ಪ್ರತಿಭಟನೆ

ಶೌಚಾಲಯ, ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಪಟ್ಟಣದ ಖೇಡ ಕಾಲೊನಿಯಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲದ ಕಾರಣ ಒಂದೇ ಬಯಲು ಸ್ಥಳದಲ್ಲಿ ಶೌಚಾಲಯಕ್ಕೆ ಹೋಗುವ ದುಸ್ಥಿತಿ ಉಂಟಾಗಿದೆ.

ಇಂಡಿಯ ಖೇಡ ಕಾಲೊನಿಯಲ್ಲಿ ಸಾರ್ವಜನಿಕ ಶೌಚಾಲಯ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಕಾಲೊನಿ ನಿವಾಸಿಗಳು ಪುರಸಭೆ ಅದ್ಯಕ್ಷ ಶ್ರೀಕಾಂತ ಕುಡಿಗನೂರಗೆ ಮನವಿ ಸಲ್ಲಿಸಿದರು

ಇಂಡಿ: ಇಂಡಿಯ ಖೇಡ ಕಾಲೊನಿಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಕಾಲೊನಿ ನಿವಾಸಿಗಳು ಈಚೆಗೆ ಪುರಸಭೆ ಎದುರು ಪ್ರತಿಭಟನೆ ನಡೆಸಿ, ಅಧ್ಯಕ್ಷ ಶ್ರೀಕಾಂತ ಕುಡಿಗನೂರಗೆ ಮನವಿ ಸಲ್ಲಿಸಿದರು.

ಎಂ.ಬಿ.ಮಾಣಿಕ ಮಾತನಾಡಿ, ಪಟ್ಟಣದ ಖೇಡ ಕಾಲೊನಿಯಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲದ ಕಾರಣ ಒಂದೇ ಬಯಲು ಸ್ಥಳದಲ್ಲಿ ಶೌಚಾಲಯಕ್ಕೆ ಹೋಗುವ ದುಸ್ಥಿತಿ ಉಂಟಾಗಿದೆ. ಹೀಗಾಗಿ ಕೂಡಲೇ ಪುರಸಭೆ ಇತ್ತ ಕಡೆ ಗಮನ ನೀಡಿ 15 ದಿನಗಳಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೇ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಮಚಂದ್ರ ಐರೊಡಗಿ, ಶಂಕರ ಹೂಗಾರ, ಅಂಬಣ್ಣ ಐರೊಡಗಿ, ಮಾದೇವ ದಂಡವತೆ, ಸುರೇಶ ಅರಬಳ್ಳಿ, ಅರ್ಜುನ ಕ್ಷತ್ರಿ, ಸೀತಾಬಾಯಿ ಮಾದರ, ನಿಂಗಪ್ಪ ಪೂಜಾರಿ, ಕಸ್ತೂರಿ ರಾಠೋಡ, ಸಾಬವ್ವ ಪೂಜಾರಿ, ಲಕ್ಷಿಂಬಾಯಿ ಆಕಳವಾಡಿ, ಶಾರದಾ ಕುಂಬಾರ, ಮೀರಮ್ಮ ಶೇಖ, ಬಾನು ಅಥಣಿಕರ, ನೀಲಬಾಯಿ ಪೂಜಾರಿ, ರೂಪಾ ಕನ್ನೊಳ್ಳಿ, ಶೋಭಾ ಐರೊಡಗಿ, ಗೋದಾಬಾಯಿ ಕ್ಷತ್ರಿ, ಭವರಮ್ಮ ಕರೂಟಿ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸಿ

ವಿಜಯಪುರ
ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸಿ

17 Jan, 2018

ಇಂಡಿ
ಭರವಸೆ ಈಡೆರಿಸಿದ್ದೇನೆ ಮತ್ತೆ ಆಶೀರ್ವದಿಸಿ

‘ಅಗರಖೇಡ ಗ್ರಾಮದ ಶಾದಿ ಮಹಲ್ ನಿರ್ಮಾಣಕ್ಕೆ ₹ 50 ಲಕ್ಷ, ಹಿರೇಬೇವನೂರ ಗ್ರಾಮದಲ್ಲಿ ಶಾದಿಮಹಲ್ ಕಟ್ಟಡಕ್ಕೆ ₹ 1 ಕೋಟಿ ಮಂಜೂರಾಗಿದೆ’

17 Jan, 2018

ವಿಜಯಪುರ
‘ದೇಶದಲ್ಲಿಯೇ ಕರ್ನಾಟಕ ಮಾದರಿ’

ನಗರದ ಬಡವರಿಗೆ ಸರ್ಕಾರದಿಂದ ಸಿಗುವಂತಹ ಅನೇಕ ಸೌಲಭ್ಯಗಳನ್ನು ಬಡ ಜನರಿಗೆ ಯಾವುದೇ ತೊಂದರೆ ಇಲ್ಲದೆ, ಅವರ ಮನೆ ಬಾಗಿಲಿಗೆ ತಲುಪುವಂತೆ ಮಾಡಿದ್ದೇನೆ.

17 Jan, 2018
ಆಲಮಟ್ಟಿ ಉದ್ಯಾನಕ್ಕೆ ಪ್ರವಾಸಿಗರ ಲಗ್ಗೆ

ಆಲಮಟ್ಟಿ
ಆಲಮಟ್ಟಿ ಉದ್ಯಾನಕ್ಕೆ ಪ್ರವಾಸಿಗರ ಲಗ್ಗೆ

16 Jan, 2018
ನೀರಾವರಿಗೆ ₹ 13 ಸಾವಿರ ಕೋಟಿ ಖರ್ಚು

ವಿಜಯಪುರ
ನೀರಾವರಿಗೆ ₹ 13 ಸಾವಿರ ಕೋಟಿ ಖರ್ಚು

15 Jan, 2018