ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಜಡ್ಜ್ ಆಗಬೇಕು...’

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

1. ಕೋರ್ಟಿನಲ್ಲಿ ಜಡ್ಜ್ ಆಗಬೇಕೆಂದರೆ ಏನು ಓದಬೇಕು ಮತ್ತು ಅರ್ಹತೆಗಳೇನು? ವಯಸ್ಸು? ಈ ಎಲ್ಲದರ ಬಗ್ಗೆ ವಿಸ್ತೃತವಾದ ವಿವರ ನೀಡಿ.

ಪ್ರದೀಪ, ಊರು ಬೇಡ

ಜಡ್ಜ್ ಆಗಬೇಕೆಂಬ ಆಸೆ ನಿಮ್ಮಲ್ಲಿ ಇರುವುದರಿಂದ ನೀವು ದ್ವಿತೀಯ ಪಿಯುಸಿಯ ನಂತರ ‘ಲಾ’ ಕೋರ್ಸ್‌ಗೆ ಸೇರಬೇಕು. ಸೈನ್ಸ್, ಆರ್ಟ್ಸ್ ಮತ್ತು ಕಾಮರ್ಸ್ ಸ್ಟ್ರೀಂನವರು ಲಾ ಪ್ರವೇಶ ಪರೀಕ್ಷೆ ಬರೆಯಲು ಅರ್ಹರು. ನಿಮ್ಮಲ್ಲಿ ವಿಮರ್ಶೆ ಮಾಡುವ ಎಬಿಲಿಟಿ ಯಾರ ಪರವಹಿಸದಿರುವ ಗುಣ, ತಾಳ್ಮೆ, ಬುದ್ಧಿವಂತಿಕೆ, ತೀರ್ಪು ತೆಗೆದುಕೊಳ್ಳಬಲ್ಲ ಆತ್ಮವಿಶ್ವಾಸ ಇದ್ದಲ್ಲಿ, ನೀವು ಲಾ ಕರಿಯರ್ ಅನ್ನು ಆರಿಸಿ.

ನಮ್ಮ ದೇಶದಲ್ಲಿ 18 ನ್ಯಾಷನಲ್ ಲಾ ಸ್ಕೂಲ್‌ಗಳಿವೆ. ಪ್ರತಿವರ್ಷವೂ ಒಂದು ಲಾ ಸ್ಕೂಲ್ CLAT (ಕಾಮನ್ ಲಾ ಅಡ್‌ಮಿಷನ್ ಟೆಸ್ಟ್) ನಡೆಸುತ್ತದೆ. ಈ ಪರೀಕ್ಷೆಯ ಪ್ರಕಟಣೆ ಜನವರಿ ತಿಂಗಳಲ್ಲಿ ಬರುತ್ತದೆ. ಮೇ ತಿಂಗಳಲ್ಲಿ ಪರೀಕ್ಷೆ ನಡೆಸುತ್ತಾರೆ. ಇದರಲ್ಲಿ ಪಾಸಾದವರು ರ‍್ಯಾಂಕ್‌ಗಳ ಪ್ರಕಾರ 18 ನ್ಯಾಷನಲ್ ಲಾ ಸ್ಕೂಲ್‌ಗಳಲ್ಲಿ  ದಾಖಲಾಗುತ್ತಾರೆ. ಈ ಪರೀಕ್ಷೆಯ ಸ್ಕೋರ್‌ಅನ್ನು 43 ಇತರ ಲಾ ಕಾಲೇಜುಗಳು, ಎರಡು ಪಬ್ಲಿಕ್ ಸೆಕ್ಟರ್ ಇನ್ಸಿಟಿಟ್ಯೂಟ್‌ಗಳು ಬಳಸುತ್ತಾರೆ.

CALT ನ್ಯಾಷನಲ್ ಲೆವೆಲ್ ಎಂಟ್ರೆನ್ಸ್ ಟೆಸ್ಟ್: ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ ಶೇ 50 ಮಾರ್ಕ್ಸ್, ಜನರಲ್ ಕ್ಯಾಟಗರಿಯವರಿಗೆ, ಶೇ 45 ಓಬಿಸಿ/ ಎಸ್‌ಸಿ/ಎಸ್‌ಟಿ ಯವರಿಗೆ ನಿರ್ಧರಿಸಿದ್ದಾರೆ. ಈ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಈ ಪರೀಕ್ಷೆಯ ಫಲಿತಾಂಶಕ್ಕೆ ಒಂದು ವರ್ಷದ ವ್ಯಾಲಿಟಿಡಿ ಇದೆ.

ಪರೀಕ್ಷೆ ಎರಡು ಗಂಟೆಯ ಅವಧಿ. ಆಬ್‌ಜೆಕ್‌ಟೀವ್ ಟೈಪ್ ಪ್ರಶ್ನೆಗಳನ್ನು 200 ಅಂಕಕ್ಕೆ, ನ್ಯೂಮರಿಕಲ್ ಎಬಿಲಿಟಿ, ಇಂಗ್ಲಿಷ್ ವಿತ್ ಕಾಂಪ್ರಹೆನ್‌ಷನ್, ಜನರಲ್ ನಾಲ್ಡೆಜ್, ಕರೆಂಟ್ ಆಫೇರ್ಸ್, ಲೀಗಲ್ ಆಫ್ಟಿಟ್ಯೂಡ್, ಲೀಗಲ್ ಅವೇರ್‌ನೆಸ್, ಲಾಜಿಕಲ್ ರೀಸನಿಂಗ್ ಇವುಗಳು ನಿಮ್ಮಲ್ಲಿ ಇದೆಯೇ ಅಂತ ಪರೀಕ್ಷಿಸುತ್ತಾರೆ.

ಬಿ.ಎ.ಎಲ್.ಎಲ್.ಬಿ. (BA, LLB) ಐದು ವರ್ಷದ ಇಂಟಿಗ್ರೇಟೆಡ್ ಕೋರ್ಸ್.

ವಯೋಮಿತಿ ಜನರಲ್ ಕ್ಯಾಟಗರಿ ಅವರಿಗೆ 20 ವರ್ಷ, ಓಬಿಸಿ/ಎಸ್.ಸಿ./ಎಸ್.ಟಿ. ಅವರಿಗೆ 22 ವರ್ಷ.

ನ್ಯಾಷನಲ್ ಲಾ ಸ್ಕೂಲ್ ವಿವರಗಳನ್ನು ಅದರ ವೆಬ್‌ಸೈಟ್‌ನಿಂದ ಪಡೆಯಬಹುದು. ಬೆಂಗಳೂರಿನಲ್ಲಿರುವ NLSIU (ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ) ಹೆಚ್ಚಿನ ವಿವರ ಪಡೆಯಬಹುದು. www.nls.ac.in

ಸೀಟ್ ಸಿಕ್ಕಿದ ಯಾವ ವಿದ್ಯಾರ್ಥಿಯೇ ಆಗಲಿ ಆರ್ಥಿಕ ತೊಂದರೆಯಿಂದ ಕೋರ್ಸ್ ಬಿಡಬಾರದೆಂದು, ಸ್ಕಾಲರ್‌ಷಿಪ್‌ಗಳನ್ನು ಸಹ ಕೊಡುತ್ತಾರೆ. ಇಲ್ಲಿ ಮೆರಿಟ್, ಮೆರಿಟ್–ಕಮ್–ಮೀಸ್ಸ್ ಸ್ಕಾಲರ್‌ಷಿಪ್, ಫ್ರೀಷಿಪ್‌ – ಹೀಗೆ ಬೇರೆ ಬೇರೆ ವಿಂಗಡಕ್ಕೆ ಸ್ಕಾಲರ್‌ಷಿಷ್‌ ನೀಡುತ್ತಾರೆ. CALT ಪರೀಕ್ಷೆಯ ಸಂಪೂರ್ಣ ವಿವರವನ್ನು www.clat. ac.in ಇಂದ ಪಡೆಯಬಹುದು. ಈ ಮೇಲ್ಕಂಡ ವಿವರ, ನೀವು ಜಡ್ಜ್ ಆಗಬೇಕಾದರೆ ಬೇಕಾದ ವಿದ್ಯಾರ್ಹತೆ.

ಮುಂದೆ ನೀವು ಪ್ರಾಕ್ಟೀಸ್ ಮಾಡಬೇಕು, ಅನುಭವವನ್ನು ಪಡೆಯಲು. ನಿಮ್ಮ ಯೋಚನೆಯ ರೀತಿ, ನಿಮ್ಮ ವಿವಿಧ ವಿಷಯಗಳ ಬಗ್ಗೆ ತಿಳಿವಳಿಕೆ, ನಿಮ್ಮ ವರ್ತನೆ – ಈ ಎಲ್ಲವೂ ಜಡ್ಜ್ ಆಗಲು ಮುಖ್ಯ.

ಹೈಕೋರ್ಟ್ ಜಡ್ಜ್ ಆಗಲು ನೀವು ಜೂನಿಯರ್ ಸಿವಿಲ್ ಜಡ್ಜ್ ಪರೀಕ್ಷೆ ಬರೆಯಬೇಕು. ಮೊದಲು 10 ವರ್ಷದ ಅನುಭವ ಬೇಕಿತ್ತು. ಈಗ ನೇರವಾಗಿ ನೀವು ಲಾ ಪಾಸ್ ಮಾಡಿ, ಬಾರ್ ಕೌನ್ಸಿಲ್‌ಗೆ ದಾಖಲೆಯಾಗಿದ್ದರೆ ಸಾಕು. ಈ ಪರೀಕ್ಷೆಯಲ್ಲಿ ಪಾಸಾದರೆ ಸಂದರ್ಶನಕ್ಕೆ ಕರೆಯುತ್ತಾರೆ. ಪರೀಕ್ಷೆಯಲ್ಲಿ ಪಡೆದ ನಂಬರ್ ಮತ್ತು ಸಂದರ್ಶನದಲ್ಲಿ ಪಡೆದ ನಂಬರ್ ಮೇರೆಗೆ ಫಲಿತಾಂಶವನ್ನು ಪ್ರಕಟಿಸುತ್ತಾರೆ. ಹೈಕೋರ್ಟ್ ಕಮಿಟಿಯವರು ಇಂಟರ್‌ವ್ಯೂ ನಡೆಸುತ್ತಾರೆ.

ಇನ್ನು ಸುಪ್ರೀಂ ಕೋರ್ಟ್ ಜಡ್ಜ್ ಆಗಬೇಕಾದರೆ, ಹೈಕೋರ್ಟ್‌ನಿಂದ, ಚೀಫ್ ಜಸ್ಟೀಸ್ ಆಫ್ ಇಂಡಿಯಾ ಮಾತ್ರ ಮತ್ತು ಇಬ್ಬರು ಸೀನಿಯರ್ ಜಡ್ಜ್‌ಗಳು  ಉಳ್ಳ ಕಮಿಟಿಗೆ ಅಪೀಲನ್ನು ಕಳುಹಿಸುತ್ತಾರೆ. ಅವರು ಇಂಟರ್‌ವ್ಯೂ ನಡೆಸಿ, ಆಯ್ಕೆ ಮಾಡಿದ ಹೆಸರು ಮತ್ತು ಅವರ ವಿವರವನ್ನು ಪ್ರೆಸಿಡೆಂಟ್ ಆಫ್ ಇಂಡಿಯಾಗೆ ಕಳಿಸುತ್ತಾರೆ. ಪ್ರೆಸಿಡೆಂಟ್ ಆಯ್ಕೆ ಮಾಡಿ ನೇಮಕ ಮಾಡುತ್ತಾರೆ.

ಎಲ್ಲಾ ವಿವರವನ್ನು ಕೊಟ್ಟಿದ್ದೇನೆ. ನೀವೀಗ ತಯಾರಿ ಶುರು ಮಾಡಬೇಕು.

2. ಡಿಪ್ಲೊಮ ಮಾಡಿದವರು police sub inspector(psi) ಆಗಲು ಏನು ಮಾಡಬೇಕು? 

ವಿನೋದ್ ಬಾಗಲಕೋಟೆ

ಪಿ.ಎಸ್.ಐ. (ಪೊಲೀಸ್ ಸಬ್‌ಇನ್ಸ್‌ಪೆಕ್ಟರ್) ಆಗಲು ಡಿಗ್ರಿ ಬೇಕೇ ಬೇಕು. ನೀವು ದೂರಶಿಕ್ಷಣದ ಮೂಲಕ ಡಿಗ್ರಿ ಪಡೆದು, ಪ್ರವೇಶಪರೀಕ್ಷೆ ತೆಗೆದುಕೊಳ್ಳಬೇಕು. ಈ ಪರೀಕ್ಷೆಯನ್ನು ಪುರುಷರು ಮತ್ತು ಮಹಿಳೆಯರೂ ತೆಗೆದುಕೊಳ್ಳಬಹುದು. ಈ ಪರೀಕ್ಷೆಯ ಪ್ರಕಟಣೆ ಆಗಸ್ಟ್‌ನಲ್ಲಿ ಬರುತ್ತದೆ.

ವಿದ್ಯಾರ್ಹತೆ: ಡಿಗ್ರಿ (ವಿಜ್ಞಾನಪದವಿ ಮಾತ್ರ), ವಯಸ್ಸು: 21 ವರ್ಷ (ಜನರಲ್), ಎಸ್.ಸಿ./ಎಸ್‌.ಟಿ. 28 ವರ್ಷ, ಇತರರಿಗೆ 30 ವರ್ಷ

ಭಾರತೀಯ ನಾಗರಿಕರಾಗಿರಬೇಕು. (ಸಿಟಿಜನ್ ಆಫ್ ಇಂಡಿಯಾ) ಹೆಚ್ಚಿನ ವಿವರ ವೆಬ್‌ಸೈಟ್‌ನಿಂದ ಪಡೆಯಿರಿ. ವೆಬ್: www.ksp.gov.in ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕು.

ಸಹಿಷ್ಣುತೆ (endurance test) ET ಮತ್ತು ದೇಹದಾರ್ಢ್ಯತೆ (physical standard test) PST, ಪರೀಕ್ಷೆಯಲ್ಲೂ ಉತ್ತೀರ್ಣರಾಗಬೇಕು. ನಂತರ ಲಿಖಿತ (written test) ಪರೀಕ್ಷೆಗೆ ಕರೆಬರುತ್ತದೆ. ಈ ಕರೆಪತ್ರ ವಿಲ್ಲದವರು ಪರೀಕ್ಷೆ ಬರೆಯುವ ಹಾಗಿಲ್ಲ. ಕರೆಪತ್ರದ ಜೊತೆ ಪಾಸ್‌ಪೋರ್ಟ್‌, ವಾಹನ ಚಾಲನಾಪರವಾನಗಿ ಪತ್ರ, ಫ್ಯಾನ್‌ ಕಾರ್ಡ್‌, ಸರ್ವೀಸ್‌ ಐಡಿ ಕಾರ್ಡ್‌, ಯಾವುದಾದರೂ ಒಂದನ್ನು ತರಬೇಕು.

ಪರೀಕ್ಷೆಗೆ:

1. ಲಿಖಿತ ಪರೀಕ್ಷೆಯ ಕರೆಪತ್ರ.

2. ಸಹಿಷ್ಣುತೆ ಮತ್ತು ದೇಹದಾಢ್ಯತೆ ಪರೀಕ್ಷೆಯ ಫಲಿತಾಂಶ ಹಾಳೆ.

3. ಗುರುತಿನ ಚೀಟಿ.

4. ಆನ್‌ಲೈನ್‌ ಅರ್ಜಿಯ ಜೆರಾಕ್ಸ್‌ ಪ್ರತಿಯನ್ನು ತೆಗೆದುಕೊಂಡು ಹೋಗಬೇಕು. ಪರೀಕ್ಷೆಯಲ್ಲಿ 2 ಪೇಪರ್‌ ಇರುತ್ತದೆ. ಇದನ್ನು ಪಾಸುಮಾಡಿದ ನಂತರ ಇಂಟರ್‌ವ್ಯೂ. ಇದಾದ ನಂತರ ವೈದ್ಯಕೀಯ ಪರೀಕ್ಷೆ.

ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು, ನಿರ್ಧರಿಸಿ.

3. ನನಗೆ ಡಿಪ್ಲೊಮ ಇನ್ ಜರ್ನಲಿಸಂ ಮಾಡಬೇಕೆಂದು ಆಸೆ ಇದೆ. ಇದರಲ್ಲಿ ಒಂದು ವರ್ಷದ ಕೋರ್ಸ್‌ ಇದೆಯೆ? ನಮ್ಮದು ಬಡಕುಟುಂಬ‌. ಕಡಿಮೆ ವೆಚ್ಚದಲ್ಲಿ ಕೋರ್ಸ್ ಮಾಡಬೇಕೆಂಬ ಬಯಕೆ ಇದೆ. ದ್ವಿತೀಯ ಪಿಯುಸಿಯಲ್ಲಿ ಶೇ 66 ಅಂಕಗಳನ್ನು ಪಡೆದುಕೊಂಡಿರುತ್ತೇನೆ.

ಕಾರೆಪ್ಪ, ಊರು ಬೇಡ

ಬಡತನ ಇರುವುದರಿಂದ ಕಡಿಮೆ ಸಮಯ (ಒಂದು ವರ್ಷ)ದ ಕೋರ್ಸ್‌ ಮಾಡಬೇಕು ಅನ್ನುವುದು ಸರಿಯಲ್ಲ. ನಿಮ್ಮಲ್ಲಿ ಭಾಷಾಜ್ಞಾನ, ವರ್ಬಲ್‌ ಎಬಿಲಿಟಿ, ಕಮ್ಯೂನಿಕೇಷನ್‌ ಸ್ಕಿಲ್‌, ವಿಷಯ ಸಂಗ್ರಹಣ ಶಕ್ತಿ, ಕುತೂಹಲ, ಎಲ್ಲೆಲ್ಲಿ ಒಂದು ವಿಷಯದ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಬಲ್ಲಿರಿ ಅನ್ನುವ ಎಬಿಲಿಟಿ, ಎಲ್ಲಾ ಇದ್ದರೆ, ನಿಮ್ಮ ಕನಸು ನನಸಾಗಲು ಸಾಧ್ಯ.

ಪಿಯುಸಿಯಲ್ಲಿ  ಶೇ 66 ತೆಗೆದುಕೊಂಡಿದ್ದೀರಿ. ನೀವು ಬಿಎ ಡಿಗ್ರಿಗೆ ಅರ್ಜಿ ಸಲ್ಲಿಸಿ. ಅದರಲ್ಲಿ ಪತ್ರಿಕೋದ್ಯಮ, ಇಂಗ್ಲಿಷ್‌ ಭಾಷೆಯ ಕಾಂಬಿನೇಷನ್‌ ತೆಗೆದುಕೊಂಡು ಓದಿ. ಸ್ನಾತಕೋತ್ತರ ಎಂ.ಎ. (ಜರ್ನಲಿಸಂ) ಅನ್ನು ಉತ್ತಮವಾದ ಕಡೆಯಿಂದ ಓದಿ ಡಿಗ್ರಿ ಪಡೆದರೆ, ಒಳ್ಳೆ ಕೆಲಸ ಸಿಕ್ಕುತ್ತದೆ.

ಭಾರತ ಸರ್ಕಾರ, ಮಿನಿಸ್ಟ್ರಿ ಆಫ್‌ ಹ್ಯೂಮನ್‌ ರಿರ್ಸೋಸ್‌ ಡೆವೆಲಪ್‌ಮೆಂಟ್‌, ನ್ಯಾಷನಲ್‌ ಸ್ಕಾಲರ್‌ಷಿಪ್‌ ನೀಡುತ್ತದೆ.

ವಿವರವನ್ನು www.mhrd.gov.in/Scholarship ಮೂಲಕ ಅಥವಾ,

Natural Scholarship division

Ministry of Human Resource Development

Department of Higher Education West Block1, 2nd Floor, Wing 6, Room no 6, R.K. Puram, Sector, New Delhi - 110066 – ಇಲ್ಲಿಂದ ಪಡೆಯಬಹುದು.

ಹಲವಾರು ಜಾತಿ, ಪಂಗಡಗಳು ಸಹ ಧನಸಹಾಯ ನೀಡುತ್ತಾರೆ. ಬ್ಯಾಂಕ್‌ಗಳಲ್ಲಿ ಸಾಲವೂ ದೊರೆಯುತ್ತದೆ.

‘ಮನಸ್ಸಿದ್ದಲ್ಲಿ ಮಾರ್ಗ’ ಎನ್ನುವಂತೆ ನಿಮ್ಮ ದಾರಿಯನ್ನು ನೀವೇ ಹುಡುಕಿ, ನಿರ್ಧರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT