ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪೆಗಳು ಎಲ್ಲಿ ಹೋದವು?

Last Updated 30 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಜೋರು ಜೋರು ಮಳೆಯು ಸುರಿದು
ಬೇರು ಮಳೆಯ ನೀರು ಕುಡಿದು
ಮರಗಿಡಗಳು ಹಸುರು ತಳೆದು
ಬೆಳಕು ಮೂಡಿತು

ನೀರು ಹಳ್ಳ ತುಂಬಿ ಹರಿದು
ಕೆರೆಗಳತ್ತ ಸರಿದು ನಡೆದು
ಧರೆಯು ನಗುತ ಚೆಲುವು ಪಡೆದು
ಹೊಳೆಯತೊಡಗಿತು

ಮಳೆಯು ದಿನವು ಸುರಿಯುತಿರಲು
ಇಳೆಯು ಸೊಬಗು ತಳೆಯುತಿರಲು
ಕಳೆಯು ತುಂಬಿ ತುಳುಕುತಿರಲು
ಒಳಿತು ನಾಡಿಗೆ

ಮಳೆಯು ನಾಡಿನಲ್ಲಿ ಸುರಿದು
ಇಳೆಯ ಕೆರೆಯು ಕೋಡಿ ಹರಿದು
ಬೆಳೆಯು ಮುಗುಳುನಗುತ ಬೆಳೆದು
ಕಳೆಯು ಬೀಡಿಗೆ

ಕಪ್ಪು ಮೋಡ ಕರಗುತಿತ್ತು
ದಪ್ಪ ಹನಿಯು ಬೀಳುತಿತ್ತು
ಕಪ್ಪೆ ಮಾತ್ರ ಕೂಗಲಿಲ್ಲ
ಇಲ್ಲ ನಾದವು!

ಕಪ್ಪೆ ಇಲ್ಲದಂಥ ಮಳೆಯು
ಸಪ್ಪೆ ಕಾಣುತಿತ್ತು ಇಳೆಯು
ದಪ್ಪ ಸಣ್ಣ ಕಪ್ಪೆಯೆಲ್ಲ
ಎಲ್ಲಿ ಹೋದವು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT