ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಜ್ಜನದ ಸಿದ್ಧತೆಯಲ್ಲಿ ವರ್ಷ ಮುಕ್ತಾಯ

Last Updated 30 ಡಿಸೆಂಬರ್ 2017, 8:53 IST
ಅಕ್ಷರ ಗಾತ್ರ

ಹಾಸನ: 2017ಕ್ಕೆ ವಿದಾಯ ಹೇಳಿ 2018 ಅನ್ನು ಸ್ವಾಗತಿಸುತ್ತಿದ್ದೇವೆ. ಉರುಳಿ ಹೋದ ದಿನಗಳತ್ತ ಕಣ್ಣಾಡಿಸಿದರೆ ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವು ಸಿಹಿ–ಕಹಿ ಘಟನೆಗಳು, ಮಹತ್ವದ ರಾಜಕೀಯ ವಿದ್ಯಮಾನಗಳು ನಡೆದವು. 12 ತಿಂಗಳುಗಳನ್ನು ಬೀಳ್ಕೊಡುತ್ತಿರುವ ಈ ಹೊತ್ತಿನಲ್ಲಿ ಆ ಘಟನೆಗಳನ್ನು ನೆನೆಯುತ್ತ..

ಅನ್ನದಾತನ ಮೇಲೆ ಪ್ರಕೃತಿ ಮುನಿಸು ಮುಂದುವರಿದು ಐದನೇ ವರ್ಷವೂ ಬರ ಆವರಿಸಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಯಿತು. ಮಳೆ ಇಲ್ಲದೆ ಹೇಮಾವತಿ ಒಡಲು ತುಂಬಲೇ ಇಲ್ಲ. ಮುಂದಿನ ವರ್ಷ ನಡೆಯುವ ಬಾಹುಬಲಿ ಮಸ್ತಕಾಭಿಷೇಕ ಸಿದ್ಧತೆಯಲ್ಲಿಯೇ ವರ್ಷ ಮುಗಿಯಿತು.

ಯೋಧ ಸಂದೀಪ್‌ ಪ್ರಾಣ ತ್ಯಾಗ ಜನವರಿಯಲ್ಲಿ ಜಮ್ಮು- ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿ ದೇವಿಹಳ್ಳಿ ಗ್ರಾಮದ ಯೋಧ ಡಿ.ಪಿ.ಸಂದೀಪ್‌ ಕುಮಾರ್‌ (28) ಮೃತಪಟ್ಟರು. ಗಡಿ ನಿಯಂತ್ರಣ ರೇಖೆ ಬಳಿಯ ಬಂಡಿಪೋರಾ ಜಿಲ್ಲೆಯ ಗುರೆಜ್‌ ವಲಯದಲ್ಲಿ ಸೇನಾ ಶಿಬಿರದ ಮೇಲೆ ಭಾರಿ ಹಿಮ ಕುಸಿದು, ಹಿಮದಡಿ ಸಿಲುಕಿ ಸಂದೀಪ್‌ ಸೇರಿ ಹತ್ತು ಯೋಧರು ಸಾವಿಗೀಡಾಗಿದ್ದರು. ಏ. 22ಕ್ಕೆ ಸಂದೀಪ್‌ ಮದುವೆಯೂ ನಿಶ್ಚಯವಾಗಿತ್ತು.

ಬರ ಅಧ್ಯಯನ ತಂಡ ಕೇಂದ್ರ ಕೃಷಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀವಾಸ್ತವ, ಎನ್.ಐ.ಟಿ.ಐ. ಆಯೋಗದ ಸಂಶೋಧನಾಧಿಕಾರಿ ಅನುರಾಧಾ, ಕೇಂದ್ರ ಜಲಸಂಪನ್ಮೂಲ ಇಲಾಖೆ ಅಧೀಕ್ಷಕ ಎಂಜಿನಿಯರ್ ವಿ.ಮೋಹನ್ ಮುರುಳಿ ಅವರನ್ನೊಳಗೊಂಡ ಕೇಂದ್ರ ತಂಡ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿತು.

ಉದ್ಯೋಗ ಖಾತರಿ ಯೋಜನೆಯಡಿ ನಡೆಯುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿ, ಸುಳಿ ಬಿದ್ದಿದ್ದ ತೆಂಗಿನ ಮರಗಳನ್ನು ವೀಕ್ಷಿಸಿ ತೋಟಗಾರಿಕಾ ಇಲಾಖೆಗಳಿಂದ ಮಾಹಿತಿ ಪಡೆಯಿತು. ಪರಿಹಾರ ಮಾತ್ರ ಬಿಡುಗಡೆ ಆಗಲೇ ಇಲ್ಲ.

ಮಹಾಮಜ್ಜನಕ್ಕೆ ₹ 175 ಕೋಟಿ ಮಾ.16ರಂದು ರಾಜ್ಯ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ 2018ರ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ₹ 175 ಕೋಟಿ ಅನುದಾನ ನಿಗದಿ ಮಾಡಿತು. ಕ್ಷೇತ್ರದಲ್ಲಿ ಮಹೋತ್ಸವದ ಕಾಮಗಾರಿಗಳು ಭರದಿಂದ ಸಾಗಿವೆ. ಡೋಲಿ ಹೊರುವವರಿಗೆ 400 ವಿಶೇಷ ಮೆಟ್ಟಿಲು ನಿರ್ಮಾಣ, ಜರ್ಮನ್ ತಂತ್ರಜ್ಞಾನದ ಅಟ್ಟಣಿಗೆ, 12 ಉಪನಗರಗಳ ನಿರ್ಮಾಣ ಸೇರಿದಂತೆ ಹಲವು ಕೆಲಸಗಳು ತ್ವರಿತಗತಿಯಲ್ಲಿ ಸಾಗುತ್ತಿವೆ.

ಗುಳ್ಳುಕಾಯಜ್ಜಿಯ ಅಭಿಷೇಕ ನೆನಪಿಸುವ ಲಾಂಛನ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಲಾಂಛನ ಅನಾವರಣಗೊಂಡಿದ್ದು, ಐತಿಹಾಸಿಕ ಹಿನ್ನೆಲೆಯೊಂದಿಗೆ ಗಮನ ಸೆಳೆದಿದೆ. ಲಾಂಛನದಲ್ಲಿ ಗುಳ್ಳುಕಾಯಜ್ಜಿಯು ಬಾಹುಬಲಿ ಮೂರ್ತಿಗೆ ಅಭಿಷೇಕ ಮಾಡುವ 10ನೇ ಶತಮಾನದ ಸಂದರ್ಭವನ್ನು ಚಿತ್ರಿಸಲಾಗಿದೆ. ಲಾಂಛನವು ಕ್ರಮವಾಗಿ ವಿಶ್ವ, ಭಾರತ, ಕರ್ನಾಟಕ ಮತ್ತು ಹಾಸನ ಜಿಲ್ಲೆಯ ನಕ್ಷೆಗಳನ್ನು ಒಳಗೊಂಡಿದೆ. ಲಾಂಛನದ ಎರಡೂ ಬದಿಗಳಲ್ಲಿ ಆನೆ ಚಿತ್ರವಿದೆ. ‘ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ’ ಸಂದೇಶವಿದೆ. ಹಾಸನದ ಕಲಾವಿದ ಶಂಕರಪ್ಪ ರಚಿಸಿದ್ದಾರೆ.

10ನೇ ಶತಮಾನದಲ್ಲಿ ಗಂಗರ ದಂಡನಾಯಕ ಚಾವುಂಡರಾಯರು ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ಮಾಡುವ ಸಂದರ್ಭದಲ್ಲಿ ಅಭಿಷೇಕ ಅಪೂರ್ಣವಾಯಿತು. ಈ ಸಮಯದಲ್ಲಿ ಕ್ಷೇತ್ರದ ಅಧಿದೇವತೆಯಾದ ಕುಷ್ಮಾಂಡಿನಿಯು ಗುಳ್ಳುಕಾಯಜ್ಜಿಯ ರೂಪದಲ್ಲಿ ಬಂದು ಭಕ್ತಿಯಿಂದ ಅಭಿಷೇಕ ಮಾಡುತ್ತಾರೆ. ಆಗ ಕ್ಷೀರವು ಅಕ್ಷಯವಾಗಿ ಹೊಳೆಯಂತೆ ಹರಿಯಿತು.

ಎರಡು ದಶಕಗಳ ಕನಸು ನನಸು ಯಶವಂತಪುರ–ಹಾಸನ ರೈಲು ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳುವ ಮೂಲಕ ಎರಡು ದಶಕಗಳ ಕನಸು ನನಸಾಯಿತು. ಮಾ. 26ರಂದು ಬೆಳಿಗ್ಗೆ 11.30ಕ್ಕೆ ಯಶವಂತಪುರದಿಂದ ಹೊರಟ ರೈಲು ಮಧ್ಯಾಹ್ನ 3.15ಕ್ಕೆ ಶ್ರವಣಬೆಳಗೊಳ ತಲುಪಿತು. ರೈಲು ಓಡಾಟದಿಂದ ಮುಂದಿನ ವರ್ಷ ನಡೆಯಲಿರುವ ಬಾಹುಬಲಿ ಮಹಾಮಸ್ತಕಾಭೀಷೇಕಕ್ಕೆ ಹೆಚ್ಚು ಮಂದಿ ಭೇಟಿ ನೀಡಲು ಅನುಕೂಲವಾಗುತ್ತದೆ. ಜತೆಗೆ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ.

ಗೌಡರ 3ನೇ ತಲೆಮಾರು ರಾಜಕೀಯವಾಗಿ ಭಾರಿ ಮಹತ್ವಾಕಾಂಕ್ಷಿಯಾಗಿರುವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಅಧಿಕೃತವಾಗಿ ರಾಜಕೀಯ ಆರಂಭಿಸಿದ್ದಾರೆ. ನ. 27ರಂದು ಜೆಡಿಎಸ್‌ ಪ್ರಧಾನ ಕಾರ್ಯದರ್ಶಿಯಾಗಿ ಪ್ರಜ್ವಲ್‌ ಅವರನ್ನು ನೇಮಕ ಮಾಡಲಾಯಿತು. ಇದರೊಂದಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದ ಮೂರನೇ ತಲೆಮಾರು ಕೂಡ ರಾಜಕೀಯದಲ್ಲಿ ಸಕ್ರಿಯವಾದಂತಾಯಿತು. ಇದಕ್ಕೂ ಮೊದಲು ಪಕ್ಷದಲ್ಲಿ ಸೂಟ್‌ಕೇಸ್‌ ರಾಜಕಾರಣವಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಭಾರಿ ಚರ್ಚೆಗೆ ಕಾರಣವಾಗಿದ್ದರು ಪ್ರಜ್ವಲ್‌.

ಮರೆಯಾದ ಬಿ.ಬಿ.ಶಿವಪ್ಪ ಬಿಜೆಪಿ ಹಿರಿಯ ನಾಯಕ, ಮಾಜಿ ಶಾಸಕ ಬಿ.ಬಿ.ಶಿವಪ್ಪ ಅವರು ನಿಧನರಾದರು. ಕುಂಬ್ರಹಳ್ಳಿಯ ಎಸ್ಟೇಟ್‌ನಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಸಮಾಜ ಸೇವೆ ಮೂಲಕ ರಾಜಕೀಯ ಪ್ರವೇಶಿಸಿದ ಅವರು, ಐದು ದಶಕಗಳಿಗೂ ಹೆಚ್ಚು ರಾಜಕೀಯ ಕ್ಷೇತ್ರದಲ್ಲಿ ದುಡಿದು, ಸಾಕಷ್ಟು ಏಳು, ಬೀಳುಗಳನ್ನು ಕಂಡವರು. ಸಕಲೇಶಪುರ–ಆಲೂರು ವಿಧಾನ ಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕ, ವಿಧಾನ ಪರಿಷತ್‌ ಸದಸ್ಯ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಪಕ್ಷ ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರು.

ರೈತರ ಸರಣಿ ಆತ್ಮಹತ್ಯೆ ಈ ವರ್ಷ ಜಿಲ್ಲೆಯಲ್ಲಿ ಬೆಳೆ ನಷ್ಟ, ಸಾಲಬಾಧೆಯಿಂದ 28 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಲಾ ₹ 5 ಲಕ್ಷ ಪರಿಹಾರ ನೀಡಲಾಗಿದೆ. ಅಲ್ಲದೇ ಕಾಡಾನೆ ದಾಳಿಯಿಂದ ಆರು ಮಂದಿ ಬಲಿಯಾಗಿದ್ದಾರೆ.

ಉದ್ಯಮಿ ಮನೆ ಮೇಲೆ ಐ.ಟಿ. ಆಗಸ್ಟ್‌ನಲ್ಲಿ ನಗರದ ಬಿ.ಎಂ.ರಸ್ತೆಯಲ್ಲಿರುವ ಮಾಜಿ ಸಚಿವ ಬಿ.ಶಿವರಾಂ ಅವರ ಅಳಿಯ ಉದ್ಯಮಿ ಸಚಿನ್‌ ನಾರಾಯಣ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಮೂರು ದಿನ ಎಂಟು ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿ, ಮೂರು ಬ್ಯಾಗ್‌ ಕಡತ ತೆಗೆದುಕೊಂಡು ಹೋಯಿತು.

ದರ್ಶನ ನೀಡಿದ ಹಾಸನಾಂಬೆ ಈ ವರ್ಷ ಅ. 12 ರಿಂದ 21ರವರೆಗೆ ಜಿಲ್ಲೆಯ ಶಕ್ತಿದೇವತೆ ಹಾಸನಾಂಬೆ ಲಕ್ಷಾಂತರ ಭಕ್ತರಿಗೆ ದರ್ಶನ ಕರುಣಿಸಿದಳು. ವಿವಿಧ ಜಿಲ್ಲೆಗಳಲ್ಲದೇ, ಹೊರ ರಾಜ್ಯಗಳಿಂದಲೂ ಭಕ್ತರು ಭೇಟಿ ನೀಡಿದ್ದರು. ಕಾಣಿಕೆಯಿಂದ ₹ 4.14 ಕೋಟಿ ಹಣ ಸಂಗ್ರಹವಾಯಿತು.

ಕುಲದೇವರ ಮೊರೆ ಹೋದ ಗೌಡರು ಮುಂದಿನ ವಿಧಾನಸಭೆ ಚುನಾವಣೆ ಅಂಗವಾಗಿ ಜೆಡಿಎಸ್ ಕೈಗೊಂಡಿದ್ದ ವಿಕಾಸ ಯಾತ್ರೆ ಹಿನ್ನೆಲೆಯಲ್ಲಿ ಸಂಸದ ಎಚ್.ಡಿ.ದೇವೇಗೌಡರ ಕುಟುಂಬದ ಸದಸ್ಯರು ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯ ಶಿವ ದೇವಾಲಯ ಮತ್ತು ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದಲ್ಲಿ ದೇವೇಗೌಡ, ಪತ್ನಿ ಚನ್ನಮ್ಮ, ಪುತ್ರರಾದ ಎಚ್.ಡಿ.ರೇವಣ್ಣ, ಎಚ್.ಡಿ.ಕುಮಾರಸ್ವಾಮಿ, ಸೊಸೆ ಭವಾನಿ ಹಾಗೂ ಮೊಮ್ಮಗ ಡಾ.ಸೂರಜ್ ಮೊದಲಾದವರು ಶತ ರುದ್ರಾಭಿಷೇಕ ಸೇರಿದಂತೆ 6 ಗಂಟೆಗೂ ಹೆಚ್ಚು ಪೂಜಾ ಕೈಂಕರ್ಯ ನೆರವೇರಿಸಿದರು.

