ಹುಣಸೂರು

‘ಒಡೇಮಾ’ ರೋಗದಿಂದ ಬಳಲುತ್ತಿದ್ದ ಆನೆ ಸಾವು

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಂಠಾಪುರ ಆನೆ ಶಿಬಿರದಲ್ಲಿ ಒಡೇಮಾ ರೋಗದಿಂದ ಬಳಲುತ್ತಿದ್ದ 47 ವರ್ಷದ ಸಲಗ ಶನಿವಾರ ಮೃತಪಟ್ಟಿತು.

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಂಠಾಪುರ ಆನೆ ಶಿಬಿರದಲ್ಲಿ ಒಡೇಮಾ ರೋಗದಿಂದ ಬಳಲುತ್ತಿದ್ದ 47 ವರ್ಷದ ಸಲಗ ಶನಿವಾರ ಮೃತಪಟ್ಟಿತು.

ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ವ್ಯಾಪ್ತಿಯ ಅರಣ್ಯದಲ್ಲಿ ಈ ಆನೆಯ ಉಪಟಳ ಹೆಚ್ಚಾಗಿದ್ದರಿಂದ ಒಂದು ವರ್ಷದ ಹಿಂದೆ ಸೆರೆ ಹಿಡಿದು ಕುಂಠಾಪುರ ಶಿಬಿರಕ್ಕೆ ತರಲಾಗಿತ್ತು.

‘20 ದಿನಗಳಿಂದ ಬಳಲುತ್ತಿದ್ದ ಸಲಗ ಆಹಾರ, ನೀರು ತ್ಯಜಿಸಿತ್ತು. ಸೊಂಡಿಲಿನ ಭಾಗದಲ್ಲಿ ನೀರು ಶೇಖರಣೆಯಾಗಿ ಆಹಾರ ಸೇವಿಸಲು ಆಗುತ್ತಿರಲಿಲ್ಲ. ತೀವ್ರ ನೋವಿನಿಂದ ಬಳಲುತ್ತಿತ್ತು’ ಎಂದು ಪಶುವೈದ್ಯ ಡಾ.ಮುಜೀಬ್‌ ರೆಹಮಾನ್‌ ತಿಳಿಸಿದ್ದಾರೆ.

ನಾಗರಹೊಳೆ ಎಸಿಎಫ್‌ ಪ್ರಸನ್ನಕುಮಾರ್‌, ವಲಯ ಅರಣ್ಯಾಧಿಕಾರಿ ಕಿರಣ್‌ ಕುಮಾರ್‌ ಸಮ್ಮುಖದಲ್ಲಿ ಡಾ.ಮುಜೀಬ್‌ ರೆಹಮಾನ್‌ ಮರಣೋತ್ತರ ಪರೀಕ್ಷೆ ನಡೆಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಲಿಂಗಾಯತ ಸ್ವತಂತ್ರ ಧರ್ಮ: ಮುಖ್ಯಮಂತ್ರಿ ಭೇಟಿ ಮಾಡಿದ ಪ್ರಮುಖ ವಿರಕ್ತ ಮಠಾಧೀಶರು

ಬೆಂಗಳೂರು
ಲಿಂಗಾಯತ ಸ್ವತಂತ್ರ ಧರ್ಮ: ಮುಖ್ಯಮಂತ್ರಿ ಭೇಟಿ ಮಾಡಿದ ಪ್ರಮುಖ ವಿರಕ್ತ ಮಠಾಧೀಶರು

18 Mar, 2018
ಮಿಲೇನಿಯಲ್ಸ್‌ಗೆ ಅರಬ್ಬೀ ಸಮುದ್ರದಡಿಯಲ್ಲಿ ಗುರುತಿನ ಚೀಟಿ ವಿತರಣೆ

ಕಾರವಾರದಲ್ಲಿ ವಿನೂತನ ಕಾರ್ಯಕ್ರಮ
ಮಿಲೇನಿಯಲ್ಸ್‌ಗೆ ಅರಬ್ಬೀ ಸಮುದ್ರದಡಿಯಲ್ಲಿ ಗುರುತಿನ ಚೀಟಿ ವಿತರಣೆ

18 Mar, 2018
ಟ್ವೀಟ್‌ ವಿವಾದ: ಹರ್ಷ ಮೊಯಿಲಿಗೆ ನೋಟಿಸ್‌

ಪಕ್ಷದ ಟಿಕೆಟ್‌ ಹಂಚಿಕೆ ಕುರಿತಂತೆ ಟ್ವೀಟ್
ಟ್ವೀಟ್‌ ವಿವಾದ: ಹರ್ಷ ಮೊಯಿಲಿಗೆ ನೋಟಿಸ್‌

18 Mar, 2018
ಪ್ರಾಣಿಗಳ ದಾಹ ನೀಗುವ ಟ್ರಸ್ಟ್‌

ಎರೆಹಳ್ಳದಲ್ಲಿ ಹತ್ತಕ್ಕೂ ಹೆಚ್ಚು ಸಿಮೆಂಟ್ ತೊಟ್ಟಿ ಅಳವಡಿಸಿ ನೀರಿನ ವ್ಯವಸ್ಥೆ
ಪ್ರಾಣಿಗಳ ದಾಹ ನೀಗುವ ಟ್ರಸ್ಟ್‌

18 Mar, 2018
ದಿವಿತ್‌ ರೈ‌ಯ ಜಪಾನ್‌ ವೆಚ್ಚ ಭರಿಸಿದ ಪರಮೇಶ್ವರ

ಬೆಂಗಳೂರು
ದಿವಿತ್‌ ರೈ‌ಯ ಜಪಾನ್‌ ವೆಚ್ಚ ಭರಿಸಿದ ಪರಮೇಶ್ವರ

18 Mar, 2018