ಜನವರಿ 22ರಿಂದ ಚಿತ್ರೀಕರಣ ಆರಂಭ

ಬದುಕು ಮತ್ತು ರೇಸಿನ ಹೊಸ ಕಾನ್ಸೆಪ್ಟು, ಭಟ್ಟರ ಹೊಸ ತರಲೆಗೆ ವಿಹಾನ್‌ ಸಾಥ್‌!

‘ಡ್ರಾಮಾ’ ಸಿನಿಮಾದ ನಂತರ ಮಾಡುತ್ತಿರುವ ಇನ್ನೊಂದು ಹುಡುಗರ ಚಿತ್ರ ಇದು. ಅದ್ಭುತವಾದ ಕಥೆ ಇದೆ. ಮಾಸ್ತಿ ಮಂಜು ಮತ್ತು ಕಾಂತಪ್ಪ ಎಂಬ ಇಬ್ಬರು ಪ್ರತಿಭಾವಂತ ಹುಡುಗರು ಬರೆದಿರುವ ಕಥೆ ಇದು. ಈ ಚಿತ್ರದ ಮುಖ್ಯನಾಯಕ ವಿಹಾನ್‌, ಪ್ರತಿಭಾವಂತ ನಟ. ಭವಿಷ್ಯದ ನಾಯಕನಟ ಅವನು’ ಎಂದು ಹೇಳಿಕೊಳ್ಳುತ್ತಾರೆ ಯೋಗರಾಜ ಭಟ್ಟರು.

ಯೋಗರಾಜ್‌ ಭಟ್‌, ವಿಹಾನ್‌

ಬೆಂಗಳೂರು: ‘ಮುಗುಳು ನಗೆ’ಯ ನಂತರ ಯೋಗರಾಜ ಭಟ್ಟರು ಹೊಸ ಹುಡುಗರ ಪಡೆ ಕಟ್ಟಿಕೊಂಡು ಮತ್ತೊಂದು ಸಿನಿಮಾ ಮಾಡಲು ಸಿದ್ಧತೆ ನಡೆಸಿರುವುದು ತಿಳಿದೇ ಇದೆ. ಈ ಚಿತ್ರಕ್ಕಿನ್ನೂ ಶೀರ್ಷಿಕೆ ಅಂತಿಮಗೊಂಡಿಲ್ಲ. ‘ಪ್ರೊಡಕ್ಷನ್‌ ನಂ– 6’ ಎಂಬ ತಾತ್ಕಾಲಿನ ಹೆಸರಿನಲ್ಲಿರುವ ಸಿನಿಮಾಗೆ ನಾಯಕ ಮತ್ತು ಪ್ರಮುಖ ನಟರ ಆಯ್ಕೆ ಅಂತಿಮಗೊಂಡಿದೆ. ಸಿನಿಮಾದ ಕುರಿತ ಕೆಲವು ವಿವರಗಳನ್ನು ಚಿತ್ರತಂಡ ಬಹಿರಂಗಪಡಿಸಿದೆ.

‘1/4 ಕೆ.ಜಿ. ಪ್ರೀತಿ’ ಚಿತ್ರದ ಮೂಲಕ ಪರಿಚಿತರಾಗಿದ್ದ ವಿಹಾನ್‌ ಈ ಚಿತ್ರದ ನಾಯಕ. ಹಾಗೆಂದು ಇದು ನಾಯಕಪ್ರಧಾನ ಚಿತ್ರ ಅಲ್ಲ. ಯುವಮನಸ್ಸುಗಳ ಮನಸ್ಥಿತಿಗೆ ಕನ್ನಡಿ ಹಿಡಿಯು ಕಥನ ಎಳೆಯನ್ನು ಇಟ್ಟುಕೊಂಡಿರುವ ಈ ಸಿನಿಮಾದಲ್ಲಿ ಹದಿನೈದು ಪ್ರಮುಖ ಪಾತ್ರಗಳು ಇರುತ್ತವಂತೆ.

‘ಡ್ರಾಮಾ’ ಸಿನಿಮಾದ ನಂತರ ಮಾಡುತ್ತಿರುವ ಇನ್ನೊಂದು ಹುಡುಗರ ಚಿತ್ರ ಇದು. ಅದ್ಭುತವಾದ ಕಥೆ ಇದೆ. ಮಾಸ್ತಿ ಮಂಜು ಮತ್ತು ಕಾಂತಪ್ಪ ಎಂಬ ಇಬ್ಬರು ಪ್ರತಿಭಾವಂತ ಹುಡುಗರು ಬರೆದಿರುವ ಕಥೆ ಇದು. ಈ ಚಿತ್ರದ ಮುಖ್ಯನಾಯಕ ವಿಹಾನ್‌, ಪ್ರತಿಭಾವಂತ ನಟ. ಭವಿಷ್ಯದ ನಾಯಕನಟ ಅವನು’ ಎಂದು ಹೇಳಿಕೊಳ್ಳುತ್ತಾರೆ ಯೋಗರಾಜ ಭಟ್ಟರು.

‘ಇದು ಹೃದಯಂಗಮ ಯೂಥ್‌ಫುಲ್‌ ಕಥೆಯನ್ನು ಸಾಕಷ್ಟು ಹಾಸ್ಯದೊಂದಿಗೆ ಹೇಳುವ ಸಿನಿಮಾ. ಎರಡು ಪೀಳಿಗೆಯ ನಡುವಿನ ಪ್ರೇಮ–ದ್ವೇಷದ ಸಂಬಂಧವೇ ಈ ಚಿತ್ರದ ಪ್ರಮುಖ ಅಂಶ’ ಎಂದು ಕಥೆಯ ಬಗ್ಗೆ ಪರೋಕ್ಷವಾಗಿ ಸುಳಿವು ನೀಡುತ್ತದೆ ಚಿತ್ರತಂಡ. ಬದುಕು ಮತ್ತು ರೇಸ್‌ ಎರಡನ್ನೂ ಹೋಲಿಸಿನೋಡುವ ಪ್ರಯತ್ನವೂ ಈ ಚಿತ್ರದಲ್ಲಿದೆಯಂತೆ. ವಿಹಾನ್‌ ಜತೆ ರಾಜ್‌ ದೀಪಕ್‌ ಶೆಟ್ಟಿ ನೆಗೆಟೀವ್‌ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹರಿಕೃಷ್ಣ ಸಂಗೀತ ಸಂಯೋಜನೆ, ಸುಜ್ಞಾನ್‌ ಛಾಯಾಗ್ರಹಣ ಇರಲಿದೆ. ಯೋಗರಾಜ್‌ ಭಟ್‌ ಮತ್ತು ಜಯಂತ್‌ ಕಾಯ್ಕಿಣಿ ಹಾಡುಗಳನ್ನು ಬರೆಯಲಿದ್ದಾರೆ. ‘ಯೋಗರಾಜ್‌ ಸಿನಿಮಾಸ್‌’ ಅಡಿಯಲ್ಲಿಯೇ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರದ ಚಿತ್ರೀಕರಣ ಜನವರಿ 22ರಿಂದ ಆರಂಭವಾಗಲಿದೆ.

‘ಒಂದಿಷ್ಟು ಹೊಸ ಆ್ಯಕ್ಷನ್‌, ಹೊಸ ತಮಾಷೆ, ಹೊಸ ವೇದಾಂತ, ಹೊಸ ಜಗಳ, ಹೊಸ ಹೋರಾಟಗಳು ಈ ಸಿನಿಮಾದಲ್ಲಿ ಇರುತ್ತವೆ. ಜತೆಗೆ ಕೇಳಲು ಪರಮಾದ್ಭುತ ಹಾಡುಗಳೂ ಇರುತ್ತವೆ’ ಎಂಬ ಭರವಸೆಯನ್ನೂ ಭಟ್ಟರು ನೀಡುತ್ತಾರೆ.

ಚಿತ್ರದ ನಾಯಕಿಯ ಆಯ್ಕೆ ಇನ್ನೂ ಆಗಬೇಕಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣನ ’ರುಸ್ತುಂ’ ಸಿನಿಮಾ ಫಸ್ಟ್‌ಲುಕ್‌

ಬೆಂಗಳೂರು
ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣನ ’ರುಸ್ತುಂ’ ಸಿನಿಮಾ ಫಸ್ಟ್‌ಲುಕ್‌

24 Apr, 2018
‘ಚಿನ್ನದ ಗೊಂಬೆ’ಗೆ ಐವತ್ತು ದಿನ!

ಪತ್ರಿಕಾಗೋಷ್ಠಿ
‘ಚಿನ್ನದ ಗೊಂಬೆ’ಗೆ ಐವತ್ತು ದಿನ!

23 Apr, 2018
‘ಪುರುಷೋತ್ತಮ ಪರ್ವ’ ಧ್ವನಿಮುದ್ರಿಕೆ ಬಿಡುಗಡೆ

ನಾಟಕ
‘ಪುರುಷೋತ್ತಮ ಪರ್ವ’ ಧ್ವನಿಮುದ್ರಿಕೆ ಬಿಡುಗಡೆ

23 Apr, 2018
ಪುಸ್ತಕಗಳನ್ನು ಖರೀದಿಸಿಯೇ ಓದಬೇಕಂತೆ!

ಕಿರುಚಿತ್ರ
ಪುಸ್ತಕಗಳನ್ನು ಖರೀದಿಸಿಯೇ ಓದಬೇಕಂತೆ!

23 Apr, 2018
₹100 ಕೋಟಿ ಗಳಿಸಿದ ‘ಭರತ್ ಅನೆ ನೇನು’

ಉತ್ತಮ ಪ್ರದರ್ಶನ
₹100 ಕೋಟಿ ಗಳಿಸಿದ ‘ಭರತ್ ಅನೆ ನೇನು’

23 Apr, 2018