ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ನ್ಯಾಯ ಕೊಡಿಸುವುದೇ ಸಂಘದ ಉದ್ದೇಶ

ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶ, ಸರ್ಕಾರಿ ಅಧಿಕಾರಿಗಳ ಜತೆ ಸಂವಾದ
Last Updated 31 ಡಿಸೆಂಬರ್ 2017, 11:15 IST
ಅಕ್ಷರ ಗಾತ್ರ

ಮರಳವಾಡಿ (ಕನಕಪುರ): ರೈತ ಹತಾಶನಾಗುವುದು ಬೇಡ, ಅವರಿಗೆ ಆಗುವ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿ ನ್ಯಾಯ ಕೊಡಿಸುವುದೇ ರೈತ ಸಂಘದ ಮುಖ್ಯ ಉದ್ದೇಶ. ನಿಮ್ಮ ಜತೆಗೆ ನಾವಿದ್ದೇವೆ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಎ.ನಾರಾಯಣಗೌಡ ತಿಳಿಸಿದರು.

ತಾಲ್ಲೂಕಿನ ಮರಳವಾಡಿ ಗ್ರಾಮದ ಬಸ್‌ ನಿಲ್ದಾಣದಲ್ಲಿ ರೈತ ಸಂಘದ ವತಿಯಿಂದ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶ ಮತ್ತು ಸರ್ಕಾರಿ ಅಧಿಕಾರಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ಮನೆಕಟ್ಟಲು, ಐಷರಾಮಿ ಬದುಕು ಸಾಗಿಸಲು ಬ್ಯಾಂಕುಗಳಲ್ಲಿ ಸಾಲ ಮಾಡುವುದಿಲ್ಲ. ಕೃಷಿ ಚಟುವಟಿಕೆಗಾಗಿ, ವ್ಯವಸಾಯ ಅಭಿವೃದ್ಧಿ ಪಡಿಸುವುದಕ್ಕಾಗಿ ಸಾಲ ಮಾಡುತ್ತಾರೆ. ಅದರೆ ಅದರಲ್ಲಿ ಯಶಸ್ವಿಯಾಗದೇ ಸಾಲದಲ್ಲಿ ಸಿಲುಕಿಕೊಳ್ಳುತ್ತಾರೆ. ಇಂತಹ ರೈತರಿಗೆ ಸರ್ಕಾರ ಸಾಲ ಮನ್ನಾ ಮಾಡುವ ಮೂಲಕ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಅಧ್ಯಕ್ಷ ಎನ್‌.ದೇವರಾಜು ಮಾತನಾಡಿ, ರೈತ ಸಂಘ ಯಾರದೇ ಪರವಾಗಿ ಕೆಲಸ ಮಾಡವ ಸಂಘಟನೆಯಲ್ಲ. ಇಂದು ರೈತ ಅನುಭವಿಸುತ್ತಿರುವ ನೋವು ಮತ್ತು ಸಮಸ್ಯೆಗಳನ್ನು ಎದುರಿಸಲು ಹಾಗೂ ಸರ್ಕಾರದಿಂದ ಸಿಗಬೇಕಾದ ನ್ಯಾಯಯುತ ಸೌಲಭ್ಯ ಹಾಗೂ ಸವಲತ್ತು ಕಲ್ಪಿಸಲು ರೈತ ಸಂಘಟನೆ ರೈತರ ಪರವಾದ ಹೋರಾಟ ಮಾಡಲಿದೆ ಎಂದರು.

ಕಂದಾಯ ಇಲಾಖೆಯ ಕೃಷ್ಣಪ್ಪ, ಬೆಸ್ಕಾಂ ಇಲಾಖೆಯ ಎನ್‌.ಮುನ್ನಾ, ಕೃಷಿ ಇಲಾಖೆ ಮಂಜುಳ, ತೋಟಗಾರಿಕೆ ಇಲಾಖೆ ಕುಮಾರ್‌, ಪಶು ಸಂಗೋಪನಾ ಇಲಾಖೆ ರಾಮಚಂದ್ರಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಜು, ಪೊಲೀಸ್‌ ಇಲಾಖೆಯ ಪ್ರಕಾಶ್‌, ಪಂಚಾಯಿತಿ ಅಧ್ಯಕ್ಷೆ ತಹಶೀನ್‌ ತಾಜ್‌ ಸಂವಾದದಲ್ಲಿ ಉಪಸ್ಥಿತರಿದ್ದರು.

ಮರಳವಾಡಿ ಮಠದ ಮೃತ್ಯುಂಜಯಸ್ವಾಮಿ, ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಪುಟ್ಟಣ್ಣ, ತಾಲ್ಲೂಕು ಘಟಕ ಮತ್ತು ಹೋಬಳಿ ಘಟಕದ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT