ಹುಬ್ಬಳ್ಳಿ

ದಿಂಡಿ ಪಲ್ಲಕ್ಕಿ ಪಾದಯಾತ್ರೆಗೆ ಚಾಲನೆ

ಧಾರವಾಡದ ಸತ್ತೂರ, ಲಕಮಾಪುರ, ಉಪ್ಪಿನಬೆಟಗೇರಿ, ದೊಡವಾಡ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಹಣಮಾಪುರ, ಮಾಲದಿನ್ನಿ, ನಾಗನೂರು ಮೂಲಕ ಹಾದು ಶ್ರೀಕ್ಷೇತ್ರ ಇಂಚಗೇರಿ ಮಠವನ್ನು ಜ.17ರಂದು ದಿಂಡಿ ಪಲ್ಲಕ್ಕಿ ಪಾದಯಾತ್ರೆ ತಲುಪಲಿದೆ.

ಹುಬ್ಬಳ್ಳಿಯ ವಿದ್ಯಾನಗರದ ಶ್ರೀಗಿರಿಮಲ್ಲೇಶ್ವರ ಆಶ್ರಮದಿಂದ ದಿಂಡಿ ಪಲ್ಲಕ್ಕಿ ಪಾದಯಾತ್ರೆ ಹೊರಡುವ ಮುನ್ನ ಮಠದ ಸದ್ಗುರು ಸ.ಸ.ರೇವಣಸಿದ್ಧೇಶ್ವರ ಮಹಾರಾಜರು ಆಶೀರ್ವಚನ ನೀಡಿದರು

ಹುಬ್ಬಳ್ಳಿ: ವಿದ್ಯಾನಗರದ ಶ್ರೀಗಿರಿಮಲ್ಲೇಶ್ವರ ಆಶ್ರಮದಿಂದ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠಕ್ಕೆ ಹೊರಟ ದಿಂಡಿ ಪಲ್ಲಕ್ಕಿ ಪಾದಯಾತ್ರೆಗೆ ಮಠದ ರೇವಣಸಿದ್ಧೇಶ್ವರ ಮಹಾರಾಜರು ಭಾನುವಾರ ಚಾಲನೆ ನೀಡಿದರು.

ಧಾರವಾಡದ ಸತ್ತೂರ, ಲಕಮಾಪುರ, ಉಪ್ಪಿನಬೆಟಗೇರಿ, ದೊಡವಾಡ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಹಣಮಾಪುರ, ಮಾಲದಿನ್ನಿ, ನಾಗನೂರು ಮೂಲಕ ಹಾದು ಶ್ರೀಕ್ಷೇತ್ರ ಇಂಚಗೇರಿ ಮಠವನ್ನು ಜ.17ರಂದು ದಿಂಡಿ ಪಲ್ಲಕ್ಕಿ ಪಾದಯಾತ್ರೆ ತಲುಪಲಿದೆ.

ಪಾದಯಾತ್ರೆಗೂ ಮುನ್ನ ಮಠದಲ್ಲಿ ಪೂಜೆ ನಡೆಯಿತು. ರೇವಣಸಿದ್ಧೇಶ್ವರ ಶ್ರೀಗಳು ಆಶೀರ್ವಾದ ನೀಡಿ, ಭಾವು ಸಾಹೇಬ ಮಹಾರಾಜ, ಗಿರಿಮಲ್ಲೇಶ್ವರ ಮಹಾರಾಜ, ಗುರುಪುತ್ರೇಶ್ವರ ಮಹಾರಾಜ ಹಾಗೂ ಸ.ಸ.ಜಗನ್ನಾಥ ಮಹಾರಾಜರ ಪುಣ್ಯತಿಥಿ ಅಂಗವಾಗಿ ದಿಂಡಿ ಪಲ್ಲಕ್ಕಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಜ್ಜನವರು ಹಾಕಿಕೊಟ್ಟ ಮಾರ್ಗ ದಲ್ಲಿ ಸದ್ಭಕ್ತರು ನಡೆಯಬೇಕು. ಮಠದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಸರ್ವಧರ್ಮ ಸಮನ್ವಯ, ರಾಷ್ಟ್ರೀಯ ಭಾವೈಕ್ಯತೆ, ಸರ್ವೋದಯ, ವಿಶ್ವಶಾಂತಿಯನ್ನು ಪಾದಯಾತ್ರೆ ಉದ್ದಕ್ಕೂ ಗ್ರಾಮಗಳಲ್ಲಿ ತಿಳಿಸಲಾಗುವುದು ಎಂದರು.

ಪ್ರವಚನಕಾರರಾದ ಶಂಕರಪ್ಪ ಕೌಜಲಗಿ, ದಾಸಗೌಡ್ರು, ರಾಮಣ್ಣ ನಾಗನೂರ ಅವರು ಪ್ರವಚನ ನೀಡಿದರು.

Comments
ಈ ವಿಭಾಗದಿಂದ ಇನ್ನಷ್ಟು

ವಿಜಯಪುರ
ಎಲ್ಲರ ಕೈಗೆಟುಕುವ ದರದಲ್ಲಿ ಮಾವು

ಹಣ್ಣುಗಳ ರಾಜ ಮಾವು ಇದೀಗ ಎಲ್ಲರಿಗೂ ಅಗ್ಗ. ತುಟ್ಟಿ ಧಾರಣೆಯಿಂದ ಮಾವಿನ ಸವಿಯಿಂದ ದೂರ ಉಳಿದಿದ್ದ ಬಡವರು, ಮಧ್ಯಮ ವರ್ಗದ ಜನರು ಮಾವು ಖರೀದಿಗಾಗಿ...

18 Jun, 2018
ಅಂಗನವಾಡಿಯಿದ್ದರೂ ಪ್ರಯೋಜನವಿಲ್ಲ..!

ದೇವರಹಿಪ್ಪರಗಿ
ಅಂಗನವಾಡಿಯಿದ್ದರೂ ಪ್ರಯೋಜನವಿಲ್ಲ..!

18 Jun, 2018

ವಿಜಯಪುರ
ಗುತ್ತಿಗೆದಾರರಿಗೆ ತುರ್ತು ಸಭೆ ಇಂದು; ಕಟು ಟೀಕೆ

ಬರೋಬ್ಬರಿ ಒಂಭತ್ತನೇ ತಿಂಗಳು. ಇಲ್ಲಿಯವರೆಗೂ ನಗರದ ಅಭಿವೃದ್ಧಿ, ಸಮಸ್ಯೆಗಳ ಕುರಿತಂತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲು ವಿಜಯಪುರ ಮಹಾನಗರ ಪಾಲಿಕೆಯ ಮೇಯರ್‌–ಉಪ ಮೇಯರ್‌, ಸ್ಥಾಯಿ ಸಮಿತಿಗಳ...

18 Jun, 2018

ತಾಳಿಕೋಟೆ
ಸಾರ್ವಜನಿಕರಿಗೆ ಶೀರ್‌ಕುರ್ಮಾ ವಿತರಣೆ

ಈದ್ ಉಲ್‌ ಫಿತ್ರ್ ಆಚರಿಸುವ ಮುಸಲ್ಮಾನರು ಅಕ್ಕಪಕ್ಕದ ಮನೆಯವರು ಹಾಗೂ ಸ್ನೇಹಿತರಿಗೆ ಭರ್ಜರಿ ಭೋಜನ ಹಾಕಿಸುವುದು ಸಾಮಾನ್ಯ. ಆದರೆ, ಹಬ್ಬದ ದಿನ ರಸ್ತೆಯಲ್ಲಿ ಸಂಚರಿಸುವವರಿಗೆಲ್ಲ...

18 Jun, 2018

ದೇವರ ಹಿಪ್ಪರಗಿ
ಪುರಪ್ರವೇಶಕ್ಕೆ ಸಾಕ್ಷಿಯಾದ ಭಕ್ತರು

ದೇವರ ಹಿಪ್ಪರಗಿಯ ಐತಿಹಾಸಿಕ ಹಿನ್ನೆಲೆಯ ರಾವುತರಾಯನ ರೂಪಾಂಲಕಾರ ಪೂರ್ಣಗೊಂಡಿದ್ದು, ಬಂಡಿಯಾತ್ರೆಯ ಮೂಲಕ ಅಸಂಖ್ಯಾತ ಭಕ್ತರ ಉದ್ಘೋಷಗಳೊಂದಿಗೆ ಪುರಪ್ರವೇಶವಾಯಿತು.

18 Jun, 2018