ಶಕ್ತಿನಗರ

ಶಿಥಿಲಗೊಂಡಿದ್ದ ಓವರ್‌ಹೆಡ್‌ ಟ್ಯಾಂಕ್‌ ತೆರವು

20 ವರ್ಷದ ಹಿಂದೆ ಗ್ರಾಮದಲ್ಲಿ ಟ್ಯಾಂಕ್ ನಿರ್ಮಿಸಲಾಗಿತ್ತು. ಟ್ಯಾಂಕ್‌ನ ಪಿಲ್ಲರ್‌ ನಿರ್ಮಾಣಕ್ಕೆ ಬಳಸಿರುವ ಸಿಮೆಂಟ್‌ ಕಳಚಿ ಬೀಳುತ್ತಿತ್ತು. ವಿದ್ಯಾರ್ಥಿಗಳು ನಿತ್ಯವೂ ಟ್ಯಾಂಕ್‌ನ ಕೆಳಗೆ ಆಟ ಆಡುತ್ತಿರುತ್ತಾರೆ.

ಶಕ್ತಿನಗರ ಬಳಿಯ ದೇವಸೂಗೂರು ಸರ್ಕಾರಿ ಹಿರಿಯ ಪ್ರಾಥಮಕ ಶಾಲಾ ಕಟ್ಟಡದ ಬಳಿ ಶಿಥಿಲಗೊಂಡಿದ್ದ ಓವರ್‌ಹೆಡ್‌ ಟ್ಯಾಂಕ್‌ ಅನ್ನು ಶನಿವಾರ ತೆರವುಗೊಳಿಸಲಾಯಿತು

ಶಕ್ತಿನಗರ: ದೇವಸೂಗೂರು ಸರ್ಕಾರಿ ಹಿರಿಯ ಪ್ರಾಥಮಕ ಶಾಲಾ ಕಟ್ಟಡದ ಬಳಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಓವರ್‌ಹೆಡ್‌ ಟ್ಯಾಂಕ್‌ ಅನ್ನು ಶನಿವಾರ ತೆರವುಗೊಳಿಸಲಾಯಿತು.

20 ವರ್ಷದ ಹಿಂದೆ ಗ್ರಾಮದಲ್ಲಿ ಟ್ಯಾಂಕ್ ನಿರ್ಮಿಸಲಾಗಿತ್ತು. ಟ್ಯಾಂಕ್‌ನ ಪಿಲ್ಲರ್‌ ನಿರ್ಮಾಣಕ್ಕೆ ಬಳಸಿರುವ ಸಿಮೆಂಟ್‌ ಕಳಚಿ ಬೀಳುತ್ತಿತ್ತು. ವಿದ್ಯಾರ್ಥಿಗಳು ನಿತ್ಯವೂ ಟ್ಯಾಂಕ್‌ನ ಕೆಳಗೆ ಆಟ ಆಡುತ್ತಿರುತ್ತಾರೆ. ಅಪಾಯ ಸಂಭವಿಸುವ ಸಾಧ್ಯತೆ ಇದ್ದುದರಿಂದ ಅದನ್ನು ತೆರವುಗೊಳಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಸುಭಾಷ ಅವರು ಪಂಚಾಯತ್‌ ರಾಜ್‌ ಇಲಾಖೆಗೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಗೊಂಡ ದೇವಸೂಗೂರು ಗ್ರಾಮ ಪಂಚಾಯಿತಿ ಆಡಳಿತ, ವಿವಿಧ ಇಲಾಖೆಯ ಅಧಿಕಾರಿಗಳು ಶನಿವಾರ ಓವರ್‌ಹೆಡ್‌ ಟ್ಯಾಂಕ್‌ ಅನ್ನು ತೆರವುಗೊಳಿಸಿದರು.

ಕುಡಿಯುವ ನೀರಿನ ನೈರ್ಮಲ್ಯ ಇಲಾಖೆಯ ಕಿರಿಯ ಎಂಜಿನಿಯರ್‌ ಜಬ್ಬರ್‌, ಚಿತ್ರದುರ್ಗದ ತಾಂತ್ರಿಕ ಎಂಜಿನಿಯರ್‌ ಸೈಯ್ಯದ್‌, ದೇವಸೂಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ, ಸದಸ್ಯರಾದ ಸಾಂಬಶಿವ, ಸಿದ್ಧಪ್ಪಗೌಡ, ನಾಗರಾಜ, ಸುರೇಶಗೌಡ ಚೇಗುಂಟಿ, ಷಣ್ಮುಖಪ್ಪಘಂಟೆ, ಮುಖಂಡರಾದ ಹಂಪನಗೌಡ, ವೆಂಕಟೇಶ ದೇವಸೂಗೂರು, ಆರ್‌ಟಿಪಿಎಸ್‌ ಕೇಂದ್ರ ಭದ್ರತಾ ಪಡೆಯ ಅಧಿಕಾರಿಗಳು ಈ ವೇಳೆ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಸರ್ಕಾರಿ ಶಾಲೆಯಲ್ಲಿ ಮಳೆ ನೀರು ಸಂಗ್ರಹ ಟ್ಯಾಂಕ್‌

ರಾಯಚೂರು
ಸರ್ಕಾರಿ ಶಾಲೆಯಲ್ಲಿ ಮಳೆ ನೀರು ಸಂಗ್ರಹ ಟ್ಯಾಂಕ್‌

22 Mar, 2018

ಲಿಂಗಸುಗೂರು
ಜನಪರ ಹೋರಾಟದ ಜಯಕ್ಕಾಗಿ ರಾಜಕೀಯ ಪ್ರವೇಶ

‘ಕಳೆದ ಮೂರು ದಶಕಗಳ ನಿರಂತರ ಹೋರಾಟದಲ್ಲಿ ಎಲ್ಲಿಯವರೆಗೆ ಹೋರಾಟ, ಗೆಲ್ಲುವವರೆಗೆ ಹೋರಾಟ ಎಂಬ ಘೋಷಣೆ ಹಾಕುತ್ತ ಬಂದಿದ್ದರೂ ಪ್ರಯೋಜನವಾಗಿಲ್ಲ. ಜನಪರ ಹೋರಾಟಗಳ ಗೆಲುವಿಗೆ ರಾಜಕೀಯ...

22 Mar, 2018
ಶಿವನಗೌಡರ ಮಾರ್ಗದರ್ಶನದಿಂದ ಶಾಸಕನಾದೆ

ಶಕ್ತಿನಗರ
ಶಿವನಗೌಡರ ಮಾರ್ಗದರ್ಶನದಿಂದ ಶಾಸಕನಾದೆ

22 Mar, 2018
ರಾಯಚೂರು ಬಿಜೆಪಿ ಶಕ್ತಿ ಕೇಂದ್ರ ಆಗಲಿದೆ: ಸಂಸದ

ರಾಯಚೂರು
ರಾಯಚೂರು ಬಿಜೆಪಿ ಶಕ್ತಿ ಕೇಂದ್ರ ಆಗಲಿದೆ: ಸಂಸದ

21 Mar, 2018

ಮಾನ್ವಿ
‘ಬರಹಗಾರರಿಂದ ಸಮಾಜ ತಿದ್ದುವ ಕೆಲಸ ನಡೆಯಲಿ’

‘ಬರಹಗಾರರಿಂದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಸಮಾಜ ತಿದ್ದುವ ಕೆಲಸ ಅಗತ್ಯ’ ಎಂದು ಲೇಖಕಿ ಡಾ.ಗಂಗಮ್ಮ ಸತ್ಯಂಪೇಟೆ ಹೇಳಿದರು.

21 Mar, 2018