ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹5 ನಾಣ್ಯ ತೋರಿಸಿ ₹5,000 ಕದ್ದರು

Last Updated 30 ಡಿಸೆಂಬರ್ 2017, 20:44 IST
ಅಕ್ಷರ ಗಾತ್ರ

ಬೆಂಗಳೂರು: ಬಸ್‌ನಲ್ಲಿ ನಾಲ್ವರು ಮಹಿಳಾ ಪ್ರಯಾಣಿಕರ ಗುಂಪೊಂದು ಸಹ ಪ್ರಯಾಣಿಕರೊಬ್ಬರಿಗೆ ₹ 5 ನಾಣ್ಯ ಬಿದ್ದಿದೆ ಎಂದು ತೋರಿಸಿ, ಆ ಮಹಿಳೆಯ ಪರ್ಸ್‌ನಲ್ಲಿದ್ದ ₹5,000 ಕದ್ದಿದ್ದಾರೆ.

ಕಳ್ಳತನ ಸಂಬಂಧ ವಸಂತನಗರದ ನಿವಾಸಿಯಾದ ಮಹಿಳೆಯು ಕಬ್ಬನ್‌ ಪಾರ್ಕ್‌ ಪೊಲೀಸರಿಗೆ ಗುರುವಾರ ದೂರು ನೀಡಿದ್ದಾರೆ. ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ಘಟನೆ ನಡೆದ ಪ್ರದೇಶದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

‘ಡಿ. 27ರಂದು ಸಂಜೆ 4.30 ಗಂಟೆಯ ಸುಮಾರಿಗೆ ಮಹಿಳೆ, ಶಿವಾಜಿನಗರ ಮಾರ್ಗದ ಬಸ್‌ (ನಂ.150) ಹತ್ತಿದ್ದರು. ಅವರ ಹಿಂದೆಯೇ ನಾಲ್ವರು ಮಹಿಳೆಯರು ಅದೇ ಬಸ್‌ ಹತ್ತಿದ್ದರು. ನಾಲ್ವರ ಪೈಕಿ ಒಬ್ಬಾಕೆಯು 2 ವರ್ಷದ ಮಗುವನ್ನು ಎತ್ತಿಕೊಂಡಿದ್ದಳು. ಸೇಂಟ್ ಮಾರ್ಕ್ಸ್‌ ರಸ್ತೆಯ ಎಸ್‌.ಬಿ.ಐ ಬ್ಯಾಂಕ್‌ ಬಳಿ ಬಸ್‌ ಬರುತ್ತಿದ್ದಂತೆ, ಆ ಮಹಿಳೆ ಕೈಯಲ್ಲಿದ್ದ ₹5 ನಾಣ್ಯವನ್ನು ಕೆಳಗೆ ಬೀಳಿಸಿದ್ದಳು. ಅದನ್ನು ಎತ್ತಿಕೊಡುವಂತೆ ಸಹ ಪ್ರಯಾಣಿಕರನ್ನು ಕೋರಿದ್ದಳು’ ಎಂದು ಪೊಲೀಸರು ತಿಳಿಸಿದರು.

‘ಮಹಿಳೆ ಕೈಯಲ್ಲಿ ಮಗು ಇದ್ದಿದ್ದರಿಂದ ದೂರುದಾರ ಮಹಿಳೆ ನಾಣ್ಯ ಎತ್ತಲು ಸಹಾಯಕ ಮಾಡಿದರು. ಈ ವೇಳೆ ಆ ಮಹಿಳೆಯರ ಗುಂಪಿನಲ್ಲಿದ್ದ ಒಬ್ಬಾಕೆ,  ಅವರ ಪರ್ಸ್‌ನ ಜಿಪ್‌ ತೆರೆದು ಹಣ ಕದ್ದಿದ್ದಾರೆ. ನಾಣ್ಯಕ್ಕಾಗಿ ಹುಡುಕುತ್ತಿರುವಾಗಲೇ ಆರೋಪಿಗಳು ಬೋರಿಂಗ್‌ ಆಸ್ಪತ್ರೆ ಬಳಿ ಬಸ್ಸಿನಿಂದ ಇಳಿದುಕೊಂಡಿದ್ದರು.’

‘ಆ ಸಂದರ್ಭದಲ್ಲಿ ಪರ್ಸ್‌ನಲ್ಲಿದ್ದ ಹಣ ಕಳುವಾದ ಬಗ್ಗೆ ದೂರುದಾರರಿಗೆ ಮಾಹಿತಿ ಇರಲಿಲ್ಲ. ಕೆಲ ಸಮಯದ ಬಳಿಕ ಪರ್ಸ್‌ ಪರಿಶೀಲಿಸಿದಾಗ ಕಳುವಾಗಿದ್ದು ಗೊತ್ತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT