ವಾಚಕರ ವಾಣಿ

ನಿಜಾಂಶ ಎಷ್ಟು?

ಸಮಸ್ಯೆಗೆ ರಾಜಕೀಯ ಪರಿಹಾರ ಕಷ್ಟಸಾಧ್ಯ ಎಂಬಂತೆ ಗೋಚರಿಸುತ್ತಿದೆ. ಆದ್ದರಿಂದ ನ್ಯಾಯಮಂಡಳಿ ಹೆಚ್ಚು ವಿವೇಚನೆಯಿಂದ, ವಾಸ್ತವಿಕ ನೆಲೆಗಟ್ಟಿನ ಮೇಲೆ ನ್ಯಾಯೋಚಿತ ಪರಿಹಾರವನ್ನು ತ್ವರಿತವಾಗಿ ಕಂಡು ಹಿಡಿಯಬೇಕು. ವಿಳಂಬ ಆದಷ್ಟೂ ಕ್ಲೇಶ, ಕಲಹ ಹೆಚ್ಚುತ್ತಲೇ ಹೋಗುತ್ತವೆ.

ಮಹದಾಯಿ ವಿವಾದ ದಿನಗಳೆದಂತೆ ಜಟಿಲಗೊಂಡು ಅನೇಕ ರಾಜಕೀಯ, ಭಾವನಾತ್ಮಕ ಕ್ಲೇಶಗಳಿಗೆ ಕಾರಣವಾಗುತ್ತಿದೆ. ಮಹದಾಯಿ ನದಿಗೆ ಹರಿಯುವ ನೀರಿನಲ್ಲಿ 7.56 ಟಿಎಂಸಿ ಅಡಿಯಷ್ಟು ನೀರನ್ನು ಮಲಪ್ರಭಾಕ್ಕೆ ತಿರುಗಿಸುವುದರಿಂದ ಗೋವಾ ರಾಜ್ಯದ ಕುಡಿಯುವ ನೀರು, ಪರಿಸರ, ಜೀವಜಾಲದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ ಎಂದು ಗೋವಾ ಆತಂಕ ವ್ಯಕ್ತಪಡಿಸುತ್ತಿದೆ.

ಮಹದಾಯಿಯಲ್ಲಿ 200 ಟಿಎಂಸಿ ಅಡಿಗೂ ಅಧಿಕ ನೀರು ಹರಿಯುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿ ಬಹಳಷ್ಟು ನೀರು ಸಮುದ್ರ ಸೇರುತ್ತದೆ. ಗೋವಾದಲ್ಲಿ ಬಳಕೆ ಆಗುತ್ತಿರುವ, ಸಮುದ್ರ ಸೇರುತ್ತಿರುವ ನೀರಿನ ಪ್ರಮಾಣ ಎಷ್ಟು? ಸಮುದ್ರಕ್ಕಂತೂ ನೀರಿನ ಕೊರತೆ ಆಗದು. ಹಾಗಾದರೆ ಗೋವಾದ ಆತಂಕ ನೈಜವಾದುದೇ ಅಥವಾ ಭಾವನಾತ್ಮಕವಾದುದೇ ಎಂಬ ಬಗ್ಗೆ ಮೊದಲು ನಿಷ್ಕರ್ಷೆ ಆಗಬೇಕು. ಮಹದಾಯಿ ನ್ಯಾಯಮಂಡಳಿ ಅಥವಾ ಸಂಬಂಧಿಸಿದ ರಾಜ್ಯಗಳ ಸರ್ಕಾರಗಳು ಈ ಬಗ್ಗೆ ಮೊದಲು ತಜ್ಞರಿಂದ ನಿಷ್ಪಕ್ಷಪಾತ ವರದಿ ಪಡೆಯುವುದು ಉಚಿತ.

ದೇಶದಲ್ಲಿ ನೂರಾರು ಅಣೆಕಟ್ಟುಗಳ ಮೂಲಕ ಲಕ್ಷಾಂತರ ಟಿಎಂಸಿ ಅಡಿ ನೀರನ್ನು ತಿರುಗಿಸಿ ಕೃಷಿ, ಕುಡಿಯುವ ನೀರು ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆ. ಇಲ್ಲದಿದ್ದಲ್ಲಿ ದೇಶದಲ್ಲಿ ಆಹಾರ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಮಹದಾಯಿ ನದಿಯಿಂದ 7.56 ಟಿಎಂಸಿ ಅಡಿ ನೀರು ತಿರುಗಿಸುವುದರಿಂದ ಆಗುವ ಪ್ರಯೋಜನ, ಸಾಧಕ–ಬಾಧಕಗಳೇನು, ಗೋವಾ ರಾಜ್ಯದ ವಿರೋಧ ಸಮಂಜಸವೇ ಎಂಬುದು ಮುನ್ನೆಲೆಗೆ ಬರಬೇಕಾಗಿದೆ.

ಸಮಸ್ಯೆಗೆ ರಾಜಕೀಯ ಪರಿಹಾರ ಕಷ್ಟಸಾಧ್ಯ ಎಂಬಂತೆ ಗೋಚರಿಸುತ್ತಿದೆ. ಆದ್ದರಿಂದ ನ್ಯಾಯಮಂಡಳಿ ಹೆಚ್ಚು ವಿವೇಚನೆಯಿಂದ, ವಾಸ್ತವಿಕ ನೆಲೆಗಟ್ಟಿನ ಮೇಲೆ ನ್ಯಾಯೋಚಿತ ಪರಿಹಾರವನ್ನು ತ್ವರಿತವಾಗಿ ಕಂಡು ಹಿಡಿಯಬೇಕು. ವಿಳಂಬ ಆದಷ್ಟೂ ಕ್ಲೇಶ, ಕಲಹ ಹೆಚ್ಚುತ್ತಲೇ ಹೋಗುತ್ತವೆ.

–ವೆಂಕಟೇಶ್ ಮಾಚಕನೂರ, ಧಾರವಾಡ

 

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಬಸವವಾದಿಗಳಿಗೆ ನೋವು...

ಕನ್ನಡಿಗರ ಸಾಂಸ್ಕೃತಿಕ ಪರಂಪರೆಯನ್ನು ಅರಿತುಕೊಂಡ ಜಾತ್ಯತೀತ ಪತ್ರಿಕೆಗಳಲ್ಲಿ ‘ಪ್ರಜಾವಾಣಿ’ ತನ್ನ ಸ್ಥಾನವನ್ನು ಎಂದೂ ಬಿಟ್ಟುಕೊಟ್ಟಿಲ್ಲ. ಪತ್ರಿಕೆಯ ಪ್ರತೀ ವರದಿ ಹಾಗೂ ವಾಚಕರವಾಣಿಯು ಜನಸಾಮಾನ್ಯರ ಭಾವದ... ...

22 Mar, 2018

ವಾಚಕರವಾಣಿ
ಹೆಣ್ಣಿನ ‘ಹಣೆಬರಹ!’

‘ಪುರುಷನಾಮ ಏಕೆ?’, ‘ಗಂಡು ಕಟ್ಟಿದ ನುಡಿ’ (ವಾ.ವಾ., ಮಾ. 6, 7).ಈ ದಿಶೆಯಲ್ಲಿ ಇನ್ನೊಂದು ವಿಚಿತ್ರ: ಹಿಂದೆ ಅನೇಕ ರಾಜಪುತ್ರಿಯರನ್ನು ಅವರ ತಂದೆಯ ಅಥವಾ...

22 Mar, 2018

ವಾಚಕರವಾಣಿ
ಸತ್ಯಕ್ಕೆ ಜಯ ಸಿಗಲಿ

ಹಣ, ಅಧಿಕಾರ, ದರ್ಪ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಕೆಲವರಲ್ಲಿ ಅಂತರ್ಗತವಾಗಿದೆ ಎಂಬುದು ಸತ್ಯವಾದ ಮಾತು.

22 Mar, 2018

ವಾಚಕರವಾಣಿ
ಬಸವಣ್ಣನಿಗೆ ಅಪಚಾರ!

ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನ ನೀಡುವ ವಿಚಾರ ಮುನ್ನೆಲೆಗೆ ಬಂದ ನಂತರ ಕೆಲವು ಸ್ವಾಮಿಗಳು ಮನಸ್ಸಿಗೆ ಬಂದಂತೆ ಮಾತನಾಡುತ್ತಿರುವುದು ಬಸವಣ್ಣನಿಗೆ ಮಾಡುತ್ತಿರುವ ಅಪಚಾರವೇ ಆಗಿದೆ. ...

21 Mar, 2018

ವಾಚಕರವಾಣಿ
ಯಾರು ಜನಪರ?

ರಾಜ್ಯಸಭಾ ಚುನಾವಣೆಯ ಸ್ಪರ್ಧಾಳುಗಳ ಆಸ್ತಿ ವಿವರ (ಪ್ರ.ವಾ., ಮಾ. 13) ಗಮನಿಸಿದರೆ ಮಹಾತ್ಮ ಗಾಂಧಿ ಪ್ರತಿಪಾದಿಸಿದ ಸರಳತೆಯ ರಾಜಕೀಯ ಕಣ್ಮರೆಯಾಗುತ್ತಿರುವುದು ಸ್ಪಷ್ಟವಾಗುತ್ತಿದೆ! ಒಂದು ಕಡೆ...

21 Mar, 2018