ಕಾರವಾರ

‘ಪ್ರವಾಸೋದ್ಯಮಕ್ಕೆ ಗಾಳಿಪಟ ಉತ್ಸವ ಪೂರಕ’

‘ಜಿಲ್ಲಾಡಳಿತದಿಂದ ಆಯೋಜಿಸ ಲಾದ ಎರಡು ದಿನಗಳ ಗಾಳಿಪಟ ಉತ್ಸವ ನಯನ ಮನೋಹರವಾಗಿದ್ದು, ಅದು ಯಶಸ್ವಿಯಾಗಿದೆ. ಜಿಲ್ಲೆಯ ಪ್ರವಾ ಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಇದು ಉತ್ತಮ ಪ್ರಯತ್ನ.

ಕಾರವಾರದ ಗಾಳಿಪಟ ಉತ್ಸವದಲ್ಲಿ ಬಾನಂಗಳದಲ್ಲಿ ಹಾರಾಡಿದ ಯಕ್ಷಗಾನದ ವಿನ್ಯಾಸ ಹೊಂದಿರುವ ಟೀಮ್‌ ಮಂಗಳೂರಿನವರ ಗಾಳಿಪಟ

ಕಾರವಾರ: ‘ಜಿಲ್ಲೆಯ ಪ್ರವಾ ಸೋದ್ಯಮಕ್ಕೆ ಗಾಳಿಪಟ ಉತ್ಸವ ಪೂರಕ ವಾಗಿದೆ’ ಎಂದು ಶಾಸಕ ಸತೀಶ್ ಸೈಲ್ ಹೇಳಿದರು. ಜಿಲ್ಲಾಡಳಿತ ಹಾಗೂ ಪ್ರವಾಸೋ ದ್ಯಮ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಗಾಳಿಪಟ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜಿಲ್ಲಾಡಳಿತದಿಂದ ಆಯೋಜಿಸ ಲಾದ ಎರಡು ದಿನಗಳ ಗಾಳಿಪಟ ಉತ್ಸವ ನಯನ ಮನೋಹರವಾಗಿದ್ದು, ಅದು ಯಶಸ್ವಿಯಾಗಿದೆ. ಜಿಲ್ಲೆಯ ಪ್ರವಾ ಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಇದು ಉತ್ತಮ ಪ್ರಯತ್ನ. ರಾಜ್ಯದ ವಿವಿಧ ಐದು ಜಿಲ್ಲೆಯ ವಿದ್ಯಾರ್ಥಿಗಳನ್ನು ಗಾಳಿಪಟ ಉತ್ಸವ ಸಲುವಾಗಿ ಆಹ್ವಾನಿಸಿ, ಅವರಿಗೆ ತರಬೇತಿ ನೀಡುವ ಮೂಲಕ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಉತ್ಸವ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕರಾವಳಿ ಭಾಗದಲ್ಲಿ ಆಗಲಿದೆ’ ಎಂದರು.

‘ಈಗಾಗಲೇ ಕರಾವಳಿ ಉತ್ಸವ ಜಿಲ್ಲೆಯ ವಿವಿಧೆಡೆಗಳಲ್ಲಿ ನಡೆದಿದೆ. ಮುಂದಿನ ದಿನಗಳಲ್ಲಿ ಕಾರವಾರ ಉತ್ಸವ, ಸ್ಕೂಬಾ ಡೈವಿಂಗ್, ಹಾರ್ನ್‌ ಬಿಲ್ ಉತ್ಸವ ಹೀಗೆ ಸರಣಿ ಉತ್ಸವಗಳು ಇಲ್ಲಿ ಜರುಗಲಿದೆ. ಆ ಮೂಲಕ ಜಿಲ್ಲೆ ಸದಾ ಚಟುವಟಿಕೆಯಲ್ಲಿದೆ ಎಂಬುದನ್ನು ರಾಷ್ಟ್ರವ್ಯಾಪಿ ಗಮನ ಸೆಳೆಯಲಾಗುತ್ತಿದೆ. ಇದರಿಂದ ದೇಶ– ವಿದೇಶಗಳ ವಿವಿಧ ಮೂಲೆಗಳಿಂದ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿಗೆ ಬರಲಿದ್ದಾರೆ’ ಎಂದರು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ‘ಜಿಲ್ಲೆಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಉತ್ಸವವನ್ನು ಹಮ್ಮಿಕೊಳ್ಳ ಲಾಗಿದೆ. ಗುರುವಾರ ಗೋಕ ರ್ಣದಲ್ಲಿಯೂ  ಹಮ್ಮಿಕೊಳ್ಳ ಲಾಗಿದ್ದ ಈ ಉತ್ಸವ ಸಂಪೂರ್ಣ ಯಶಸ್ವಿ ಯಾಗಿದೆ. ಇದರಿಂದಾಗಿ ನಿರಂತರವಾಗಿ ಗಾಳಿಪಟ ಉತ್ಸವವನ್ನು ಆಯೋಜಿಸಲು ಉತ್ತೇಜನ ಸಿಕ್ಕಂತಾಗಿದೆ’ ಎಂದರು.

ಗಮನ ಸೆಳೆದ ಗಾಳಿಪಟಗಳು: ಪಾಕಿ ಸ್ತಾನದ ವಶದಲ್ಲಿರುವ ಭಾರತೀಯ ಸೇನೆಯ ಕುಲಭೂಷಣ್‌ ಜಾಧವ್‌ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುವ ಮನವಿ ಹೊಂದಿರುವ ಗಾಳಿಪಟ, ರಿಂಗ್‌ಕೈಟ್, ಸ್ಟಂಟ್, ರಾಕೆಟ್, ಪೈಲಟ್, ಬಗ್ಗಿ, ಸ್ನೇಕ್ ಡ್ರಾಗನ್, ಟೈಗರ್‌, ಈಗಲ್, ಯಕ್ಷಗಾ ನದ ಚಿತ್ರಣ ಹೊಂದಿರುವ ವಿವಿಧ ವಿನ್ಯಾಸದ ಗಾಳಿಪಟಗಳು ಜನರ ಗಮನ ಸೆಳೆದವು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಯೋಗೇಶ್ವರ್, ಬೆಂಗಳೂರು ಕೈಟ್ ಕ್ಲಬ್‌ನ ಗಾಳಿಪಟ ತರಬೇತುದಾರ ವಿ.ಕೆ.ರಾವ್, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ಲೀಲಾಬಾಯಿ ಠಾಣೇಕರ್ ಹಾಜರಿದ್ದರು.

* * 

ಐದು ಜಿಲ್ಲೆಗಳಿಂದ ವಿದ್ಯಾ ರ್ಥಿಗಳನ್ನು ಆಯ್ಕೆ ಮಾಡಿ ಗಾಳಿಪಟ ನಿರ್ಮಾಣ ಮತ್ತು ಅದನ್ನು ಹಾರಿಸುವ ಕುರಿತು ತರಬೇತಿ ನೀಡಲಾಗಿದೆ
ಎಸ್.ಎಸ್.ನಕುಲ್, ಜಿಲ್ಲಾಧಿಕಾರಿ

Comments
ಈ ವಿಭಾಗದಿಂದ ಇನ್ನಷ್ಟು
ತಪೋಭೂಮಿಯಲ್ಲಿ ಲಹರಿ ಪಠಣದ ನಿನಾದ

ಉತ್ತರ ಕನ್ನಡ
ತಪೋಭೂಮಿಯಲ್ಲಿ ಲಹರಿ ಪಠಣದ ನಿನಾದ

24 Jan, 2018

ಕಾರವಾರ
ಕೋಮು ಪ್ರಚೋದನೆ ಸಂದೇಶ; ಶಂಕರ ನಾಯ್ಕ ಬಂಧನ

‘ಜಿಲ್ಲೆಯಲ್ಲಿ ನಡೆದ ಗಲಭೆಯ ವೇಳೆ ಸಾಮಾಜಿಕ ಜಾಲತಾಣದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಸಂದೇಶಗಳನ್ನು ಹಾಕಿರುವ ಕುರಿತಾಗಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ...

24 Jan, 2018

ಕಾರವಾರ
ಹಣದಿಂದ ರಾಜಕಾರಣ ಅಳತೆ ಮಾಡುತ್ತಿರುವುದು ದುರ್ದೈವ: ನಾಗರಾಜ ನಾಯಕ

ಪ್ರತಿಯೊಬ್ಬನಿಗೂ ಪ್ರಾಮಾಣಿಕವಾಗಿ ಬದುಕಬೇಕು ಎಂಬ ಆಸೆ ಇರುತ್ತದೆ. ಆದರೆ ಕೆಲವು ಸಂದರ್ಭಗಳು ಆತನನ್ನು ಭ್ರಷ್ಟಾಚಾರಕ್ಕೆ ನೂಕುತ್ತದೆ.

24 Jan, 2018
6ನೇ ಕಾರವಾರ ಸಾಹಿತ್ಯ ಸಮ್ಮೇಳನ ಫೆ.17ಕ್ಕೆ

ಕಾರವಾರ
6ನೇ ಕಾರವಾರ ಸಾಹಿತ್ಯ ಸಮ್ಮೇಳನ ಫೆ.17ಕ್ಕೆ

23 Jan, 2018
ರಾಷ್ಟ್ರೀಯ ಪಕ್ಷಗಳಿಂದ ಹೆಣದ ಮೇಲೆ ರಾಜಕಾರಣ

ಕಾರವಾರ
ರಾಷ್ಟ್ರೀಯ ಪಕ್ಷಗಳಿಂದ ಹೆಣದ ಮೇಲೆ ರಾಜಕಾರಣ

21 Jan, 2018