ನಾಯಕ ನಟಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ

ಪೋಷಕ ನಟನ ಬಂಧನ, ಬಿಡುಗಡೆ

ಚಿತ್ರನಟಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದಡಿ ಪೋಷಕ ನಟ ಎಸ್‌.ಎನ್‌.ರಾಜಶೇಖರ್ ಎಂಬುವರನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು: ‌ಚಿತ್ರನಟಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದಡಿ ಪೋಷಕ ನಟ ಎಸ್‌.ಎನ್‌.ರಾಜಶೇಖರ್ ಎಂಬುವರನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

‘ನಾನು ಹೊಸ ಚಿತ್ರವೊಂದರಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದೇನೆ. ಆ ಚಿತ್ರದಲ್ಲಿ ರಾಜಶೇಖರ್ ನನ್ನ ತಂದೆ ಪಾತ್ರ ಮಾಡಿದ್ದಾರೆ. ನನಗೂ, ನಾಯಕ ನಟನಿಗೂ ಅಕ್ರಮ ಸಂಬಂಧವಿದೆ ಎಂದು ಹೇಳುವ ಮೂಲಕ ಅವರು ನನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ’ ಎಂದು 23 ವರ್ಷದ ನಟಿ ದೂರಿದ್ದಾರೆ.

‘ಇತ್ತೀಚೆಗೆ ನಾಯಕ ನಟನಿಗೆ ಕರೆ ಮಾಡಿದ್ದ ರಾಜಶೇಖರ್, ‘ಚಿತ್ರೀಕರಣದ ಸಮಯದಲ್ಲಿ ನಾಯಕ ನಟಿ ಜತೆ ನೀನು ಅಕ್ರಮ ಸಂಬಂಧ ಹೊಂದಿದ್ದೆ. ಅದನ್ನು ಸಾಬೀತುಪಡಿಸಲು ನಾನೇ ಆಕೆಯ ಕನ್ಯತ್ವ ಪರೀಕ್ಷೆ ಮಾಡಿಸುತ್ತೇನೆ’ ಎಂದು ಹೇಳಿದ್ದರು. ರಾಜಶೇಖರ್ ಹೇಳಿದ ಈ ಮಾತನ್ನು ನಾಯಕ ನಟ ಡಿ.25ರಂದು ನನ್ನ ಗಮನಕ್ಕೆ ತಂದರು.’

‘ಅಷ್ಟು ಕೀಳಾಗಿ ಮಾತನಾಡಿದ್ದರ ಬಗ್ಗೆ ವಿಚಾರಿಸಲು ನಾನೇ ಅವರಿಗೆ ಕರೆ ಮಾಡಿದೆ. ಆಗ, ‘ಹೌದು. ನಾನು ಹಾಗೆ ಹೇಳಿದ್ದು ನಿಜ. ನೀವಿಬ್ಬರೂ ಹಾಗೆಯೇ ನಡೆದುಕೊಂಡಿದ್ದೀರಿ. ನಾನು ಮಾಡುತ್ತಿರುವ ಆರೋಪ ಸುಳ್ಳೆಂದು ವಾದಿಸುವುದಾದರೆ, ನನ್ನ ಮುಂದೆ ಬಂದು ಕನ್ಯತ್ವ ಪರೀಕ್ಷೆ ಮಾಡಿಸು’ ಎಂದರು. ತುಂಬ ಕೆಟ್ಟ ಪದಗಳಿಂದ ನಿಂದಿಸಿ ಕರೆ ಸ್ಥಗಿತಗೊಳಿಸಿದರು. ಆ ನಂತರವೂ ಅಂತಹುದೇ ಸಂದೇಶಗಳನ್ನು ಕಳುಹಿಸಿದ್ದರು’ ಎಂದು ನಟಿ ಆರೋಪಿಸಿದ್ದಾರೆ.

‘ಮಹಿಳೆ ಗೌರವಕ್ಕೆ ಧಕ್ಕೆ ತಂದ, ಹಾಗೂ ಜೀವ ಬೆದರಿಕೆ ಹಾಕಿದ ಆರೋಪಗಳಡಿ ಎಫ್‌ಐಆರ್ ದಾಖಲಿಸಿ, ಡಿ.26ರಂದೇ ರಾಜಶೇಖರ್‌ ಅವರನ್ನು ಬಂಧಿಸಿದ್ದೆವು’ ಎಂದು ಪೊಲೀಸರು ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು

ಗೇಟ್‌ ಬಿದ್ದು ಬಾಲಕ ಸಾವು ಪ್ರಕರಣ
ಬಾಲಕ ಸಾವು ಪ್ರಕರಣ: ಕಟ್ಟಡ ಮಾಲೀಕನ ವಿರುದ್ಧ ಎಫ್‌ಐಆರ್

ಗೇಟ್‌ ಬಿದ್ದು ಬಾಲಕ ಕೆ.ಮಂಜುನಾಥ್ ಸಾವನ್ನಪ್ಪಿದ ಪ್ರಕರಣ ಸಂಬಂಧ ಡೆಸಾಲ್ಟ್ ಸಿಸ್ಟಮ್ಸ್ ಕಂಪನಿ ಸಿಬ್ಬಂದಿ ಹಾಗೂ ಕಟ್ಟಡದ ಮಾಲೀಕರ ವಿರುದ್ಧ ಜಯನಗರ ಪೊಲೀಸರು ಪ್ರಕರಣ...

18 Mar, 2018
‘ಸಮಾನತೆಗೆ ಬೇಕು ಮಹಿಳಾ ನೀತಿ’

ಬೆಂಗಳೂರು
‘ಸಮಾನತೆಗೆ ಬೇಕು ಮಹಿಳಾ ನೀತಿ’

18 Mar, 2018
ಅಪಘಾತ; ಕಾನ್‌ಸ್ಟೆಬಲ್ ಸಾವು

ಬೆಂಗಳೂರು
ಅಪಘಾತ; ಕಾನ್‌ಸ್ಟೆಬಲ್ ಸಾವು

18 Mar, 2018
593 ವಿದ್ಯಾರ್ಥಿಗಳಿಗೆ ಪದವಿ

ಬೆಂಗಳೂರು
593 ವಿದ್ಯಾರ್ಥಿಗಳಿಗೆ ಪದವಿ

18 Mar, 2018

ಬೆಂಗಳೂರು
ಹಲವೆಡೆ ಸಾಧಾರಣ ಮಳೆ

ಬೆಳ್ಳಂದೂರಿನಲ್ಲಿ ಗರಿಷ್ಠ 45 ಮಿ.ಮೀ. ಮಳೆಯಾಗಿದೆ. ಬಸವನಗುಡಿ, ಲಾಲ್‌ಬಾಗ್, ಜಯನಗರ, ಬನಶಂಕರಿ ಸುತ್ತಮುತ್ತಲೂ ಕೆಲ ಹೊತ್ತು ಬಿರುಸಿನ ಮಳೆ ಸುರಿದಿದೆ.

18 Mar, 2018