ವಾರ್ಡ್‌ ಎಂಜಿನಿಯರ್‌ಗಳ ಅಮಾನತು ಯಾವಾಗ?

ಮೇಯರ್‌ ಅವರೇ ಫ್ಲೆಕ್ಸ್‌ ಹಾಗೆಯೇ ಇದೆ...!

ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ ಹಾಗೂ ವಿಶ್ವೇಶ್ವರಪುರ ವಾರ್ಡ್‌ಗಳಲ್ಲಿ ಅನಧಿಕೃತ ಫ್ಲೆಕ್ಸ್‌ಗಳನ್ನು ತೆಗೆಸುವಂತೆ ಮೇಯರ್‌ ಸಂಪತ್‌ರಾಜ್‌ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ ಬಳಿಕವೂ ಹುಟ್ಟುಹಬ್ಬ, ಹೊಸ ವರ್ಷದ ಶುಭಾಶಯ ಕೋರುವಂತಹ ಅನಧಿಕೃತ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ನಲ್ಲಿರುವ ಫ್ಲೆಕ್ಸ್‌

ಬೆಂಗಳೂರು: ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ ಹಾಗೂ ವಿಶ್ವೇಶ್ವರಪುರ ವಾರ್ಡ್‌ಗಳಲ್ಲಿ ಅನಧಿಕೃತ ಫ್ಲೆಕ್ಸ್‌ಗಳನ್ನು ತೆಗೆಸುವಂತೆ ಮೇಯರ್‌ ಸಂಪತ್‌ರಾಜ್‌ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ ಬಳಿಕವೂ ಹುಟ್ಟುಹಬ್ಬ, ಹೊಸ ವರ್ಷದ ಶುಭಾಶಯ ಕೋರುವಂತಹ ಅನಧಿಕೃತ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ಶುಕ್ರವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ವಿಶ್ವೇಶ್ವರಪುರ ವಾರ್ಡ್‌ನಲ್ಲಿ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಹೋರ್ಡಿಂಗ್‌ಗಳನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ಪಾಲಿಕೆ ಸದಸ್ಯೆ ವಾಣಿ ವಿ.ರಾವ್‌ ಒತ್ತಾಯಿಸಿದ್ದರು. ಇದಕ್ಕೆ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ನ ಸದಸ್ಯೆ ಪ್ರತಿಭಾ ಧನರಾಜ್‌ ಕೂಡಾ ಧ್ವನಿಗೂಡಿಸಿದ್ದರು.

ಇದಕ್ಕೆ ಉತ್ತರಿಸಿದ್ದ ಮೇಯರ್‌, ‘ಈ ವಾರ್ಡ್‌ಗಳಲ್ಲಿ ನಾಳೆಯಿಂದ ಒಂದು ಬ್ಯಾನರ್‌, ಫ್ಲೆಕ್ಸ್‌ ಇದ್ದರೆ, ವಾರ್ಡ್‌ನ ಎಂಜಿನಿಯರ್‌ ಅವರನ್ನು ಅಮಾನತು ಮಾಡುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಈ ಎರಡು ವಾರ್ಡ್‌ಗಳೂ ಸೇರಿದಂತೆ ನಗರದ ಎಲ್ಲೆಡೆ ಫ್ಲೆಕ್ಸ್‌ ಹಾವಳಿ ಇದೆ. ಹೆಚ್ಚಿನ ಕಡೆ ರಾಜಕೀಯ ಮುಖಂಡರು ಹಾಗೂ ಅವರ ಅಭಿಮಾನಿಗಳೇ ಇವುಗಳನ್ನು ಅಳವಡಿಸಿದ್ದಾರೆ. ಇವುಗಳನ್ನು ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಪಾಲಿಕೆ ಇನ್ನೂ ಕ್ರಮ ಕೈಗೊಂಡಿಲ್ಲ.

ಎಂ.ಜಿ ರಸ್ತೆ ಯುದ್ದಕ್ಕೂ ಹೊಸವರ್ಷಕ್ಕೆ ಶುಭಾಶಯ ಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಇಲ್ಲಿನ ಶಾಸಕ ಎನ್‌.ಎ.ಹ್ಯಾರಿಸ್‌ ಅವರ ಚಿತ್ರವೂ ಇದೆ.

ಅಚ್ಚರಿ ಎಂದರೆ ಪಾಲಿಕೆ ಕಚೇರಿ ಎದುರೇ ಅನಧಿಕೃತ ಫ್ಲೆಕ್ಸ್‌ ಇದೆ. ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಹಾಗೂ ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯತ್ರೀ ಅವರ ಚಿತ್ರವೂ ಇದೆ.

Comments
ಈ ವಿಭಾಗದಿಂದ ಇನ್ನಷ್ಟು

ಗೇಟ್‌ ಬಿದ್ದು ಬಾಲಕ ಸಾವು ಪ್ರಕರಣ
ಬಾಲಕ ಸಾವು ಪ್ರಕರಣ: ಕಟ್ಟಡ ಮಾಲೀಕನ ವಿರುದ್ಧ ಎಫ್‌ಐಆರ್

ಗೇಟ್‌ ಬಿದ್ದು ಬಾಲಕ ಕೆ.ಮಂಜುನಾಥ್ ಸಾವನ್ನಪ್ಪಿದ ಪ್ರಕರಣ ಸಂಬಂಧ ಡೆಸಾಲ್ಟ್ ಸಿಸ್ಟಮ್ಸ್ ಕಂಪನಿ ಸಿಬ್ಬಂದಿ ಹಾಗೂ ಕಟ್ಟಡದ ಮಾಲೀಕರ ವಿರುದ್ಧ ಜಯನಗರ ಪೊಲೀಸರು ಪ್ರಕರಣ...

18 Mar, 2018
‘ಸಮಾನತೆಗೆ ಬೇಕು ಮಹಿಳಾ ನೀತಿ’

ಬೆಂಗಳೂರು
‘ಸಮಾನತೆಗೆ ಬೇಕು ಮಹಿಳಾ ನೀತಿ’

18 Mar, 2018
ಅಪಘಾತ; ಕಾನ್‌ಸ್ಟೆಬಲ್ ಸಾವು

ಬೆಂಗಳೂರು
ಅಪಘಾತ; ಕಾನ್‌ಸ್ಟೆಬಲ್ ಸಾವು

18 Mar, 2018
593 ವಿದ್ಯಾರ್ಥಿಗಳಿಗೆ ಪದವಿ

ಬೆಂಗಳೂರು
593 ವಿದ್ಯಾರ್ಥಿಗಳಿಗೆ ಪದವಿ

18 Mar, 2018

ಬೆಂಗಳೂರು
ಹಲವೆಡೆ ಸಾಧಾರಣ ಮಳೆ

ಬೆಳ್ಳಂದೂರಿನಲ್ಲಿ ಗರಿಷ್ಠ 45 ಮಿ.ಮೀ. ಮಳೆಯಾಗಿದೆ. ಬಸವನಗುಡಿ, ಲಾಲ್‌ಬಾಗ್, ಜಯನಗರ, ಬನಶಂಕರಿ ಸುತ್ತಮುತ್ತಲೂ ಕೆಲ ಹೊತ್ತು ಬಿರುಸಿನ ಮಳೆ ಸುರಿದಿದೆ.

18 Mar, 2018