ಪಬ್‌ನಲ್ಲಿ ಗಲಾಟೆ ಮಾಡಿ ಅಮಾನತಿಗೆ ಒಳಗಾಗಿರುವ ಇಂಗ್ಲೆಂಡ್‌ನ ಆಲ್‌ರೌಂಡರ್‌

ಐಪಿಎಲ್‌ನಲ್ಲಿ ಆಡಲು ಸ್ಟೋಕ್ಸ್‌ಗೆ ಅನುಮತಿ

ಐಪಿಎಲ್‌ನಲ್ಲಿ ಆಡಲು ಸೋಮವಾರ ಅನುಮತಿ ಲಭಿಸಿದ್ದು, ಈ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಆಟಗಾರರ ಹರಾಜಿನಲ್ಲಿ ಅವರ ಹೆಸರು ಸೇರಲಿದೆ. ಕಳೆದ ಬಾರಿಯ ಹರಾಜಿನಲ್ಲಿ ಅವರು ಅತಿ ಹೆಚ್ಚು, ₹ 14.5 ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದರು.

ಬೆನ್‌ ಸ್ಟೋಕ್ಸ್

ಲಂಡನ್‌: ಪಬ್‌ನಲ್ಲಿ ಗಲಾಟೆ ಮಾಡಿ ಅಮಾನತಿಗೆ ಒಳಗಾಗಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಬೆನ್‌ ಸ್ಟೋಕ್ಸ್ ಅವರಿಗೆ ಐಪಿಎಲ್‌ನಲ್ಲಿ ಆಡಲು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ (ಇಸಿಬಿ) ಅನುಮತಿ ನೀಡಿದೆ.

ಸೆಪ್ಟೆಂಬರ್‌ನಲ್ಲಿ ಅವರು ಅಮಾನತುಗೊಂಡಿದ್ದರು. ಹೀಗಾಗಿ ಆ್ಯಷಸ್‌ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಈ ತಿಂಗಳ ಎರಡನೇ ವಾರದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಈಗ ಈ ಸರಣಿಯಿಂದಲೂ ಕೈಬಿಡಲಾಗಿದ್ದು ಅವರ ಬದಲಿಗೆ ಡೇವಿಡ್ ಮಲಾನ್‌ಗೆ ಸ್ಥಾನ ನೀಡಲಾಗಿದೆ.

ಐಪಿಎಲ್‌ನಲ್ಲಿ ಆಡಲು ಸೋಮವಾರ ಅನುಮತಿ ಲಭಿಸಿದ್ದು, ಈ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಆಟಗಾರರ ಹರಾಜಿನಲ್ಲಿ ಅವರ ಹೆಸರು ಸೇರಲಿದೆ. ಕಳೆದ ಬಾರಿಯ ಹರಾಜಿನಲ್ಲಿ ಅವರು ಅತಿ ಹೆಚ್ಚು, ₹ 14.5 ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದರು.

ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಸ್ಥಳೀಯ ಲೀಗ್‌ನಲ್ಲಿ ಕ್ಯಾಂಟರ್‌ಬರಿ ತಂಡದ ಪರವಾಗಿ ಆಡುವುದಕ್ಕೂ ಅವರಿಗೆ ಅನುಮತಿ ನೀಡಲಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಮೀರಾಬಾಯಿ ಆಕರ್ಷಣೆ

ಸ್ಪರ್ಧೆಯಲ್ಲಿ 400ಕ್ಕೂ ಹೆಚ್ಚು ವೇಟ್‌ಲಿಫ್ಟರ್‌ಗಳು
ಮೀರಾಬಾಯಿ ಆಕರ್ಷಣೆ

21 Jan, 2018

ಮೆಲ್ಬರ್ನ್‌
ಪ್ರೀ ಕ್ವಾರ್ಟರ್‌ಗೆ ಪೇಸ್‌–ಪುರವ ಜೋಡಿ

ಭಾರತದ ಅನುಭವಿ ಆಟಗಾರ ಲಿಯಾಂಡರ್‌ ಪೇಸ್‌ ಮತ್ತು ಪುರವ ರಾಜಾ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ‍ಪ್ರೀ ಕ್ವಾರ್ಟರ್‌...

21 Jan, 2018
ಬಿಎಫ್‌ಸಿ ತಂಡ ಪ್ರಕಟ

ಬೆಂಗಳೂರು
ಬಿಎಫ್‌ಸಿ ತಂಡ ಪ್ರಕಟ

21 Jan, 2018
ಸುಂದರ್ ಮೂರ್ತಿ ನಿಧನ

ಬೆಂಗಳೂರು
ಸುಂದರ್ ಮೂರ್ತಿ ನಿಧನ

21 Jan, 2018
ಶರಪೋವಾ ಮಣಿಸಿದ ಕೆರ್ಬರ್‌

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಜೊಕೊವಿಚ್‌ಗೆ ಜಯ
ಶರಪೋವಾ ಮಣಿಸಿದ ಕೆರ್ಬರ್‌

21 Jan, 2018