ಮರಿಯಮ್ಮನಹಳ್ಳಿ

ರಂಗ ತರಬೇತಿ ಶಿಬಿರದಲ್ಲಿ ಮಕ್ಕಳ ಹಾಡುಪಾಡು

ಅದು ಕಲಾಮಂದಿರದ ಒಳಾವರಣ. ಅಲ್ಲಿ ಮಕ್ಕಳದ್ದೇ ಪಾರುಪತ್ಯ. ಆಟ ಕುಣಿದಾಟ ನಲಿದಾಟದ ಜೊತೆಗೆ ಕೋಲಾಟ, ನೆಗೆದಾಟ ಸೇರಿದಂತೆ ರಂಗ ಗೀತೆಗಳ ಹಾಡು ಪಾಡು. ನಟನೆಯ ವರಸೆಗಳು. ನೃತ್ಯ, ಮಾತಿನ ಲಹರಿಗಳು...

ರಂಗ ತರಬೇತಿ ಶಿಬಿರದಲ್ಲಿ ಮಕ್ಕಳ ಹಾಡುಪಾಡು

ಮರಿಯಮ್ಮನಹಳ್ಳಿ: ಅದು ಕಲಾಮಂದಿರದ ಒಳಾವರಣ. ಅಲ್ಲಿ ಮಕ್ಕಳದ್ದೇ ಪಾರುಪತ್ಯ. ಆಟ ಕುಣಿದಾಟ ನಲಿದಾಟದ ಜೊತೆಗೆ ಕೋಲಾಟ, ನೆಗೆದಾಟ ಸೇರಿದಂತೆ ರಂಗ ಗೀತೆಗಳ ಹಾಡು ಪಾಡು. ನಟನೆಯ ವರಸೆಗಳು. ನೃತ್ಯ, ಮಾತಿನ ಲಹರಿಗಳು...

ಪಟ್ಟಣದ ದುರ್ಗಾದಾಸ ಕಲಾ ಮಂದಿರದಲ್ಲಿ ಬೆಂಗಳೂರಿನ ನಾಟಕ ಅಕಾಡೆಮಿ ಹಾಗೂ ಸ್ಥಳೀಯ ಮಹಿಳಾ ವೃತ್ತಿರಂಗ ಕಲಾವಿದರ ಸಂಘದ ಸಹಯೋಗದಲ್ಲಿ ನಡೆಯುತ್ತಿರುವ ಒಂದು ತಿಂಗಳ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಡಿ ನಲಿವ ದೃಶ್ಯಗಳಿವು.

ನಾಟಕ, ಕಲೆಗಳ ತವರೂರು ಎನಿಸಿಕೊಂಡ ಪಟ್ಟಣ ರಂಗಭೂಮಿಗೆ ಹಲವು ಕಲಾವಿದೆಯರನ್ನು ನೀಡಿದೆ. ಇಲ್ಲಿನ ಕಲೆ, ಕಲಾವಿದರು ನಾಡಿನಾದ್ಯಂತ ಹೆಸರು ಮಾಡಿದ್ದಾರೆ. ಕಿರುತೆರೆ, ಬೆಳ್ಳಿತೆರೆಯ ಮೇಲೆ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಮುಖ್ಯವಾಗಿ ಇಲ್ಲಿ ನಿರಂತರ ರಂಗ ತರಬೇತಿ ಶಾಲೆ ಹಾಗೂ ಕಲಾವಿದರನ್ನು ರಂಗ ಶಿಕ್ಷಕರನ್ನಾಗಿ ನೇಮಿಸಬೇಕೆನ್ನುವುದು ಕಲಾವಿದರ ಬೇಡಿಕೆ. ಅಂತಹದ್ದರಲ್ಲಿ ಅದಕ್ಕೆ ಪೂರಕವೆಂಬಂತೆ ಕಲಾಮಂದಿರದಲ್ಲಿ ಡಿ.11ರಿಂದ ಆರಂಭವಾದ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ಉಜ್ಜಯನಿ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮಲ್ಲಿನ ಕಲಾ ಪ್ರತಿಭೆಯನ್ನು ಒರೆಗೆ ಹಚ್ಚುತ್ತಿದ್ದಾರೆ.

ನಾಟಕ ಅಕಾಡೆಮಿ ನೇಮಿಸಿದ ಸ್ಥಳೀಯ ಕಲಾವಿದ ಸರ್ದಾರ್‌ ಹಾಗೂ ರಾಮನಗರದ ಶಿವಕುಮಾರ್ ಶಿಬಿರದ ನಿರ್ದೇಶಕರಾಗಿ ಮಕ್ಕಳಿಗೆ ಅಭಿನಯದ ಜೊತೆಗೆ ಕೋಲಾಟ, ರಂಗ ಗೀತೆಗಳನ್ನು ಕಲಿಸುತ್ತಿದ್ದಾರೆ. ಮಕ್ಕಳು ಸಹ ಆಸಕ್ತಿಯಿಂದ ರಂಗ ವರೆಸೆಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ಎರಡು ಮಕ್ಕಳ ನಾಟಕಗಳನ್ನು ಆಯ್ಕೆ ಮಾಡಿಕೊಂಡಿದ್ದು, ಮಕ್ಕಳು ಅಭಿನಯದಲ್ಲಿ ತಲ್ಲೀನರಾಗಿದ್ದಾರೆ.

ಮಕ್ಕಳಿಗೆ ಆಟದ ಜೊತೆಗೆ ಪಾಠ ಎನ್ನುವಂತೆ, ಮಕ್ಕಳ ಮನೋವಿಕಾಸಕ್ಕೆ ರಂಗ ಶಿಕ್ಷಣ ಪೂರಕ ಎನ್ನುವ ಶಿಬಿರದ ನಿರ್ದೇಶಕ ಸರ್ದಾರ್‌, ‘ಶಿಬಿರದಿಂದ ಮಕ್ಕಳಿಗೆ ಬಹಳ ಅನುಕೂಲವಿದ್ದು, ಬೌದ್ಧಿಕ, ಮಾನಸಿಕ ಮತ್ತು ದೈಹಿಕವಾಗಿ ಸಮರ್ಥರಾಗಲು ಸಹಕಾರಿಯಾಗಿದ್ದು, ಇಂತಹ ಶಿಬಿರಗಳು ನಿರಂತರವಾಗಿ ನಡೆಯಬೇಕಿದೆ’ ಎನ್ನುತ್ತಾರೆ.

ಮಹಿಳಾ ವೃತ್ತಿರಂಗ ಕಲಾವಿದರ ಸಂಘದ ಅಧ್ಯಕ್ಷೆ ಕೆ.ನಾಗರತ್ನಮ್ಮ, ‘ಈ ಶಿಬಿರದಿಂದ ಕೆಲ ಮಕ್ಕಳಾದರೂ ಉತ್ತಮ ಕಲಾವಿದರಾಗಿ ಹೊರಹೊಮ್ಮಬೇಕಿದೆ. ಜೊತೆಗೆ ಇಲ್ಲಿನ ರಂಗ ಪರಂಪರೆ ಮುಂದುವರೆಯಬೇಕಿದೆ’ ಎನ್ನುತ್ತಾರೆ.

ಜನವರಿ 16ರಂದು ಶಿಬಿರದ ಸಮಾರೋಪ ನಡೆಯಲಿದ್ದು, ಶಿಬಿರದ ಮಕ್ಕಳಿಂದ ನಾಗರಾಜ ಕೋಟೆ ಅವರ ‘ಮಾಯಾ ಕುರ್ಚಿ’ ಹಾಗೂ ಕುವೆಂಪು ಅವರು ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ನಾಟಕ ಪ್ರದರ್ಶನಗೊಳ್ಳಲಿವೆ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು

ಕಂಪ್ಲಿ
ಸಂಭ್ರಮದ ವಾಸವಿ ಜಯಂತ್ಯುತ್ಸವ

ಕಂಪ್ಲಿಯಲ್ಲಿ ವಾಸವಿ ಕಲ್ಯಾಣಮಂಟಪದಲ್ಲಿ ಬುಧವಾರ ವಾಸವಿ ಜಯಂತ್ಯುತ್ಸವ  ನಡೆಯಿತು.

26 Apr, 2018

ಬಳ್ಳಾರಿ
ಬಳ್ಳಾರಿ ಹೊರಗಿದ್ದೇ ಜಿಲ್ಲೆಯ ಮುಖಂಡರೊಂದಿಗೆ ಜನಾರ್ದನರೆಡ್ಡಿ ಸಭೆ!

ಬಳ್ಳಾರಿ ಜಿಲ್ಲೆಯ ಬಿಜೆಪಿ ಚುನಾವಣಾ ರಾಜಕೀಯ ಮೊಳಕಾಲ್ಮುರು ಗಡಿಭಾಗಕ್ಕೆ ಸ್ಥಳಾಂತರಗೊಂಡಿದೆ.ಜಿಲ್ಲೆ ಪ್ರವೇಶಿಸುವುದಕ್ಕೆ ಅನುಮತಿ ಇಲ್ಲವಾದ್ದರಿಂದ ಬಳ್ಳಾರಿ ಮತ್ತು ಮೊಳಕಾಲ್ಮುರು ಗಡಿಭಾಗದಲ್ಲಿ ವಾಸ್ತವ್ಯ ಹೂಡಿರುವ ಜಿ.ಜನಾರ್ದನ...

26 Apr, 2018
ತಾಯಣ್ಣ ಮಗನಿಗೆ ಜೆಡಿಎಸ್‌ ಟಿಕೆಟ್‌!

ಬಳ್ಳಾರಿ
ತಾಯಣ್ಣ ಮಗನಿಗೆ ಜೆಡಿಎಸ್‌ ಟಿಕೆಟ್‌!

25 Apr, 2018

ಹೂವಿನಹಡಗಲಿ
ಓದೋ ಗಂಗಪ್ಪ ಹೊತ್ತು ಬಂದ ಬೆಂಬಲಿಗರು

ಹಡಗಲಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಓದೋ ಗಂಗಪ್ಪ ಮಂಗಳವಾರ ನಾಮಪತ್ರ ಸಲ್ಲಿಸಿದರು.

25 Apr, 2018

ಕಂಪ್ಲಿ
ಮೀನುಗಾರರಿಂದ ಕಠಿಣ ಹರಕೆ ಸಮರ್ಪಣೆ

ಕಂಪ್ಲಿ ಕೋಟೆ ತುಂಗಭದ್ರಾದೇವಿ ಮೀನುಗಾರರ ಕಾಲೊನಿ ಕಾಳಮ್ಮದೇವಿ ಗಂಗಾಸ್ಥಳ ಪೂಜಾ ಮಹೋತ್ಸವದ ಅಂಗವಾಗಿ ಮಂಗಳವಾರ ಮೀನುಗಾರರು ವಿಶಿಷ್ಟ ಹರಕೆಗಳನ್ನು ಭಕ್ತಿ ಭಾವದಿಂದ ತೀರಿಸಿದರು.

25 Apr, 2018