ಬೆಂಗಳೂರು

ಇಂದಿರಾನಗರದ ಆರು ಪಬ್‌ ಬಂದ್‌ಗೆ ಆದೇಶ

ಅಗ್ನಿ ಸುರಕ್ಷತಾಕ್ರಮಗಳನ್ನು ಕೈಗೊಳ್ಳದಿದ್ದಕ್ಕೆ ಇಂದಿರಾನಗರದ ಆರು ಪಬ್‌ಗಳನ್ನು ಬಂದ್‌ ಮಾಡುವಂತೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಎಂ.ಎನ್‌.ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಇಂದಿರಾನಗರದ ಆರು ಪಬ್‌ ಬಂದ್‌ಗೆ ಆದೇಶ

ಬೆಂಗಳೂರು: ಅಗ್ನಿ ಸುರಕ್ಷತಾಕ್ರಮಗಳನ್ನು ಕೈಗೊಳ್ಳದಿದ್ದಕ್ಕೆ ಇಂದಿರಾನಗರದ ಆರು ಪಬ್‌ಗಳನ್ನು ಬಂದ್‌ ಮಾಡುವಂತೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಎಂ.ಎನ್‌.ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಮುಂಬೈನ ಪಬ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ ಬೆನ್ನಲ್ಲೇ, ನಗರದ ಪಬ್‌ಗಳಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವಂತೆ ರೆಡ್ಡಿ ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗಳಿಗೆ ಸೂಚನೆ ನೀಡಿದ್ದರು. ಅದರನ್ವಯ ಅಧಿಕಾರಿಗಳು 10 ತಂಡಗಳನ್ನು ರಚಿಸಿಕೊಂಡು ಶನಿವಾರ ನಗರದ ಪಬ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಇಂದಿರಾನಗರದ ‘ವೇಪರ್‌ ಪಬ್‌’, ‘ಪೆಕಾಸ್ ಪಬ್’, ‘ಹಮ್ಮಿಂಗ್ ಟ್ರಿ’, ‘ಶೆರ್ಲಾಕ್ ಪಬ್‌’, ‘ಟಿಪ್ಸಿ ಬುಲ್’ ಹಾಗೂ ‘ಎಸ್ಕೇಪ್ ಹೋಟೆಲ್ ಆ್ಯಂಡ್‌ ಸ್ಪಾ’ ಕಟ್ಟಡಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದಿರುವುದು ಪತ್ತೆಯಾಯಿತು. ಈ ಬಗ್ಗೆ ಅಧಿಕಾರಿಗಳು ಡಿಜಿಪಿ ಅವರಿಗೆ ವರದಿ ಸಲ್ಲಿಸಿದ್ದರು. ಅದರನ್ವಯ ಡಿಜಿಪಿ ಕ್ರಮ ತೆಗೆದುಕೊಂಡಿದ್ದಾರೆ.

ಆರು ಪಬ್‌ಗೆ ನೋಟಿಸ್‌: ಕೋರಮಂಗಲದ 15ಕ್ಕೂ ಹೆಚ್ಚು ಪಬ್‌ಗಳಿಗೂ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಅಲ್ಲಿಯ ‘ಬಾರ್‌ಬೆಕ್‌ ನ್ಯಾಷನಲ್‌’, ‘ಬಾಸಿಲ್ ಮೊನಾರ್ಕ್‌’, ‘ತುಬೆ ಬಾರ್’, ‘ಆರ್‌.ಎನ್‌ ಸ್ಕ್ವೇರ್’, ‘ಬಾರ್ಲೆಜ್‌ ಬಾರ್‌’ ಹಾಗೂ ‘ಇಕ್ವಿನಾಕ್ಸ್‌ ಇಂದ್ರಪ್ರಸ್ಥ’ ಪಬ್‌ಗಳ ಕಟ್ಟಡದಲ್ಲಿ ಸುರಕ್ಷತಾ ಕ್ರಮ ಇಲ್ಲದಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು.

ಡಿಜಿಪಿ ಸೂಚನೆಯಂತೆ ಈ ಆರು ಪಬ್‌ಗಳಿಗೆ ನೋಟಿಸ್ ನೀಡಿರುವ ಅಧಿಕಾರಿಗಳು, ‘ಮುಂದಿನ 15 ದಿನಗಳ ಒಳಗೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ, ‍ಪಬ್‌ ಬಂದ್‌ ಮಾಡಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಡಿ.31ರಂದು ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿ ಮೇಲೆ ಗುಂಪು ಹಲ್ಲೆ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆ: ಒಬ್ಬನ ಬಂಧನ

ಇಂದಿರಾ ನಗರದಲ್ಲಿ ಘಟನೆ
ಡಿ.31ರಂದು ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿ ಮೇಲೆ ಗುಂಪು ಹಲ್ಲೆ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆ: ಒಬ್ಬನ ಬಂಧನ

16 Jan, 2018
ಎಳ್ಳು ಬೆಲ್ಲ ಹಂಚಿ ಒಳ್ಳೆ ಮಾತಾಡಿದರು

ಸಂಕ್ರಾಂತಿ ಸಂಭ್ರಮ
ಎಳ್ಳು ಬೆಲ್ಲ ಹಂಚಿ ಒಳ್ಳೆ ಮಾತಾಡಿದರು

16 Jan, 2018

ಬೆಂಗಳೂರು
ಸೊಪ್ಪು ತರಕಾರಿ ಮೂಲಕ ದೇಹ ಸೇರುತ್ತಿದೆ ವಿಷ!

ಕೊಳಚೆ ನೀರು ಬಳಸಿ ಬೆಳೆಯುತ್ತಿರುವ ತರಕಾರಿ, ಸೊಪ್ಪು, ಹಣ್ಣುಹಂಪಲು ವಿಷಯುಕ್ತವಾಗಿವೆ. ಇವುಗಳನ್ನು ಜನರು ಅರಿವಿಲ್ಲದೆ ಸೇವಿಸುತ್ತಿದ್ದು, ಇದು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತಿದೆ. ಹುಟ್ಟುವ ಮಕ್ಕಳಲ್ಲಿ...

16 Jan, 2018

ಬೆಂಗಳೂರು
ಹಿಂದೂ ಧರ್ಮದ ತತ್ವವೇ ಸಹಿಷ್ಣುತೆ: ದೇವೇಗೌಡ

ಹಿಂದು ಧರ್ಮದ ತತ್ವವೇ ಸಹಿಷ್ಣುತೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

16 Jan, 2018
ಮೂಕಪ್ರಾಣಿಗಳ ದಾಹ ನೀಗಿಸಲು ನೀರಿನ ತೊಟ್ಟಿ

ಕಾಮಧೇನು ಹಂಸ ಸೇವಾ ಟ್ರಸ್ಟ್‌
ಮೂಕಪ್ರಾಣಿಗಳ ದಾಹ ನೀಗಿಸಲು ನೀರಿನ ತೊಟ್ಟಿ

16 Jan, 2018