ಕೃಷಿ ಸಚಿವಾಲಯ ಮಾಹಿತಿ

ಬೇಳೆಕಾಳು ಬಿತ್ತನೆ ಶೇ 9 ಹೆಚ್ಚಳ

ಕಳೆದ ವರ್ಷ 138 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆ ಪ್ರಮಾಣದಲ್ಲಿ ಶೇ 9ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.

ಬೇಳೆಕಾಳು ಬಿತ್ತನೆ ಶೇ 9 ಹೆಚ್ಚಳ

ನವದೆಹಲಿ: ಹಿಂಗಾರು ಹಂಗಾಮು ಅವಧಿಯಲ್ಲಿ ಡಿಸೆಂಬರ್‌ 29ರವರೆಗೆ 150 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೇಳೆಕಾಳು ಬಿತ್ತನೆಯಾಗಿದೆ.

ಕಳೆದ ವರ್ಷ 138 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಬಿತ್ತನೆ ಪ್ರಮಾಣದಲ್ಲಿ ಶೇ 9ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.

ಪ್ರಮುಖ ಹಿಂಗಾರು ಬೆಳೆ ಗೋಧಿ ಬಿತ್ತನೆ 290 ಲಕ್ಷ ಹೆಕ್ಟೇರ್‌ಗಳಿಂದ 270 ಲಕ್ಷ ಹೆಕ್ಟೇರ್‌ಗಳಿಗೆ ಇಳಿಕೆ ಕಂಡಿದೆ.

ರಾಜ್ಯಗಳಿಂದ ಪಡೆದಿರುವ ಮಾಹಿತಿಯಂತೆ ಡಿ. 29ರವರೆಗೆ 560 ಲಕ್ಷ  ಹೆಕ್ಟೇರ್‌ ಪ್ರದೇಶದಲ್ಲಿ ಆಹಾರ ಧಾನ್ಯಗಳನ್ನು ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 570 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಮಾಡಲಾಗಿತ್ತು.

ಈ ಬಾರಿಯೂ ದಾಖಲೆ ಮಟ್ಟದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಆಗುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳಿದ್ದಾರೆ.ಆದರೆ, ಆಹಾರ ಧಾನ್ಯಗಳ ಬೆಲೆಗಳು ಬೆಂಬಲ ಬೆಲೆಗಿಂತಲೂ ಕೆಳಕ್ಕೆ ಕುಸಿತ ಕಂಡರೆ ರೈತರು ಸಂಕಷ್ಟಕ್ಕೀಡಾಗಲಿದ್ದಾರೆ ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾರೆ.

2016–17ರಲ್ಲಿ ದಾಖಲೆಯ 27 ಕೋಟಿ ಟನ್‌ ಆಹಾರ ಧಾನ್ಯ ಉತ್ಪಾದನೆ ಆಗಿತ್ತು. ಈ ಬಾರಿಯೂ ಅದೇ ಪ್ರಮಾಣದಲ್ಲಿ ಉತ್ಪಾದನೆ ಆಗಲಿದೆ ತಜ್ಞರು ಹೇಳಿದ್ದಾರೆ.

2013–14ರಲ್ಲಿ 26.50 ಕೋಟಿ ಟನ್‌ ಉತ್ಪಾದನೆ ಆಗಿತ್ತು. 2014–15 ಮತ್ತು 2015–16ರಲ್ಲಿ ಕ್ರಮವಾಗಿ 25.2 ಕೋಟಿ ಟನ್‌ ಮತ್ತು 25.3 ಕೋಟಿ ಟನ್‌ ಉತ್ಪಾದನೆ ಆಗಿತ್ತು.

Comments
ಈ ವಿಭಾಗದಿಂದ ಇನ್ನಷ್ಟು
ವಂಚನೆ: ಜಿಎಸ್‌ಟಿ ಮಂಡಳಿ ಶಂಕೆ

ಬೆಂಗಳೂರು
ವಂಚನೆ: ಜಿಎಸ್‌ಟಿ ಮಂಡಳಿ ಶಂಕೆ

18 Jan, 2018

ನವದೆಹಲಿ
ಎನ್‌ಪಿಎಸ್‌ ನಿಯಮ ಸಡಿಲಿಕೆ

ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್‌) ಭಾಗಶಃ ಹಣ ವಾಪಸ್‌ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

18 Jan, 2018
ಆಲೂಗೆಡ್ಡೆ ಖರೀದಿಗೆ ಒಪ್ಪಂದ

ಉತ್ತರ ಪ್ರದೇಶದಿಂದ 25,000 ಟನ್‌ ಪೂರೈಕೆ
ಆಲೂಗೆಡ್ಡೆ ಖರೀದಿಗೆ ಒಪ್ಪಂದ

18 Jan, 2018
ಸೂಚ್ಯಂಕದ ಹೊಸ ಮೈಲುಗಲ್ಲು

17 ವಹಿವಾಟಿನ ದಿನಗಳಲ್ಲಿ 1 ಸಾವಿರ ಅಂಶಗಳ ಹೆಚ್ಚಳ
ಸೂಚ್ಯಂಕದ ಹೊಸ ಮೈಲುಗಲ್ಲು

18 Jan, 2018
14 ಬಗೆಯ ₹ 10 ಮುಖಬೆಲೆಯ ನಾಣ್ಯ ಚಲಾವಣೆಗೆ ಅರ್ಹ: ಆರ್‌ಬಿಐ ಮತ್ತೆ ಸ್ಪಷ್ಟನೆ

ಗೊಂದಲ ನಿವಾರಿಸಲು ಪ್ರಕಟಣೆ
14 ಬಗೆಯ ₹ 10 ಮುಖಬೆಲೆಯ ನಾಣ್ಯ ಚಲಾವಣೆಗೆ ಅರ್ಹ: ಆರ್‌ಬಿಐ ಮತ್ತೆ ಸ್ಪಷ್ಟನೆ

17 Jan, 2018