ಫುಟ್‌ಬಾಲ್‌

ಧೀರಜ್ ನಿರ್ಧಾರಕ್ಕೆ ಕೋಚ್ ಅಸಮಾಧಾನ

ಭಾರತದ 17 ಮತ್ತು 19 ವರ್ಷದೊ ಳಗಿನವರ ತಂಡದಲ್ಲಿ ಮಿಂಚಿರುವ ಧಿರಜ್‌ ಈಗಾಗಲೇ ಇಂಡಿಯನ್ ಆ್ಯರೋಸ್ ತಂಡವನ್ನು ಬಿಡಲು ನಿರ್ಧರಿಸಿದ್ದಾರೆ

ನವದೆಹಲಿ: ಸ್ಕಾಟ್ಲೆಂಡ್‌ನ ಮದರ್‌ವೆಲ್‌ ಫುಟ್‌ಬಾಲ್‌ ಕ್ಲಬ್‌ ಪರ ಆಡಲು ಇಂಡಿಯನ್ ಆ್ಯರೋಸ್‌ ತಂಡದ ಗೋಲ್‌ ಕೀಪರ್ ಧೀರಜ್ ಸಿಂಗ್ ನಿರ್ಧರಿಸಿರುವುದು ಸರಿಯಲ್ಲ ಎಂದು ಕೋಚ್‌ ಲೂಯಿಸ್‌ ನಾರ್ಟನ್‌ ಡಿ ಮಟೋಸ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರತದ 17 ಮತ್ತು 19 ವರ್ಷದೊ ಳಗಿನವರ ತಂಡದಲ್ಲಿ ಮಿಂಚಿರುವ ಧಿರಜ್‌ ಈಗಾಗಲೇ ಇಂಡಿಯನ್ ಆ್ಯರೋಸ್ ತಂಡವನ್ನು ಬಿಡಲು ನಿರ್ಧರಿಸಿದ್ದಾರೆ. 18 ವರ್ಷಕ್ಕೆ ಕಾಲಿಟ್ಟ ನಂತರವಷ್ಟೇ ಅವರಿಗೆ ಸ್ಕಾಟ್ಲೆಂಡ್‌ನಲ್ಲಿ ಆಡಲು ಸಾಧ್ಯ. ಆದ್ದರಿಂದ ತಂಡ ಸೇರುವ ಪ್ರಕ್ರಿಯೆ ವಿಳಂಬವಾಗಿದೆ.

ಅವರ ನಿರ್ಧಾರದ ಕುರಿತು ಸೋಮವಾರ ