ಗಂಗಾವತಿ

ನಾಲ್ವರು ಗ್ರಾ. ಪಂ. ಸದಸ್ಯೆಯರ ಅಪಹರಣ

ಶಿವಮ್ಮ ಗುರಣ್ಣ ಹಾವಳಗಿ, ಶರಣಮ್ಮ ಶರಣೇಗೌಡ ಬಿರಾದಾರ, ಶ್ರೀದೇವಿ ಮಹಾದೇವಪ್ಪ ಪೂಜಾರಿ, ಶಶಿಕಲಾ ಶಿವಣ್ಣ ದೊಡ್ಡಮನಿ ಹಾಗೂ ಶಿವಣ್ಣ ದೊಡ್ಮನಿ ಅಪಹರಣಗೊಂಡಿರುವ ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು.

ಗಂಗಾವತಿ: ಬಹುಮತ ಸಾಬೀತುಪಡಿಸುಲು ಶೀಘ್ರ ದಿನಾಂಕ ನಿಗದಿ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯು ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಪೈಕಿ ನಾಲ್ವರು ಮಹಿಳಾ ಸದಸ್ಯರು ಸೇರಿದಂತೆ ಒಟ್ಟು ಐವರನ್ನು ತಾಲ್ಲೂಕಿನ ಆನೆಗೊಂದಿ ದುರ್ಗಾದೇವಿ ಬೆಟ್ಟದಲ್ಲಿ ಭಾನುವಾರ ಮುಂಜಾನೆ ಅಪರಿಚಿತರು ಅಪಹರಿಸಿದ್ದಾರೆ.

ಶಿವಮ್ಮ ಗುರಣ್ಣ ಹಾವಳಗಿ, ಶರಣಮ್ಮ ಶರಣೇಗೌಡ ಬಿರಾದಾರ, ಶ್ರೀದೇವಿ ಮಹಾದೇವಪ್ಪ ಪೂಜಾರಿ, ಶಶಿಕಲಾ ಶಿವಣ್ಣ ದೊಡ್ಡಮನಿ ಹಾಗೂ ಶಿವಣ್ಣ ದೊಡ್ಮನಿ ಅಪಹರಣಗೊಂಡಿರುವ ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು.

ಗ್ರಾಮ ಪಂಚಾಯಿತಿಯ ಹಾಲಿ ಅಧ್ಯಕ್ಷೆ ಶಿವಮ್ಮ ಗುರಣ್ಣ ಹಾವಳಗಿ ಅವರ ವಿರುದ್ಧ ಸದಸ್ಯರು ಅವಿಶ್ವಾಸ ನಿರ್ಣಯ ತೋರಿಸಿದ್ದರಿಂದ ಬಹುಮತ ಸಾಬೀತು ಪಡಿಸಲು ಶೀಘ್ರ ದಿನಾಂಕ ನಿಗದಿಯಾಗುವ ಹಿನ್ನೆಲೆಯಲ್ಲಿ ಶಿವಮ್ಮ ಅವರು ಸಹ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ.

ಶನಿವಾರ ಗ್ರಾಮದಿಂದ ಹೊರಟ ಸದಸ್ಯರು ನೇರವಾಗಿ ರಾತ್ರಿ ಆನೆಗೊಂದಿಯ ಬಳಿ ದುರ್ಗಾಬೆಟ್ಟಕ್ಕೆ ಬಂದಿದ್ದಾರೆ. ಮಹಿಳಾ, ಪುರುಷ ಸದಸ್ಯರು ಏಳು ಹಾಗೂ ಕುಟುಂಬ ಸದಸ್ಯರು ಸೇರಿ ಒಟ್ಟು 25 ಜನರ ತಂಡ ಬಂದಿತ್ತು.

ಮಹಿಳಾ ಸದಸ್ಯೆಯರು ಚಳಿ, ಭದ್ರತೆ ಹಾಗೂ ಸುರಕ್ಷತೆ ಹಿನ್ನೆಲೆ ವಾಹನದಲ್ಲಿ ಮಲಗಿದ್ದರು. ಉಳಿದವರು ದೇವಸ್ಥಾನಕ್ಕೆ ತೆರಳಿ ದೇಗುಲದ ಆವರಣದಲ್ಲಿ ಮಲಗಿದ್ದರು. ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಅಪರಿಚಿತರು ಬಂದು ಚಾಲಕನಿಗೆ ಪಿಸ್ತೂಲು ತೋರಿಸಿ ಮಹಿಳಾ ಸದಸ್ಯೆಯರನ್ನು ಅಪಹರಿಸಿದ್ದಾರೆ.

ಚಾಲಕ ರಾಜೂಗೌಡ ಪಾಟೀಲ್ ಅವರಿಗೆ ಪಿಸ್ತೂಲು ತೋರಿಸಿ ವಾಹನ ಸಮೇತ ಗಂಗಾವತಿಯಿಂದ ಹೊರವಲಯಕ್ಕೆ ಕರೆದೊಯ್ದ ಅಪರಿಚಿರು, ತಾಲ್ಲೂಕಿನ ಹೇರೂರು ಬಳಿ ಆತನನ್ನು ಇಳಿಸಿ ಅಧ್ಯಕ್ಷೆ ಅಕಾಂಕ್ಷಿ ಶಿವಮ್ಮ ಗುರಣ್ಣ ಹಾವಳಗಿ ಸಹಿತ ಒಟ್ಟು ನಾಲ್ಕು ಜನ ಸದಸ್ಯೆಯರನ್ನು ಅಪಹರಿಸಲಾಗಿದೆ.

ಬೊಬ್ಬನಳ್ಳಿಯ ಚಂದ್ರಕಾಂತ ಶರಣ್ಣ ಸಗರ, ನಿಂಗಣ್ಣ ವಿಠೋಬ ಚನ್ನಣ್ಣ, ಗುಂದಗಿಯ ಮಲ್ಲನಗೌಡ ಪಾಟೀಲ್ ಕಟ್ಟಿ, ಮರಿಯಪ್ಪ ಸಿಂಗೆ ಗುಂದಗಿ, ಸಿದ್ದನಗೌಡ ಬಸವನಗೌಡ ಪಾಟೀಲ್ ಎಂಬುವವರು ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಉಳಿದ ಸದಸ್ಯರು ದೂರು ನೀಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಕುಷ್ಟಗಿ
ಮಕ್ಕಳ ಹಕ್ಕು ರಕ್ಷಣೆ ಸಮಾಜದ ಕರ್ತವ್ಯ

ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಹೆಚ್ಚಳಕ್ಕೆ ಸಾರ್ವಜನಿಕರಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಇಲ್ಲದಿರುವುದೂ ಪ್ರಮುಖ ಕಾರಣ ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಎನ್‌.ಎಸ್‌.ಕುಲಕರ್ಣಿ...

26 Apr, 2018

ಹನುಮಸಾಗರ
‘ಭಾಗ್ಯ’ಗಳಿಂದಲೇ ಕಾಂಗ್ರೆಸ್‌ಗೆ ಗೆಲವು

ಬಡವರು, ರೈತರು, ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ‘ಭಾಗ್ಯ’ಗಳ ಹೆಸರಿನಲ್ಲಿ ಜಾರಿಗೆ ತಂದ ಸರ್ಕಾರ ಗೆಲುವಿಗೆ ಕಾರಣವಾಗಲಿವೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಅಮರೇಗೌಡ ಪಾಟೀಲ ಬಯ್ಯಾಪೂರ...

26 Apr, 2018
ವಾಸವಿ ಜಯಂತಿ: ಅದ್ಧೂರಿ ಮೆರವಣಿಗೆ

ಕನಕಗಿರಿ
ವಾಸವಿ ಜಯಂತಿ: ಅದ್ಧೂರಿ ಮೆರವಣಿಗೆ

26 Apr, 2018
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮತ ಜಾಗೃತಿ

ಕಾರಟಗಿ
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮತ ಜಾಗೃತಿ

25 Apr, 2018
ನಾಮಪತ್ರ: ಕೊನೆಯ ದಿನದ ಭರಾಟೆ

ಕೊಪ್ಪಳ
ನಾಮಪತ್ರ: ಕೊನೆಯ ದಿನದ ಭರಾಟೆ

25 Apr, 2018