ಮೈಸೂರಿನಲ್ಲೂ ಮಾಗಿಹಬ್ಬ

ರಸ್ತೆಹಬ್ಬದ ಖುಷಿ!

ನೂರಾರು ಸ್ತ್ರೀ-ಪುರುಷರು, ಮಕ್ಕಳು ಈ ರಸ್ತೆಹಬ್ಬದಲ್ಲಿ ಖುಷಿಪಟ್ಟದ್ದನ್ನು, ಕುಣಿದದ್ದನ್ನು ಕಂಡು ರೋಮಾಂಚಿತನಾದೆ. ಜನಪದೀಯ ತಳಸಂಸ್ಕೃತಿಯ ದೇವಾನುದೇವತೆಗಳ, ನಂದಿಯ, ದುರ್ಗೆಯ, ಯಕ್ಷಗಂಧರ್ವರ ಬೃಹತ್ ಮೂರ್ತಿಗಳೊಂದಿಗೆ ಜನರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಆದರೆ ರಸ್ತೆಯಲ್ಲೇ ಅದ್ಧೂರಿಯ ವೇದಿಕೆ ನಿರ್ಮಿಸಿ ಸಿನಿಮಾ ಹಾಡುಗಳನ್ನು ಹಾಕಿದ್ದು ಮಾತ್ರ ಹಬ್ಬದ ಮೂಲ ಆಶಯಕ್ಕೆ ಧಕ್ಕೆ ತರುವಂತಿತ್ತು.

ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೊ, ಓಕ್ಲಂಡ್‌, ಬರ್ಕಲಿಗಳಲ್ಲಿ ರಸ್ತೆಹಬ್ಬಗಳನ್ನು (ಸ್ಟ್ರೀಟ್ ಫೆಸ್ಟಿವಲ್) ನೋಡಿದ ನಾನು, ಮೈಸೂರಿನಲ್ಲೂ ಮಾಗಿಹಬ್ಬದ ಅಂಗವಾಗಿ ರಸ್ತೆಹಬ್ಬ ಆಚರಿಸುವುದನ್ನು ನೋಡಲು ಖುಷಿಯಿಂದ ಕುಟುಂಬಸಹಿತವಾಗಿ ಹೋದೆ.

ನೂರಾರು ಸ್ತ್ರೀ-ಪುರುಷರು, ಮಕ್ಕಳು ಈ ರಸ್ತೆಹಬ್ಬದಲ್ಲಿ ಖುಷಿಪಟ್ಟದ್ದನ್ನು, ಕುಣಿದದ್ದನ್ನು ಕಂಡು ರೋಮಾಂಚಿತನಾದೆ. ಜನಪದೀಯ ತಳಸಂಸ್ಕೃತಿಯ ದೇವಾನುದೇವತೆಗಳ, ನಂದಿಯ, ದುರ್ಗೆಯ, ಯಕ್ಷಗಂಧರ್ವರ ಬೃಹತ್ ಮೂರ್ತಿಗಳೊಂದಿಗೆ ಜನರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಆದರೆ ರಸ್ತೆಯಲ್ಲೇ ಅದ್ಧೂರಿಯ ವೇದಿಕೆ ನಿರ್ಮಿಸಿ ಸಿನಿಮಾ ಹಾಡುಗಳನ್ನು ಹಾಕಿದ್ದು ಮಾತ್ರ ಹಬ್ಬದ ಮೂಲ ಆಶಯಕ್ಕೆ ಧಕ್ಕೆ ತರುವಂತಿತ್ತು.

ರಸ್ತೆ ಹಬ್ಬವೆಂದರೆ, ಸಿನಿಮಾ ಸಂಸ್ಕೃತಿ, ಮನೆ ಸಂಸ್ಕೃತಿ, ಮಾಲ್ ಸಂಸ್ಕೃತಿಗಳಿಂದ ಹೊರಬಿದ್ದು; ಎಲ್ಲರೊಂದಿಗೆ ಒಂದಾಗಿ ಸಾಂಸ್ಕೃತಿಕ ಕ್ರೀಡೋತ್ಸವಗಳಲ್ಲಿ ಪಾಲ್ಗೊಂಡು ಖುಷಿಪಡುವುದು. ಸಂಗೀತ- ನರ್ತನ- ನಾಟಕಗಳಿಗೆ ಹೆಸರುವಾಸಿಯಾದ ಮೈಸೂರಿನ ಅಸಂಖ್ಯಾತ ಕಲಾತಂಡಗಳು ಈ ರಸ್ತೆ ಹಬ್ಬದಿಂದ ದೂರ ಉಳಿದದ್ದು ಸರಿ ಕಾಣಲಿಲ್ಲ. ವಿದೇಶಗಳಲ್ಲಿ ಇಂಥ ತಂಡಗಳು ಸ್ಪರ್ಧೆಯಿಂದ ಪಾಲ್ಗೊಳ್ಳುತ್ತವೆ. ರಸ್ತೆಹಬ್ಬ ರೊಕ್ಕದ ಪ್ರದರ್ಶನವಲ್ಲ. ಉಚಿತವಾಗಿ ಸರ್ವರೂ ಒಂದಾಗಿ ಕೂಡುವ ಸಾಂಸ್ಕೃತಿಕ ಮನೋಲ್ಲಾಸ. ನಗರೀಕರಣದ ಮಧ್ಯೆ ತಳಸಂಸ್ಕೃತಿಯ ತಂಪು-ತಲ್ಲಣ! ಅಮೆರಿಕದ ರಸ್ತೆಹಬ್ಬದಲ್ಲಿ ಪುಣೆಯಪ್ರೀತಿ ಎಂಬ ಹುಡುಗಿ ಎಲ್ಲರಿಗೂ ಗಿರ್ಮಿಟ್ ತಿನ್ನಿಸಿದಳು. ಇಲ್ಲಿಯೂ ದೇಶಿ ತಿನಿಸುಗಳು ನಾಲಿಗೆಗೆ ಚುರುಕು ಕೊಟ್ಟವು.

–ಪ್ರೊ. ಜಿ.ಎಚ್. ಹನ್ನೆರಡುಮಠ ಬೆಂಗಳೂರು

 

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಮುಕ್ತ ಲೈಂಗಿಕತೆ ಅಗತ್ಯ

‘ಕಾಮಸೂತ್ರ’ಗಳನ್ನು ನೀಡಿದವರು ನಮ್ಮ ದೇಶದ ವಾತ್ಸ್ಯಾಯನ ಮಹರ್ಷಿ. ಅವರು ಪ್ರತಿಪಾದಿಸಿದಂತೆ ಸ್ವಸ್ಥ ಸಮಾಜಕ್ಕೆ ಮುಕ್ತ ಲೈಂಗಿಕತೆ ಅತ್ಯಗತ್ಯ.

23 Apr, 2018

ವಾಚಕರವಾಣಿ
ಗಾಂಧೀಜಿ ಮುತ್ಸದ್ದಿಯೇ!

ಟಿ.ಕೆ. ತ್ಯಾಗರಾಜ್ ಅವರ ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಆರ್.ಕೆ. ದಿವಾಕರ ಬರೆದಿರುವ ಪತ್ರದ ಕುರಿತು (ವಾ.ವಾ., ಏ. 18) ಈ ಅಭಿಪ್ರಾಯ.

23 Apr, 2018

ವಾಚಕರವಾಣಿ
ವಚನ ಉಲ್ಲೇಖದಲ್ಲಿ ಲೋಪ

ಭಾಷಣ ಮಾಡುವಾಗ ಸಹಜವಾಗಿಯೇ ಸಂಭವಿಸಬಹುದಾದ ಮತ್ತು ಉದಾರವಾಗಿ ನಿರ್ಲಕ್ಷಿಸಬಹುದಾದ ಒಂದು ಸಣ್ಣ ಲೋಪವಿರಬಹುದು. ಆದರೆ ಆ ವಚನಕ್ಕೆ ‘ಸೂಳೆ’ ಎಂಬ ಇಲ್ಲದ ಪದ ಸೇರಿದಾಗ...

23 Apr, 2018

ವಾಚಕರವಾಣಿ
ಉತ್ತಮ ಬೆಳವಣಿಗೆ

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ವಂಚಿತರಾದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಒಕ್ಕೂಟ ರಚಿಸಿಕೊಂಡು ತಮ್ಮಲ್ಲೇ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು...

23 Apr, 2018

ವಾಚಕರವಾಣಿ
ಗೆಲುವು – ಗೊಂದಲ!

ಬರಲಿಹ ಬೃಹತ್ ಚುನಾವಣೆಯಲಿ, ಯಾವ ತಾವರೆ ಗೆಲುವುದು;

22 Apr, 2018