ಇಸ್ಲಾಮಾಬಾದ್

ಹಫೀಸ್‌ ಸಯೀದ್‌ಗೆ ಸೇರಿದ ಸಂಘ–ಸಂಸ್ಥೆಗಳನ್ನು ವಶಕ್ಕೆ ಪಡೆಯಲು ಮುಂದಾದ ಪಾಕ್‌ ಸರ್ಕಾರ

‌ಹಫೀಸ್‌ ಸಯೀದ್‌ಗೆ ಸೇರಿದ ಜಮಾತ್ ಉದ್ ದವಾ (ಜೆಯುಡಿ) ಮತ್ತು  ಫಲಾಹ್‌–ಎ–ಇನ್‌ಸಾನಿಯತ್‌ ಸಂಘಟನೆಗಳು ಲಷ್ಕರ್–ಎ–ತಯಬಾ (ಎಲ್‌ಇಟಿ) ಉಗ್ರ ಸಂಘಟನೆಯೊಂದಿಗೆ ನೇರ ಸಂಬಂಧ ಹೊಂದಿರುವಂಥವು ಎಂದು ಅಮೆರಿಕ ಹೇಳಿತ್ತು...

ಹಫೀಸ್ ಸಯೀದ್‌

ಇಸ್ಲಾಮಾಬಾದ್: 2008ರ ಮುಂಬೈ ದಾಳಿಯ ರೂವಾರಿ ಹಫೀಸ್ ಸಯೀದ್‌ಗೆ ಸೇರಿದ ಸಂಘ–ಸಂಸ್ಥೆಗಳು, ಆಸ್ತಿ ಮತ್ತು ಹಣಕಾಸಿನ ಮೂಲಗಳನ್ನು ತನ್ನ ವಶಕ್ಕೆ ಪಡೆಯಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.

ಹಫೀಸ್‌ ಸಯೀದ್‌ನನ್ನು ಅಮೆರಿಕ ಭಯೋತ್ಪಾದಕ ಎಂದು ಘೋಷಿಸಿದ ಬಳಿ ಪಾಕಿಸ್ತಾನ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಈಗಾಗಲೇ ಉನ್ನತಮಟ್ಟದ ಸಭೆಗಳು ನಡೆದಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.

‌ಹಫೀಸ್‌ ಸಯೀದ್‌ಗೆ ಸೇರಿದ ಜಮಾತ್ ಉದ್ ದವಾ (ಜೆಯುಡಿ) ಮತ್ತು  ಫಲಾಹ್‌–ಎ–ಇನ್‌ಸಾನಿಯತ್‌ ಸಂಘಟನೆಗಳು ಲಷ್ಕರ್–ಎ–ತಯಬಾ (ಎಲ್‌ಇಟಿ) ಉಗ್ರ ಸಂಘಟನೆಯೊಂದಿಗೆ ನೇರ ಸಂಬಂಧ ಹೊಂದಿರುವಂಥವು ಎಂದು ಅಮೆರಿಕ ಹೇಳಿತ್ತು.

2008 ಮುಂಬೈ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು. ಈ ಕೃತ್ಯದ ಸಂಚು ರೂಪಿಸಿದ್ದ ಆರೋಪ ಹಫೀಸ್‌ ಸಯೀದ್‌ ಮೇಲಿದೆ. ಆದರೆ, ಹಫೀಸ್‌ ಈ ಆರೋಪವನ್ನು ನಿರಾಕರಿಸುತ್ತಲೇ ಬಂದಿದ್ದಾನೆ.

Comments
ಈ ವಿಭಾಗದಿಂದ ಇನ್ನಷ್ಟು

ಲಂಡನ್
ಬ್ರಿಟನ್‌: ಒಬ್ಬಂಟಿತನ ನಿವಾರಣೆಗೆ ಸಚಿವರ ನೇಮಕ

ಒಬ್ಬಂಟಿತನ ಸಮಸ್ಯೆ ನಿವಾರಣೆಗೆ ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಅವರು ಪ್ರತ್ಯೇಕ ಸಚಿವರನ್ನು ನೇಮಿಸಿದ್ದಾರೆ.

18 Jan, 2018
ವಲಸಿಗರಿಗೆ ಕೌಶಲ, ಇಂಗ್ಲಿಷ್ ಕಡ್ಡಾಯ

ವಾಷಿಂಗ್ಟನ್
ವಲಸಿಗರಿಗೆ ಕೌಶಲ, ಇಂಗ್ಲಿಷ್ ಕಡ್ಡಾಯ

18 Jan, 2018
ಶ್ರೀಲಂಕಾ: ಮಹಿಳೆಯರಿಗೆ ಮದ್ಯ ಮಾರಾಟ ನಿಷೇಧ

ಕೊಲಂಬೊ
ಶ್ರೀಲಂಕಾ: ಮಹಿಳೆಯರಿಗೆ ಮದ್ಯ ಮಾರಾಟ ನಿಷೇಧ

17 Jan, 2018
ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜ್ವಾಲಾಮುಖಿ!

ಲೆಗಾಝ್ಪಿ
ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜ್ವಾಲಾಮುಖಿ!

17 Jan, 2018
‘ಪಾಕ್‌ಗೆ ಭಾರತದಿಂದ ಬೆದರಿಕೆ ಇಲ್ಲ’

ಇಸ್ಲಾಮಾಬಾದ್
‘ಪಾಕ್‌ಗೆ ಭಾರತದಿಂದ ಬೆದರಿಕೆ ಇಲ್ಲ’

17 Jan, 2018