ ಎಂ.ಆರ್. ಪ್ರಕಾಶ್, ಜಿಲ್ಲಾ ಪಂಚಾಯ್ತಿ ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಟಿ.ಎನ್. ಯೋಗಿ, ಕೆ.ಟಿ. ಕರಿಬಸಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT