ಹಂಸಭಾವಿ

ಮಾದಕ ವಸ್ತುಗಳಿಗೆ ಯುವ ಪೀಳಿಗೆ ಬಲಿ

ಭಾರತದಲ್ಲಿ ಅನಾದಿ ಕಾಲದಿಂದಲೂ ಮಾದಕ ವಸ್ತುಗಳ ಆಕರ್ಷಣೆ ನಿರಂತರವಾಗಿ ನಡೆದಿದೆ. ಮನುಷ್ಯನ ನೋವಿಗೆ ಅವು ಪರಿಹಾರವೆಂಬ ಭ್ರಮೆ ಬಹು ಜನರಲ್ಲಿದೆ.

ಹಂಸಭಾವಿ:‘ಯುವ ಪೀಳಿಗೆಯೂ ಮಾದಕ ವಸ್ತುಗಳಿಗೆ ದಾಸರಾಗಿ ತಮ್ಮ ವಿದ್ಯಾರ್ಥಿ ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ’ ಎಂದು ಅಬಕಾರಿ ಬಸ್‌ಇನ್‌ಸ್ಟೆಕ್ಟರ್‌ ಮೋಹನ್ ಬಿ.ಎಂ. ಕಳವಳ ವ್ಯಕ್ತಪಡಿಸಿದರು.

ಗ್ರಾಮದ ಮೃತ್ಯುಂಜಯ ವಿದ್ಯಾಪೀಠದ ಮಹಾಂತಸ್ವಾಮಿ ಕಲಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಗುರುವಾರ ‘ನಾರ್ಕೋ ಡ್ರಗ್ಸ್‌ ಮಾರಾಟ ತಡೆ’ ಕುರಿತು ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ಅನಾದಿ ಕಾಲದಿಂದಲೂ ಮಾದಕ ವಸ್ತುಗಳ ಆಕರ್ಷಣೆ ನಿರಂತರವಾಗಿ ನಡೆದಿದೆ. ಮನುಷ್ಯನ ನೋವಿಗೆ ಅವು ಪರಿಹಾರವೆಂಬ ಭ್ರಮೆ ಬಹು ಜನರಲ್ಲಿದೆ. ಆದರೆ, ಅವುಗಳನ್ನು ನಮ್ಮನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕೊಲ್ಲುತ್ತವೆ ಎಂದರು.

ಪ್ರಾಚಾರ್ಯ ಡಾ.ಎಂ.ಎಂ.ಅಕ್ಕಿ ಮಾತನಾಡಿ, ಮಾನವನ ಜೀವನ ಅತ್ಯಮೂಲ್ಯ ಹಾಗೂ ಅಲ್ಪವಾಗಿದ್ದು ಮಾದಕ ವಸ್ತುಗಳಿಂದ ಆರೋಗ್ಯ ಹದಗೆಡಿಸಿಕೊಂಡು ನೈತಿಕ ಅದಃ ಫತನ ಹೊಂದುತ್ತಿದ್ದಾನೆ ಎಂದರು.

ಅಬಕಾರಿ ಸಿಬ್ಬಂದಿ ಮಂಜುನಾಥ ಚಿಕ್ಕಣ್ಣನವರ, ರಮೇಶ ಪೂಜಾರ, ಮಲ್ಲಿಕಾರ್ಜುನ ಗುಗ್ಗರೇರ, ಚನ್ನಪ್ಪ ಎಮ್ಮೇರ, ಎಸ್.ಎ.ತಿಪ್ಪೇಶ ಹಾಗೂ ವಿದ್ಯಾರ್ಥಿಗಳು ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಸಾಲಗಾರರು ನಾವಲ್ಲ, ಸರ್ಕಾರವೇ ಬಾಕಿದಾರ

ಹಾವೇರಿ
ಸಾಲಗಾರರು ನಾವಲ್ಲ, ಸರ್ಕಾರವೇ ಬಾಕಿದಾರ

23 Jan, 2018
ಬೇಸಿಗೆಗೂ ಮುನ್ನವೇ ನೀರಿಗಾಗಿ ಪರದಾಟ

ಹಾನಗಲ್
ಬೇಸಿಗೆಗೂ ಮುನ್ನವೇ ನೀರಿಗಾಗಿ ಪರದಾಟ

23 Jan, 2018

ಶಿಗ್ಗಾವಿ
ಸಮಾನತೆಗಾಗಿ ಸಾಮಾಜಿಕ ಕ್ರಾಂತಿ ಅವಶ್ಯ: ಶಾಸಕ ಬೊಮ್ಮಾಯಿ

‘ಸಮಾಜದ ಜನರಲ್ಲಿ ಸಂಘಟ ನಾತ್ಮಕ ಗುಣಗಳು ಬೆಳೆಯಬೇಕು. ಅಲ್ಲದೆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡು ತ್ತೇವೆ ಎಂಬ ಸಂಕಲ್ಪ ಮಾಡುವುದು ಅವಶ್ಯವಾಗಿದೆ’

23 Jan, 2018
ಬಸವಣ್ಣ ಕೆರೆಗೆ ವರದೆಯ ನೀರು

ಹಾವೇರಿ
ಬಸವಣ್ಣ ಕೆರೆಗೆ ವರದೆಯ ನೀರು

22 Jan, 2018
ಅಕ್ಕಿಆಲೂರ ನೂತನ ತಾಲ್ಲೂಕು ಕೇಂದ್ರ

ಅಕ್ಕಿಆಲೂರ
ಅಕ್ಕಿಆಲೂರ ನೂತನ ತಾಲ್ಲೂಕು ಕೇಂದ್ರ

22 Jan, 2018