ವಿಜಯಪುರ

₹ 14 ಲಕ್ಷ ಎಗರಿಸಿದ ಕಳ್ಳರು

ಬ್ಯಾಂಕಿನ ಮುಖ್ಯ ಕಚೇರಿಯಿಂದ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಇಡಲು, ಮೂರು ಟ್ರಂಕ್‌ಗಳಲ್ಲಿ ಹಣ ಕೊಂಡೊಯ್ಯಲು ಬ್ಯಾಂಕ್‌ ಸಿಬ್ಬಂದಿ ಸಿದ್ಧತೆ ನಡೆಸಿದ್ದರು. ಈ ಸಂದರ್ಭದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ವಿಜಯಪುರ: ನಗರದ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಭದ್ರತಾ ಸಿಬ್ಬಂದಿಯ ಗಮನ ಬೇರೆಡೆ ಸೆಳೆದ ಕಳ್ಳರು, ₹14 ಲಕ್ಷ ನಗದು ಇದ್ದ ಪೆಟ್ಟಿಗೆಯೊಂದಿಗೆ ಶನಿವಾರ ಪರಾರಿಯಾಗಿದ್ದಾರೆ.

ಬ್ಯಾಂಕಿನ ಮುಖ್ಯ ಕಚೇರಿಯಿಂದ, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಇಡಲು, ಮೂರು ಟ್ರಂಕ್‌ಗಳಲ್ಲಿ ಹಣ ಕೊಂಡೊಯ್ಯಲು ಬ್ಯಾಂಕ್‌ ಸಿಬ್ಬಂದಿ ಸಿದ್ಧತೆ ನಡೆಸಿದ್ದರು. ಈ ಸಂದರ್ಭದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಘಟನೆ ವಿವರ: ಶನಿವಾರ ಬೆಳಿಗ್ಗೆ 11.30ಕ್ಕೆ, ಹಣವಿದ್ದ ಟ್ರಂಕ್‌ಗಳನ್ನು ಬ್ಯಾಂಕ್‌ ಸಿಬ್ಬಂದಿ ವಿಶೇಷ ವಾಹನದಲ್ಲಿ ಕೊಂಡೊಯ್ಯಲು ಸಜ್ಜಾಗಿದ್ದರು. ಭದ್ರತಾ ಸಿಬ್ಬಂದಿಯೂ ಕಾವಲಿಗಿದ್ದರು. ಈ ಸಂದರ್ಭ ವಾಹನದ ಬಳಿ ಬಂದ ಚಾಲಾಕಿ ಕಳ್ಳನೊಬ್ಬ ಕೆಲ ನೋಟುಗಳನ್ನು ಕೆಳಗೆ ಚೆಲ್ಲಿ ಸಿಬ್ಬಂದಿಯ ಗಮನವನ್ನು ಅತ್ತ ಸೆಳೆದಿದ್ದಾನೆ. ಭದ್ರತಾ ಕಾವಲುಗಾರ ಕೆಳಗೆ ಬಿದ್ದಿದ್ದ ನೋಟುಗಳನ್ನು ಆಯ್ದುಕೊಳ್ಳಲು ಮುಂದಾಗುತ್ತಿದ್ದಂತೆಯೇ, ವಾಹನದೊಳಗಿಟ್ಟಿದ್ದ ಒಂದು ಟ್ರಂಕ್‌ನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾನೆ. ಈ ದೃಶ್ಯ, ಬ್ಯಾಂಕ್‌ನಲ್ಲಿ ಅಳವಡಿಸಲಾಗಿರುವ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಗಾಂಧಿಚೌಕ್‌ ಪೊಲೀಸರು ಘಟನೆಯ ಮಾಹಿತಿ ನೀಡಿದರು.

ಆರೋಪಿಗಳ ಪತ್ತೆಗಾಗಿ ಡಿವೈಎಸ್‌ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪಕುಮಾರ್ ಆರ್‌ ಜೈನ್ ‘ಪ್ರಜಾವಾಣಿ’ಗೆ ತಿಳಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಬಿಸಿಲ ಬೇಗೆಗೆ ಬಸವಳಿದ ವಿಜಯಪುರ ಜನ

ವಿಜಯಪುರ
ಬಿಸಿಲ ಬೇಗೆಗೆ ಬಸವಳಿದ ವಿಜಯಪುರ ಜನ

26 Apr, 2018

ವಿಜಯಪುರ
ಟಿಕೆಟ್‌: ಮೇಲ್ವರ್ಗಕ್ಕೆ ಮಣೆ ಹಾಕಿದ ಬಿಜೆಪಿ

ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಜಾತಿ ಸಮೀಕರಣದ ಸೂತ್ರದಡಿ ಮೂರು ಪ್ರಮುಖ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

26 Apr, 2018

ಬಸವನಬಾಗೇವಾಡಿ
ಸಿಂಹಾಸನ ಸೇವಾ ಕೈಂಕರ್ಯ ಶ್ಲಾಘನೀಯ

‘ಲಿಂ.ಮಲ್ಲಪ್ಪ ಸಿಂಹಾಸನ ಅವರು (ಮಾಮಲೇದಾರ) ಬಸವಣ್ಣನವರ ಮಾನವೀಯ ಮೌಲ್ಯಗಳನ್ನು ಅರಿತುಕೊಂಡು ಅದರಂತೆ ಜೀವನದಲ್ಲಿ ನಡೆದುಕೊಂಡಿದ್ದನ್ನು ಇತಿಹಾಸದಿಂದ ತಿಳಿದು ಬರುತ್ತದೆ’ ಎಂದು ಉಪನ್ಯಾಸಕಿ ಶೀಲಾ ಅವಟಿ...

26 Apr, 2018

ವಿಜಯಪುರ
ಸ್ಪರ್ಧಾ ಕಣದಿಂದ ಹಿಂದೆ ಸರಿಯಲು ಆಗ್ರಹ

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸ್ಪರ್ಧಿಸಿರುವುದಕ್ಕೆ ಜಿಲ್ಲಾ ಪಂಚಮಸಾಲಿ ಸಮಾಜ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

26 Apr, 2018
‘ಇಂಡಿ: ಬಿಜೆಪಿಯಲ್ಲಿ ಗೊಂದಲ ಇಲ್ಲ’

ಇಂಡಿ
‘ಇಂಡಿ: ಬಿಜೆಪಿಯಲ್ಲಿ ಗೊಂದಲ ಇಲ್ಲ’

25 Apr, 2018