ಗಮನ ಸೆಳೆದ ಸಂಗತಿಗಳು
* ಇಂಡೋ ಟಿಬೆಟನ್‌ ಬಾರ್ಡರ್‌ ಫೋರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊಳೆನರಸೀಪುರದ ಯೋಧ ನಾಗೇಂದ್ರ ಹೃದಯಾಘಾತದಿಂದ ಸಾವು.
* ಭೂ ವ್ಯಾಜ್ಯಕ್ಕೆ ಸಂಬಂಧಿಸಿಂತೆ ಹೊಳೆನರಸೀಪುರ ನ್ಯಾಯಾಲಯದ ಆವರಣದಲ್ಲಿಯೇ ಕಕ್ಷಿದಾರ ಹಳ್ಳಿಮೈಸೂರು ಹೋಬಳಿ ಸಿಂಗನಕುಪ್ಪೆ ಗ್ರಾಮದ ಬಸವರಾಜಪ್ಪ ಅವರ ಪುತ್ರ ಕುಮಾರ (35) ವಿಷ ಸೇವಿಸಿದರು.
* ಆಗಸ್ಟ್‌ನಲ್ಲಿ ಕೆನಡಾದಲ್ಲಿ ನಡೆದ ವಿಶ್ವ ಕುಬ್ಜರ ಒಲಿಂಪಿಕ್ಸ್‌ ನಲ್ಲಿ ಬೋಸಿಯ (ಚೆಂಡಾಟ) ಕ್ರೀಡೆಯಲ್ಲಿ ಅರಕಲಗೂಡು ತಾಲ್ಲೂಕಿನ ಕೊಳ್ಳಂಗಿ ಗ್ರಾಮದ ಕೆ.ಆರ್.ಶಾಂತಕುಮಾರ್‌ಗೆ ಚಿನ್ನದ ಪದಕ.
*ಜ.19ರಂದು ಪುರದಮ್ಮ ದೇವಾಲಯದಲ್ಲಿ ಪ್ರಾಣಿ ಬಲಿ ನಿಷೇಧಿಸಿದ ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌.
*ಹೊಳೆನರಸೀಪುರದ ಕೆರೆಗೆ ಕಾರು ಮಗುಚಿ ನಾಲ್ಕು ಮಂದಿ ಸಾವು
*ಮಾ.10ಕ್ಕೆ ಬೇಲೂರು ದೇವಸ್ಥಾನಕ್ಕೆ 900 ವರ್ಷದ ಸಂಭ್ರಮ (ಕಿ.ಶ.1117, ಮಾ.10ರಂದು ದೇವರ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು).
* ಮಳೆ ಇಲ್ಲದೆ 16 ಲಕ್ಷ ತೆಂಗಿನ ಮರ ನಾಶ
* ವರ್ಷದಲ್ಲಿ ಐದು ಬಾರಿ ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ
* ಮೇ 18 ಎಸ್‌.ಎಂ.ಕೃಷ್ಣ ಬಡಾವಣೆ ನಿವೇಶನ ಹಂಚಿಕೆ
* ಎಸ್ಸೆಸ್ಸೆಲ್ಸಿ ಫಲಿತಾಂಶ ಜಿಲ್ಲೆಗೆ 31ನೇ ಸ್ಥಾನ
* ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ 11ನೇ ಸ್ಥಾನ
* ಜೂನ್ 26 ನಗರ ಬಸ್ ನಿಲ್ದಾಣ ಉದ್ಘಾಟಿಸಿದ ಸಿ.ಎಂ
* ಜೂನ್‌ 17 ಹಾಸನ ತಾಲ್ಲೂಕಿನ ತಟ್ಟೆಕೆರೆ ಗ್ರಾಮದ ದಲಿತರ ಮನೆಯಲ್ಲಿ ಯಡಿಯೂರಪ್ಪ ಉಪಾಹಾರ ಸೇವನೆ.
* ಜುಲೈ 15 ಜಿಲ್ಲಾಧಿಕಾರಿಯಾಗಿ ರೋಹಿಣಿ ಅಧಿಕಾರ ಸ್ವೀಕಾರ
* ಆ.12 ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಜೈನ ಮಹಿಳಾ ಸಮ್ಮೇಳನ
* ಚನ್ನರಾಯಪಟ್ಟಣ ತಾಲ್ಲೂಕಿನ ಹಳೇ ಬೆಳಗೊಳದಲ್ಲಿ ಜೈನ ಬಸದಿ ಜೀರ್ಣೋದ್ಧಾರ ಕೈಗೊಳ್ಳುವಾಗ ಗಂಗರ ಕಾಲದ 15 ಕಟ್ಟು ತಾಮ್ರದ ಶಾಸನ ಪತ್ತೆ.
*ಒಂದು ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಿದ ಹಾಸನ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಹಾಮೂಲ್‌).
* ನ.23ರ ಬೆಳಗಿನ ಜಾವ ದುರ್ಗಾಂಬಾ ಬಸ್‌ಗೆ ಬೆಂಕಿ ಬಿದ್ದು ಸುಟ್ಟು ಹೋಯಿತು. ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪಾರಾದರು.

‘ಸ್ವಚ್ಛ ಐಕಾನಿಕ್ ಸ್ಥಳ’ಗಳ ಪಟ್ಟಿಗೆ ಶ್ರವಣಬೆಳಗೊಳ

ಹಾಸನ: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪಾರಂಪರಿಕ ತಾಣಗಳಲ್ಲಿ ಶುಚಿತ್ವ, ನೈರ್ಮಲ್ಯ ಮತ್ತು ಮೂಲಸೌಕರ್ಯಗಳನ್ನು ಮೇಲ್‌ಸ್ತರಕ್ಕೆ ಒಯ್ಯಲು ಗುರುತಿಸಿರುವ ದೇಶದ 10 ಪ್ರಮುಖ ‘ಸ್ವಚ್ಛ ಐಕಾನಿಕ್ ಸ್ಥಳ’ಗಳಲ್ಲಿ ಶ್ರವಣಬೆಳಗೊಳವೂ ಸೇರಿತು. ಗೊಮ್ಮಟಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿರುವ ಸಂದರ್ಭದಲ್ಲೇ ಸ್ವಚ್ಛ ಭಾರತ್ ಮಿಷನ್ ಯೋಜನೆಯ 2ನೇ ಹಂತದ ‘ಸ್ವಚ್ಛ ಐಕಾನಿಕ್ ಸ್ಥಳ’ಗಳ ಪಟ್ಟಿಯಲ್ಲಿ ಶ್ರವಣಬೆಳಗೊಳ ಸೇರ್ಪಡೆ ಆಗಿರುವುದರಿಂದ ಅಭಿವೃದ್ಧಿಗೆ ಪೂರಕವಾಗಿ ತುರ್ತಾಗಿ ₹ 50 ಕೋಟಿ ಅನುದಾನ ನೀಡುವಂತೆ ಜಿಲ್ಲಾಧಿಕಾರಿ ರೋಹಿಣಿ ಮನವಿ ಮಾಡಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದೊಂದಿಗೆ (ಎಂ.ಡಿ.ಡಬ್ಲ್ಯೂ.ಎಸ್) ಕೇಂದ್ರದ ನಗರಾಭಿವೃದ್ಧಿ, ಸಂಸ್ಕೃತಿ, ಪ್ರವಾಸೋದ್ಯಮ ಸಚಿವಾಲಯ, ಸಂಬಂಧಪಟ್ಟ ರಾಜ್ಯಗಳು ಹಾಗೂ ಪಾಲುದಾರರಾಗಿ ಸಾರ್ವಜನಿಕ ವಲಯ ಮತ್ತು ಖಾಸಗಿ ಕಂಪೆನಿಗಳ ಸಹಯೋಗದೊಂದಿಗೆ ಅಭಿವೃದ್ಧಿ ಕೆಲಸಗಳು ಅನುಷ್ಠಾನವಾಗಲಿವೆ.
ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್.ಎ.ಎಲ್) ಸಂಸ್ಥೆಯು ಆರ್ಥಿಕ ಮತ್ತು ತಾಂತ್ರಿಕ ನೆರವಿನ ಪ್ರಾಯೋಜಕತ್ವ ವಹಿಸಿದೆ.
ಸುಧಾರಿತ ಚರಂಡಿ, ಒಳಚರಂಡಿ, ನೈರ್ಮಲ್ಯ ಸೌಲಭ್ಯಗಳು, ನೀರು ವಿತರಣಾ ಯಂತ್ರಗಳು (ಎ.ಟಿ.ಎಂ), ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ರಸ್ತೆ ನಿರ್ಮಾಣ, ದೀಪ ವ್ಯವಸ್ಥೆ, ಉದ್ಯಾನ ಸೇರಿದಂತೆ ಇತರೆ ಸೌಕರ್ಯಗಳನ್ನು ಈ ತಾಣಗಳಲ್ಲಿ ಕಲ್ಪಿಸಲಾಗುತ್ತದೆ.
ಕೇಂದ್ರ ಸರ್ಕಾರವು ಭಾರತದಾದ್ಯಂತ ಪಾರಂಪರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದಿಂದಾಗಿ ಗುರುತಿಸಿಕೊಂಡಿರುವ ಸ್ಥಳಗಳ ಪೈಕಿ 100 ತಾಣಗಳಲ್ಲಿ ಸ್ವಚ್ಛತೆ ಸ್ಥಿತಿಯನ್ನು ಉನ್ನತ ದರ್ಜೆಗೆ ಏರಿಸಲು ನಿರ್ಧರಿಸಿದೆ. ಒಂದನೇ ಮತ್ತು ಎರಡನೇ ಹಂತದಲ್ಲಿ ತಲಾ 10 ಪಾರಂಪರಿಕ ಸ್ಥಳಗಳನ್ನು ಆಯ್ಕೆ ಮಾಡಿದೆ.

ಗಮನ ಸೆಳೆದ ಸಂಗತಿಗಳು

l ಇಂಡೋ ಟಿಬೆಟನ್‌ ಬಾರ್ಡರ್‌ ಫೋರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೊಳೆನರಸೀಪುರದ ಯೋಧ ನಾಗೇಂದ್ರ ಹೃದಯಾಘಾತದಿಂದ ಸಾವು.
l ಭೂ ವ್ಯಾಜ್ಯಕ್ಕೆ ಸಂಬಂಧಿಸಿಂತೆ ಹೊಳೆನರಸೀಪುರ ನ್ಯಾಯಾಲಯದ ಆವರಣದಲ್ಲಿಯೇ ಕಕ್ಷಿದಾರ ಹಳ್ಳಿಮೈಸೂರು ಹೋಬಳಿ ಸಿಂಗನಕುಪ್ಪೆ ಗ್ರಾಮದ ಬಸವರಾಜಪ್ಪ ಅವರ ಪುತ್ರ ಕುಮಾರ (35) ವಿಷ ಸೇವಿಸಿದರು.
l ಆಗಸ್ಟ್‌ನಲ್ಲಿ ಕೆನಡಾದಲ್ಲಿ ನಡೆದ ವಿಶ್ವ ಕುಬ್ಜರ ಒಲಿಂಪಿಕ್ಸ್‌ ನಲ್ಲಿ ಬೋಸಿಯ (ಚೆಂಡಾಟ) ಕ್ರೀಡೆಯಲ್ಲಿ ಅರಕಲಗೂಡು ತಾಲ್ಲೂಕಿನ ಕೊಳ್ಳಂಗಿ ಗ್ರಾಮದ ಕೆ.ಆರ್.ಶಾಂತಕುಮಾರ್‌ಗೆ ಚಿನ್ನದ ಪದಕ.
l ಜ.19ರಂದು ಪುರದಮ್ಮ ದೇವಾಲಯದಲ್ಲಿ ಪ್ರಾಣಿ ಬಲಿ ನಿಷೇಧಿಸಿದ ಉಪವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್‌.
l ಹೊಳೆನರಸೀಪುರದ ಕೆರೆಗೆ ಕಾರು ಮಗುಚಿ ನಾಲ್ಕು ಮಂದಿ ಸಾವು
l ಮಾ.10ಕ್ಕೆ ಬೇಲೂರು ದೇವಸ್ಥಾನಕ್ಕೆ 900 ವರ್ಷದ ಸಂಭ್ರಮ (ಕಿ.ಶ.1117, ಮಾ.10ರಂದು ದೇವರ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು).
l ಮಳೆ ಇಲ್ಲದೆ 16 ಲಕ್ಷ ತೆಂಗಿನ ಮರ ನಾಶ
l ವರ್ಷದಲ್ಲಿ ಐದು ಬಾರಿ ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ
l ಮೇ 18 ಎಸ್‌.ಎಂ.ಕೃಷ್ಣ ಬಡಾವಣೆ ನಿವೇಶನ ಹಂಚಿಕೆ
l ಎಸ್ಸೆಸ್ಸೆಲ್ಸಿ ಫಲಿತಾಂಶ ಜಿಲ್ಲೆಗೆ 31ನೇ ಸ್ಥಾನ
l ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ 11ನೇ ಸ್ಥಾನ
l ಜೂನ್ 26 ನಗರ ಬಸ್ ನಿಲ್ದಾಣ ಉದ್ಘಾಟಿಸಿದ ಸಿ.ಎಂ
l ಜೂನ್‌ 17 ಹಾಸನ ತಾಲ್ಲೂಕಿನ ತಟ್ಟೆಕೆರೆ ಗ್ರಾಮದ ದಲಿತರ ಮನೆಯಲ್ಲಿ ಯಡಿಯೂರಪ್ಪ ಉಪಾಹಾರ ಸೇವನೆ.
l ಜುಲೈ 15 ಜಿಲ್ಲಾಧಿಕಾರಿಯಾಗಿ ರೋಹಿಣಿ ಅಧಿಕಾರ ಸ್ವೀಕಾರ
l ಆ.12 ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಜೈನ ಮಹಿಳಾ ಸಮ್ಮೇಳನ
l ಚನ್ನರಾಯಪಟ್ಟಣ ತಾಲ್ಲೂಕಿನ ಹಳೇ ಬೆಳಗೊಳದಲ್ಲಿ ಜೈನ ಬಸದಿ ಜೀರ್ಣೋದ್ಧಾರ ಕೈಗೊಳ್ಳುವಾಗ ಗಂಗರ ಕಾಲದ 15 ಕಟ್ಟು ತಾಮ್ರದ ಶಾಸನ ಪತ್ತೆ.
l ಒಂದು ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಿದ ಹಾಸನ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಹಾಮೂಲ್‌).
l ನ.23ರ ಬೆಳಗಿನ ಜಾವ ದುರ್ಗಾಂಬಾ ಬಸ್‌ಗೆ ಬೆಂಕಿ ಬಿದ್ದು ಸುಟ್ಟು ಹೋಯಿತು. ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪಾರಾದರು.

ಜೆ.ಎಸ್‌.ಮಹೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT