‘ವಿಶ್ವ ಅಂಗವಿಕಲರ ದಿನಾಚರಣೆ’ ಅಂಗವಾಗಿ ಅಂಗವಿಕಲರಿಂದ ರ‍್ಯಾಲಿ

ಅನುಕಂಪ ಬೇಡ, ಸಮಾನತೆ ಬೇಕು

‘ವಿಶ್ವ ಅಂಗವಿಕಲರ ದಿನಾಚರಣೆ’ ಅಂಗವಾಗಿ ಕರ್ನಾಟಕ ಅಂಗವಿಕಲರ ಸಂಘಟನೆ ವತಿಯಿಂದ ನಗರದಲ್ಲಿ ಭಾನುವಾರ ರ‍್ಯಾಲಿ ನಡೆಸಲಾಯಿತು.

ತ್ರಿಚಕ್ರ ವಾಹನಗಳಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ರ‍್ಯಾಲಿ ನಡೆಸಿದ ಅಂಗವಿಕಲರು

ಚಿಕ್ಕಬಳ್ಳಾಪುರ: ‘ವಿಶ್ವ ಅಂಗವಿಕಲರ ದಿನಾಚರಣೆ’ ಅಂಗವಾಗಿ ಕರ್ನಾಟಕ ಅಂಗವಿಕಲರ ಸಂಘಟನೆ ವತಿಯಿಂದ ನಗರದಲ್ಲಿ ಭಾನುವಾರ ರ‍್ಯಾಲಿ ನಡೆಸಲಾಯಿತು.

ನಗರದ ಎಂ.ಜಿ.ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ತ್ರಿಚಕ್ರ ವಾಹನಗಳಲ್ಲಿ ಅಂಗವಿಕಲರು ನಗರದ ಪ್ರಮುಖ ರಸ್ತೆಗಳಲ್ಲಿ ರ‍್ಯಾಲಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಕಾರ್ಯದರ್ಶಿ ಉಷಾ ಕಿರಣ್, ‘ಅಂಗವೈಕಲ್ಯ ಹೊಂದಿದ ಮಾತ್ರಕ್ಕೆ ಯಾರೂ ದೃತಿಗೆಡಬಾರದು. ಮುನ್ನುಗ್ಗಿ ಕೆಲಸ ಮಾಡುವ ಛಲ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಅಂಗವಿಕಲರನ್ನು ಅನುಕಂಪದಿಂದ ನೋಡುವ ಬದಲು ಎಲ್ಲರಿಗೂ ಸಮಾನ ಅವಕಾಶ ಕೊಡಿ. ಎಲ್ಲರಲ್ಲೂ ಒಂದೊಂದು ಪ್ರತಿಭೆ ಇದ್ದೆ ಇರುತ್ತದೆ. ಅದನ್ನು ಹೊರ ತರಲು ಸರ್ಕಾರ ಪ್ರೋತ್ಸಾಹ ನೀಡಬೇಕು’ ಎಂದು ಆಗ್ರಹಿಸಿದರು.

‘ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕರು ಅಂಗವಿಕಲರನ್ನು ಗೌರವಿಸಲು ಮುಂದಾಗಬೇಕು. ಸಾಮಾನ್ಯರಂತೆ ಬಾಳಿ ಬದುಕಲು ಅಂಗವಿಕರ ಕಷ್ಟಗಳಿಗೆ ಪ್ರತಿಯೊಬ್ಬರೂ ನೆರವಾಗಬೇಕು. ಅಂಗವಿಕರನ್ನು ಹೀಯಾಳಿಸುವ ಮನೋಭಾವ ಬಿಡಬೇಕು. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ಎಲ್ಲರೂ ಕೈ ಜೋಡಿಸಿ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಮುಂದಾಗೋಣ’ ಎಂದು ಹೇಳಿದರು.

‘ಸರ್ಕಾರ ಅಂಗವಿಕರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸ್ವಾವಲಂಬಿ ಜೀವನ ನಡೆಸಲು ಸ್ವಯಂ ಉದ್ಯೋಗ ಕಲ್ಪಿಸಬೇಕು. ಪ್ರತಿಯೊಬ್ಬ ಮಗುವಿಗೂ ಪೊಲಿಯೊ ಲಸಿಕೆ ಹಾಕಿಸಬೇಕು’ ಎಂದರು.

ಸಂಘಟನೆ ಅಧ್ಯಕ್ಷ ಕೆ.ಜಿ. ಸುಬ್ರಮಣ್ಯಂ, ಪದಾಧಿಕಾರಿಗಳಾದ ಪಿ.ವಿ ಕುಶಕುಮಾರ, ಕೆ.ಸಿ ಮಮತ, ಕೆ.ಬಿ.ಸುಶೀಲಮ್ಮ, ಬಿ.ಎನ್ ನರಸಿಂಹಮೂರ್ತಿ, ಆರ್. ಚಂದ್ರಶೇಖರ್‌, ಮಂಜುನಾಥ್‌, ನರಸಿಂಹಮೂರ್ತಿ, ಕೃಷ್ಣಪ್ಪ, ಸಂತೋಷ್, ಗಂಗಾಧರ ಜಾಥಾದಲ್ಲಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಚಿಂತಾಮಣಿ
ಬಾಂಧವ್ಯ ವೃದ್ಧಿಗೆ ದಾಸರ ಕೀರ್ತನೆ ಸಹಕಾರಿ

ದಾಸವರೇಣ್ಯರ ಕೀರ್ತನೆಗಳು ದೇವರನ್ನು ಸ್ತುತಿಸುವುದರ ಜತೆಗೆ ಬದುಕಿಗೆ ಅಗತ್ಯವಾದ ಪಾಠ ಕಲಿಸಿಕೊಡುತ್ತವೆ ಎಂದು ರಾಘವೇಂದ್ರಸ್ವಾಮಿ ಮಠದ ಟ್ರಸ್ಟ್‌ ಕಾರ್ಯದರ್ಶಿ ಡಿ.ಎಲ್‌.ಪ್ರಸಾದ್‌ ತಿಳಿಸಿದರು.

24 Mar, 2018

ಚಿಕ್ಕಬಳ್ಳಾಪುರ
ಪುಸ್ತಕದ ಕಡು ವ್ಯಾಮೋಹಿ

‘ಶಿಕ್ಷಣದಿಂದ ಬಡತನ ಮೆಟ್ಟಿ ಮೇಲೆ ಬಂದ ಗ್ರಾಮೀಣ ಪ್ರತಿಭೆ ಜಿ.ಶ್ರೀನಿವಾಸಯ್ಯ ಅವರು ಅಧ್ಯಯನಶೀಲತೆ ಮೈಗೂಡಿಸಿಕೊಂಡು ಜನಪದ ಸಾಹಿತ್ಯ ಕ್ಷೇತ್ರದಲ್ಲಿ ಅಗಾಧವಾದ ಸಂಶೋಧನಾ ಕೃಷಿ ಮಾಡುವ...

24 Mar, 2018

ಚಿಂತಾಮಣಿ
ಫಲಿತಾಂಶ ಪ್ರಕಟಣೆಗೆ ಒತ್ತಾಯ

ಸರ್ಕಾರಿ ಮಹಿಳಾ ಕಾಲೇಜಿನ 2ನೇ ಸೆಮಿಸ್ಟರ್‌ನ 18 ವಿದ್ಯಾರ್ಥಿನಿಯರ ಪರೀಕ್ಷಾ ಫಲಿತಾಂಶ ಪ್ರಕಟಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿನಿಯರು ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ...

24 Mar, 2018

ಚಿಕ್ಕಬಳ್ಳಾಪುರ
ಮಹಿಳಾ ಸಬಲೀಕರಣಕ್ಕೆ ಸರ್ಕಾರದ ಆದ್ಯತೆ

‘ಮಹಿಳೆಯರು ಸಬಲೀಕರಣಕ್ಕೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರ ಶೂನ್ಯ ಬಡ್ಡಿ ದರದ ಸಾಲವನ್ನು ವಿತರಿಸಿ ಮಹಿಳೆಯರಲ್ಲಿ ಆರ್ಥಿಕ ಶಕ್ತಿ ತುಂಬುತ್ತಿದೆ’ ಎಂದು ಶಾಸಕ ಡಾ.ಕೆ.ಸುಧಾಕರ್‌...

23 Mar, 2018
ನೊಂದವರು, ಶೋಷಿತರಿಗೆ ನ್ಯಾಯ ಕೊಡಿಸಿ

ಚಿಕ್ಕಬಳ್ಳಾಪುರ
ನೊಂದವರು, ಶೋಷಿತರಿಗೆ ನ್ಯಾಯ ಕೊಡಿಸಿ

23 Mar, 2018