ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾಲ ತಾಣಕ್ಕೆ 470 ಕೃಷಿ ಮಂಡಿ ಸೇರ್ಪಡೆ

Last Updated 31 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಹದಿನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ 470 ಕೃಷಿ ಮಾರುಕಟ್ಟೆಗಳು ಅಂತರ್ಜಾಲದಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಕೃಷಿ ಮಾರುಕಟ್ಟೆಗೆ (ಇ–ಎನ್‌ಎಎಂ) ಜೋಡಣೆಗೊಂಡಿವೆ.

‘ಇದುವರೆಗೆ ಈ ಮಾರುಕಟ್ಟೆಯಲ್ಲಿ 1.44 ಕೋಟಿ ಟನ್‌ಗಳಷ್ಟು ಕೃಷಿ ಉತ್ಪಾದನೆಗಳ ₹ 35,816 ಕೋಟಿಗಳಷ್ಟು ವಹಿವಾಟು ನಡೆದಿದೆ’ ಎಂದು ರಾಜ್ಯಸಭೆಗೆ ತಿಳಿಸಲಾಗಿದೆ.

‘ಈ ತಾಣದಲ್ಲಿ ಕೃಷಿ ಉತ್ಪನ್ನಗಳ ಹರಾಜು ಪ್ರಕ್ರಿಯೆ ಸುಧಾರಿಸುತ್ತಿದೆ. ಇದರಿಂದ ರೈತರು ಖಂಡಿತವಾಗಿಯೂ ಪ್ರಯೋಜನ ಪಡೆಯಲಿದ್ದಾರೆ. ಉತ್ತಮ ಬೆಲೆ, ವಹಿವಾಟಿನಲ್ಲಿ ಪಾರದರ್ಶಕತೆ, ಸ್ಪರ್ಧಾತ್ಮಕತೆಯ ಲಾಭವೂ ದೊರೆಯಲಿದೆ’ ಎಂದು ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ರೈತರಿಗೆ ನ್ಯಾಯಯುತ ಬೆಲೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2016ರ ಏಪ್ರಿಲ್‌ನಿಂದ ರಾಷ್ಟ್ರೀಯ ಕೃಷಿ ಮಾರುಕಟ್ಟೆ ಯೋಜನೆ ಕಾರ್ಯಗತಗೊಳಿಸಿದೆ. ಇದೊಂದು ಅಂತರ್ಜಾಲ ಆಧಾರಿತ  ಕೃಷಿ ಮಾರುಕಟ್ಟೆ ತಾಣವಾಗಿದೆ.

ಕೃಷಿ ಉತ್ಪನ್ನಗಳನ್ನು ರಾಜ್ಯದ ಒಳಗೆ ಮತ್ತು ಅಂತರ ರಾಜ್ಯ ವಹಿವಾಟಿಗೆ ಮಾರಾಟ ಮಾಡಲು ಇದು ನೆರವಾಗಲಿದೆ. ಎಲ್ಲ ಮಂಡಿಗಳಲ್ಲಿನ ಬೆಲೆ ಮತ್ತು ಹರಾಜು ಪ್ರಕ್ರಿಯೆ ವಿವರಗಳನ್ನು ಬೆರಳತುದಿಯಲ್ಲಿ ಪಡೆದುಕೊಳ್ಳುವ ರೈತರು ತಮ್ಮ ಉತ್ಪನ್ನಕ್ಕೆ ಉತ್ತಮ ಬೆಲೆ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT