ವಿತ್ತೀಯ ಕೊರತೆ ಶೇ 96.1ಕ್ಕೆ ಏರಿಕೆ

ವಿದೇಶಿ ಹೂಡಿಕೆ ₹ 51,000 ಕೋಟಿ

ಡಿಸೆಂಬರ್‌ನಲ್ಲಿ ದೇಶದ ಷೇರುಪೇಟೆಯಿಂದ ₹ 5,900 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ಆದರೆ ಸಾಲಪತ್ರ ಮಾರುಕಟ್ಟೆಯಲ್ಲಿ ₹ 2,350 ಕೋಟಿ ಹೂಡಿಕೆ ಮಾಡಿದ್ದಾರೆ.

ನವದೆಹಲಿ: ವಿದೇಶಿ ಹೂಡಿಕೆದಾರರು 2017ರಲ್ಲಿ ದೇಶದ ಷೇರುಪೇಟೆಯಲ್ಲಿ ₹ 51,000 ಕೊಟಿ ಬಂಡವಾಳ ತೊಡಗಿಸಿದ್ದಾರೆ. ಈ ಮೊತ್ತದಲ್ಲಿ ಮಾರ್ಚ್‌ ತಿಂಗಳಿನಲ್ಲಿಯೇ ₹ 30,906 ಕೋಟಿ ಹೂಡಿಕೆಯಾಗಿದೆ.

ಡಿಸೆಂಬರ್‌ನಲ್ಲಿ ದೇಶದ ಷೇರುಪೇಟೆಯಿಂದ ₹ 5,900 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ಆದರೆ ಸಾಲಪತ್ರ ಮಾರುಕಟ್ಟೆಯಲ್ಲಿ ₹ 2,350 ಕೋಟಿ ಹೂಡಿಕೆ ಮಾಡಿದ್ದಾರೆ.

ವಿತ್ತೀಯ ಕೊರತೆ ಅಂತರ ಹೆಚ್ಚಾಗಿರುವುದು ಮತ್ತು ಕಚ್ಚಾ ತೈಲ ಬೆಲೆ ಏರಿಕೆ ಕಾಣುತ್ತಿರುವುದರಿಂದ ವಿದೇಶಿ ಹೂಡಿಕೆದಾರರು ಬಹಳ ಎಚ್ಚರಿಕೆಯಿಂದ ಬಂಡವಾಳ ತೊಡಗಿಸುತ್ತಿದ್ದಾರೆ.

ಅಕ್ಟೋಬರ್‌ ಅಂತ್ಯಕ್ಕೆ ವಿತ್ತೀಯ ಕೊರತೆ ಅಂತರ ಶೇ 96.1ಕ್ಕೆ ಏರಿಕೆ ಕಂಡಿದೆ. 2018ರಲ್ಲಿ ವಿದೇಶಿ ಬಂಡವಾಳ ಹೊರಹರಿವು ತಗ್ಗಲಿದೆ. ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ವೃದ್ಧಿ ದರ ಹೆಚ್ಚಾಗಲಿದ್ದು, ನಗದು ಹರಿವಿನ ಪ್ರಮಾಣದಲ್ಲಿಯೂ ಏರಿಕೆ ಕಂಡುಬರಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಎಸ್‌ಬಿಐ: ಹೊಸ ಚೆಕ್‌ಬುಕ್‌  ಕಡ್ಡಾಯ

ಏಪ್ರಿಲ್‌ 1ರಿಂದ ಅನ್ವಯ
ಎಸ್‌ಬಿಐ: ಹೊಸ ಚೆಕ್‌ಬುಕ್‌ ಕಡ್ಡಾಯ

22 Mar, 2018
33 ಸಾವಿರ ಅಂಶ ಗಡಿ ದಾಟಿದ ಷೇರುಪೇಟೆ

ಮುಂಬೈ
33 ಸಾವಿರ ಅಂಶ ಗಡಿ ದಾಟಿದ ಷೇರುಪೇಟೆ

22 Mar, 2018
ಬ್ಯಾಂಕ್‌ ಖಾಸಗೀಕರಣಕ್ಕೆ ನಂದನ್‌ ಬೆಂಬಲ

ಶೇ10ಕ್ಕೆ ಇಳಿಯಲಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮಾರುಕಟ್ಟೆ ಪಾಲು
ಬ್ಯಾಂಕ್‌ ಖಾಸಗೀಕರಣಕ್ಕೆ ನಂದನ್‌ ಬೆಂಬಲ

22 Mar, 2018
ಏ.5ಕ್ಕೆ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪ್ರಕಟ

ಮುಂಬೈ
ಏ.5ಕ್ಕೆ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಪ್ರಕಟ

22 Mar, 2018
‘ಡಬ್ಲ್ಯುಟಿಒ’ ಬಲಪಡಿಸಲು ಸಲಹೆ

ಅನೌಪಚಾರಿಕ ಸಭೆ
‘ಡಬ್ಲ್ಯುಟಿಒ’ ಬಲಪಡಿಸಲು ಸಲಹೆ

21 Mar, 2018