ವಾರೆಗಣ್ಣು

ಉತ್ಸಾಹಕ್ಕಾಗಿ ಘೋಷಣೆಯಷ್ಟೇ..!

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್‌ನ್ನು ಇನ್ನೂ ಯಾರೊಬ್ಬರಿಗೂ ಖಾತ್ರಿಗೊಳಿಸಿಲ್ಲ. ನವ ಕರ್ನಾಟಕ ಪರಿವರ್ತನಾ ರ‍್ಯಾಲಿ ಹೋದೆಡೆ ಸ್ಥಳೀಯರನ್ನು ಹುರಿದುಂಬಿಸಲು ಕೆಲವರ ಹೆಸರು ಘೋಷಿಸಲಾಗಿದೆಯಷ್ಟೇ...’

ವಿಜಯಪುರ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್‌ನ್ನು ಇನ್ನೂ ಯಾರೊಬ್ಬರಿಗೂ ಖಾತ್ರಿಗೊಳಿಸಿಲ್ಲ. ನವ ಕರ್ನಾಟಕ ಪರಿವರ್ತನಾ ರ‍್ಯಾಲಿ ಹೋದೆಡೆ ಸ್ಥಳೀಯರನ್ನು ಹುರಿದುಂಬಿಸಲು ಕೆಲವರ ಹೆಸರು ಘೋಷಿಸಲಾಗಿದೆಯಷ್ಟೇ...’

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಮುಧೋಳ ಶಾಸಕ ಗೋವಿಂದ ಕಾರಜೋಳ ಈಚೆಗೆ ವಿಜಯಪುರ ನಗರ ಮಂಡಲದ ಪದಾಧಿಕಾರಿಗಳ ಸಭೆಯಲ್ಲಿ ನೀಡಿದ ಮರ್ಮಾಘಾತದ ಹೇಳಿಕೆಯಿದು.

‘ಖರೇ ಹೇಳ್ಬೇಕು ಅಂದ್ರೇ ನಂಗೂ ಟಿಕೆಟ್‌ ಖಾತ್ರಿಯಿಲ್ಲ. ಹಿಂದಿನ ಚುನಾವಣೆಗಳಲ್ಲಿ ಪಕ್ಷದ ಬಿ ಫಾರ್ಮ್‌ ಹಂಚಿದಂತೆ ಈ ಚುನಾವಣೆಯಲ್ಲಿ ಹಂಚಲ್ಲ. ಎಲ್ಲವೂ ಅಮಿತ್‌ಷಾ ನೇತೃತ್ವದ ತಂಡದಿಂದಲೇ ಅಂತಿಮಗೊಳ್ಳೋದು...

ನೀವೂ ಸುಮ್ನೇ ಒಬ್ಬೊಬ್ಬರೇ ವೈಯಕ್ತಿಕ ಪ್ರಚಾರ ಮಾಡೋದನ್ನ ಬಿಡಿ. ಪಕ್ಷದ ಸಂಘಟನೆಗಾಗಿ ಒಟ್ಟಾಗಿ ದುಡಿಯಿರಿ’ ಎಂದು ಹೇಳುತ್ತಿದ್ದಂತೆ ಸಭೆಯಲ್ಲಿ ಉಪಸ್ಥಿತರಿದ್ದ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಮೂಲಕ ಪ್ರದರ್ಶಿಸುತ್ತಿದ್ದ ರಣೋತ್ಸಾಹಕ್ಕೆ ತೆರೆ ಎಳೆದು, ಜೋಲು ಮೋರೆ ಹಾಕಿದರು.

 

Comments
ಈ ವಿಭಾಗದಿಂದ ಇನ್ನಷ್ಟು
ಫುಟ್‌ಬಾಲ್ ಅಂಗಳದ ಮಿನುಗುತಾರೆ

ವ್ಯಕ್ತಿ
ಫುಟ್‌ಬಾಲ್ ಅಂಗಳದ ಮಿನುಗುತಾರೆ

18 Mar, 2018
 ‘ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಯಲಿ’

ವಾರದ ಸಂದರ್ಶನ
‘ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಯಲಿ’

18 Mar, 2018
ಬುದ್ಧನ ಕಥೆಗೆ ಬಗ್ಗಿದ ವೈದ್ಯ!

ಕಟಕಟೆ–110
ಬುದ್ಧನ ಕಥೆಗೆ ಬಗ್ಗಿದ ವೈದ್ಯ!

18 Mar, 2018

ವಿಜಯಪುರ
‘ನೀನೇನು ಎಲೆಕ್ಷನ್‌ಗೆ ನಿಲ್ತಿಯೇನಪ್ಪಾ..!’

‘ನೋಡಪ್ಪಾ ನೀ ಎಲೆಕ್ಷನ್‌ಗೆ ನಿಲ್ಲೋದಿದ್ರೇ ಹೇಳು. ಸುಮ್ನೇ ಯಾಕ ಕಾರ್ಪೊರೇಟರ್ ಆಗಾಕ ಬಡಿದಾಡ್ತಿ. ನಮ್‌ ಸದಸ್ಯರನ್ನೆಲ್ಲಾ ಒಪ್ಸಿ, ನಿನ್ನೇ ಸಿಟಿಗೆ ಎಂಎಲ್‌ಎ ಎಲೆಕ್ಷನ್‌ಗೆ ನಿಲ್ಲಸ್ತೀನಿ...’ ...

18 Mar, 2018

ಈ ಭಾನುವಾರ
ಬಟ್ಟೆ ಧರಿಸದಿದ್ದರೆ ಮಾನ ಹೋಗೋದು!

‘ಬೆಂಗಳೂರಿನ ಮಾನ ಹೋದ ಮೇಲೆ ಇನ್ನೊಂದು ವರದಿ ಕೊಟ್ಟರೆ ಜನರು ನಂಬ್ತಾರಾ’ ಎಂದು ಪತ್ರಕರ್ತರು ಮರು ಪ್ರಶ್ನಿಸಿದಾಗ, ‘ಅಯ್ಯೊ ಮಾನ ಹೇಗೆ ಹೋಗುತ್ತೆ. ನಾವು...

18 Mar, 2018