ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಜನರ ಅಭಿವೃದ್ಧಿಗೆ ಸಮಗ್ರ ಕ್ರಮ

ಇರುಳಿಗರ ಹಾಡಿಯಲ್ಲಿ ಸಚಿವ ಎಚ್‌.ಆಂಜನೇಯ ವಾಸ್ತವ್ಯ
Last Updated 1 ಜನವರಿ 2018, 11:04 IST
ಅಕ್ಷರ ಗಾತ್ರ

ಮಾಡಬಾಳ್‌(ಮಾಗಡಿ): ರಾಜ್ಯದ 9 ಜಿಲ್ಲೆಗಳಲ್ಲಿ ಇರುವ ಗಿರಿಜನರ ಹಾಡಿ, ದೊಡ್ಡಿ, ಕಾಲೊನಿಗಳನ್ನೂ ₹10 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ದಿಪಡಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ತಿಳಿಸಿದರು,

ಜೇನುಕಲ್ಲು ಪಾಳ್ಯದ ಇರುಳಿಗರ ಹಾಡಿಯಲ್ಲಿ ವಾಸ್ತವ್ಯದ ಅಂಗವಾಗಿ ಭಾನುವಾರ ಸಮಾಜ ಕಲ್ಯಾಣ ಇಲಾಖೆಯ ಗಿರಿಜನ ಯೋಜನೆಯಡಿ ದೊರೆಯುವ ಕೈಪಿಡಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಅಪೌಷ್ಟಿಕತೆಯಿಂದ ನರಳುತ್ತಿರುವ ಇರುಳಿಗ, ಸೋಲಿಗ, ಹಕ್ಕಿಪಿಕ್ಕ ಇತರೆ ಗಿರಿಜನರಿಗೆ ಉಚಿತವಾಗಿ 15 ಕೆ.ಜಿ. ಅಕ್ಕಿ, ರಾಗಿ, 2 ಕೆ.ಜಿ, ಬೆಲ್ಲ, 2.ಕೆ.ಜಿ,ಬೇಳೆ, 1 ಕೆ.ಜಿ,ತುಪ್ಪ ಮಾಸಿಕವಾಗಿ ತಿಂಗಳಿಗೆ 45 ಕೋಳಿಮೊಟ್ಟೆ ನೀಡಲಾಗುವುದು. ಆದಿವಾಸಿಗಳ ಬುಡಕಟ್ಟು ಜನಪರ ಪರಂಪರೆ ಉಳಿಸಲಾಗುವುದು. ಶುದ್ಧ ಕುಡಿಯುವ ನೀರು ಒದಗಿಸಿ, ಸಮುದಾಯ ಭವನ ನಿರ್ಮಿಸಿ ಕೊಡಲು ಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಎಚ್‌ಸಿ ಬಾಲಕೃಷ್ಣ, ಜಿಲ್ಲಾಧಿಕಾರಿ ಡಾ,ಮಮತಾ, ಪೊಲೀಸ್‌ ವರಿಷ್ಠಾಧಿಕಾರಿ ಡಾ,ರಮೇಶ್‌ ಬಾನೋತ್‌, ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ದಿವ್ಯಗಂಗಾಧರ್‌,ಜಿಲ್ಲಾ ಪಂಚಾಯಿತಿ ಸಿಇಒ ಲತಾ,ತಹಶೀಲ್ದಾರ್‌ ಎನ್‌.ಶಿವಕುಮಾರ್‌, ತಾಲ್ಲೂಕು ಪಂಚಾಯಿತಿ ಇಒ ಟಿ,ಮರುಡಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನರಸಿಂಹಮೂರ್ತಿ, ಸಿಪಿಐ ಶಬರೀಶ್‌,ಬೆಸ್ಕಾಂ ನಿರ್ದೇಶಕ ಬಿ.ವಿ.ಜಯರಾಮು, ಜಿಲ್ಲಾ ಇರುಳಿಗರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಇರುಳಿಗ, ಗೌರವಾಧ್ಯಕ್ಷ ಮಹದೇವಯ್ಯ, ಮುಖಂಡರಾದ ವೆಂಕಟೇಶ್‌, ಶಿವರಾಜು, ಅಡ್ಡಬರಿಯ, ಮಾರಯ್ಯ, ಕೆಂಪಮ್ಮ, ಮುತ್ತಮ್ಮ, ಚಿಕ್ಕಮುನಿಯ, ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕಿ ಎಸ್‌.ಜಿ.ವನಜ, ದಲಿತ ಮುಖಂಡರಾದ ಸಿ.ಜಯರಾಮು, ಮಂಜೇಶ್‌, ಮೂರ್ತಿ ನಾಯ್ಕ್‌, ಕಲ್ಕೆರೆ ಶಿವಣ್ಣ, ದೊಡ್ಡಿ ಲಕ್ಷ್ಮಣ್‌ , ಮಲವರ ಪಾಳ್ಯದ ಶಿವಬೀರಯ್ಯ, ಜಿಲ್ಲೆಯ ವಿವಿಧ ಇರುಳಿಗರ ಹಾಡಿಗಳಿಂದ ಬಂದಿದ್ದ ಇರುಳಿಗ ಸಮುದಾಯದ ಕಲಾವಿದರು, ಮಾಡಬಾಳ್‌, ಶಂಭುದೇವನ ಹಳ್ಳಿ ನಿವಾಸಿಗಳು ಇದ್ದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT