4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಞ ಡಾ.ಪ್ರೇಮಾನಂದ ಲಕ್ಕಣ್ಣನವರ

ಕವಿ ಚೆಂಬೆಳಕಿನ ಶಿಷ್ಯ ಸಮ್ಮೇಳನದ ಅಧ್ಯಕ್ಷ

ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಜ.5ರಂದು ನಡೆಯುವ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಪ್ರಗತಿಪರ ಸಾಹಿತಿ ಡಾ.ಪ್ರೇಮಾನಂದ ಲಕ್ಕಣ್ಣನವರ ಆಯ್ಕೆಯಾಗಿದ್ದಾರೆ.

ಕವಿ ಚೆಂಬೆಳಕಿನ ಶಿಷ್ಯ ಸಮ್ಮೇಳನದ ಅಧ್ಯಕ್ಷ

ಬ್ಯಾಡಗಿ: ಪಟ್ಟಣದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಜ.5ರಂದು ನಡೆಯುವ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಪ್ರಗತಿಪರ ಸಾಹಿತಿ ಡಾ.ಪ್ರೇಮಾನಂದ ಲಕ್ಕಣ್ಣನವರ ಆಯ್ಕೆಯಾಗಿದ್ದಾರೆ.

ಡಾ. ಪ್ರೇಮಾನಂದ ಅವರು 1956 ಮೇ. 22ರಂದು ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದ ರೈತ ಕುಟುಂಬದ ತಿರಕಪ್ಪ ಹಾಗೂ ಸಾವಿತ್ರವ್ವ ಎಂಬ ದಂಪತಿಗಳ 6ನೇ ಪುತ್ರನಾಗಿ ಜನಿಸಿದರು. ಸಾಹಿತಿ ಚನ್ನವೀರ ಕಣವಿ ಅವರ ಬರಹಗಳಿಂದ ಪ್ರೇರೇಪಿತರಾಗಿರುವ ಇವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಕನ್ನಡ ಮಾಧ್ಯಮದಲ್ಲಿ ಪ್ರಾರಂಭಿಸಿ ಎಸ್‌ಎಸ್‌ಎಲ್‌ಸಿ ವರೆಗೆ ಓದಿ, ಬಳಿಕ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣಕ್ಕೆ ಧಾರವಾಡಕ್ಕೆ ತೆರಳಿದರು.

1979ರಲ್ಲಿ ಧಾರವಾಡದ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಬಿ.ಎ. ಪದವಿಯನ್ನು ಪೂರ್ಣಗೊಳಿಸಿದರು. ಬಳಿಕ 1981ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬ್ಯಾಡಗಿ ಶಿಕ್ಷಣ ಸಂಸ್ಥೆಯ ವರ್ತಕರ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು.

‘ಕರ್ನಾಟಕದ ಚಿತ್ರ ಕಲಾ ಸಾಹಿತ್ಯ ಒಂದು ವೈಚಾರಿಕ ಅಧ್ಯಯನ’ ಎಂಬ ವಿಷಯ ಮೇಲೆ ಮಹಾಪ್ರಬಂಧವನ್ನು ಮಂಡಿಸಿ, ಹಂಪಿ ಕನ್ನಡ ವಿಶ್ವವಿದ್ಯಾಲಯ ದಿಂದ 2008ರಲ್ಲಿ ಗೌರವ ಡಾಕ್ಟರೇಟ್‌ ಪದವಿಯನ್ನು ಪಡೆದರು.

ಜೀವನದುದ್ದಕ್ಕೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ.ಪ್ರೇಮಾನಂದ ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸೇವೆ ಆರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷರಾಗಿ, ಮೋಟೆಬೆನ್ನೂರ ಗ್ರಾಮದ ನವೋದಯ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ ಎರಡು ಬಾರಿ ಹಾಗೂ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಗ್ರಾಮೀಣ ಭಾಗದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಲು ನವೋದಯ ವಿದ್ಯಾ ಸಂಸ್ಥೆಯನ್ನು ಹುಟ್ಟು ಹಾಕಿ, ಸ್ನೇಹಿತರೊಂದಿಗೆ ಒಡಗೂಡಿ ಅದನ್ನು ಹೆಮ್ಮರವಾಗಿ ಬೆಳೆಯಲು ಪಣತೊಟ್ಟಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಇವರು ಅನೇಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಡಿದ್ದಾರೆ. ಮೋಟೆಬೆನ್ನೂರು ಪ್ರಾಥಮಿಕ ಪತ್ತಿನ ಸಹಕಾರಿ ಸಂಘ ಹಾಗೂ ಉತ್ಪಾದಕರ ಸಹಕಾರಿ ಸಂಘದ ಅಜೀವ
ಸದಸ್ಯರಾಗಿ ಹಾಗೂ ರೈತ ಸಂಘದ ಗೌರವಾಧ್ಯಕ್ಷರಾಗಿ ರೈತಪರ ಚಿಂತನೆಯಲ್ಲಿ ತಮ್ಮನು ತಾವು ತೊಡಗಿಸಿಕೊಂಡಿದ್ದಾರೆ.

ಸಾಹಿತ್ಯ ಕೃಷಿ: ‘ಹೊಸತು ಕವನ ಸಂಕಲನ‘ ಮೂಲಕ ಸಾಹಿತ್ಯ ಕೃಷಿಯಲ್ಲಿ ಗುರುತಿಸಿಕೊಂಡಿದ್ದು, ‘ಬ್ಯಾಡಗಿ ತಾಲ್ಲೂಕು ಸ್ವಾತಂತ್ರ್ಯ ಹೋರಾಟ ಗಾರರು’, ‘ಹೆಂಡದ ಮಾರಯ್ಯ’, ‘ವಸಾಹತು ಶಾಹಿ ವಿರೋಧಿ ಮಹದೇವ ಬಣಕಾರ’ ಸೇರಿದಂತೆ ಅನೇಕ ಲೇಖನ ಗಳು ಪ್ರಕಟಗೊಂಡಿವೆ.

ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಸವಣೂರ
ಪುರಸಭೆಯಿಂದ ಮತದಾನ ಜಾಗೃತಿ ಜಾಥಾ

ಭಾರತದ ಪ್ರತಿಯೊಬ್ಬ ಪ್ರಜೆಗೆ ಮತದಾನ ಜನ್ಮಸಿದ್ಧಹಕ್ಕು. ಅದನ್ನು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ, ಹಕ್ಕನ್ನು ಮಾರಿಕೊಳ್ಳದೆ ಯೋಗ್ಯ ಅಭ್ಯರ್ಥಿಗೆ ಮತ ನೀಡಬೇಕು ಎಂದು ಜಿಲ್ಲಾ...

21 Apr, 2018

ಶಿಗ್ಗಾವಿ
ಸ್ಪರ್ಧೆ ಯಾರ ವಿರುದ್ಧವಲ್ಲ; ಜನಸೇವೆಗಾಗಿ

‘ನಾನು ಚುನಾವಣೆ ಕಣಕ್ಕಿಳಿದಿರುವುದು ಯಾರ ವಿರುದ್ಧವಲ್ಲ. ಯಾರನ್ನೂ ಸೋಲಿಸಲು ಅಲ್ಲ. ಜನ ಸೇವೆ, ಅಭಿವೃದ್ಧಿಗಾಗಿ ಎಂಬುವುದನ್ನು ಮರೆಯಬಾರದು’ ಎಂದು ವಿಧಾನ ಪರಿಷತ್ ಸದಸ್ಯ ಸೋಮಣ್ಣ...

21 Apr, 2018
ಮದ್ಯದಂಗಡಿ ಮುಂದೆ ಮುಂಜಾನೆಯೇ ಸರದಿ !

ಹಾವೇರಿ
ಮದ್ಯದಂಗಡಿ ಮುಂದೆ ಮುಂಜಾನೆಯೇ ಸರದಿ !

21 Apr, 2018

ಹಾಸನ
ಬಿಜೆಪಿ: 3 ಹೊಸ ಮುಖಗಳಿಗೆ ಅವಕಾಶ

ಬಿಜೆಪಿ ಬಿಡುಗಡೆ ಮಾಡಿದ ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಹೊಳೆನರಸೀಪುರ, ಅರಸೀಕೆರೆ, ಶ್ರವಣಬೆಳಗೊಳ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಉಳಿದಂತೆ ಬೇಲೂರು, ಸಕಲೇಶಪುರ ಹಾಗೂ...

21 Apr, 2018

  ಹಾವೇರಿ
ಹಾವೇರಿ ಜಿಲ್ಲೆ: ಆರು ಕ್ಷೇತ್ರಗಳಿಂದ 7 ನಾಮಪತ್ರ

ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಒಟ್ಟು ಏಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

20 Apr, 2018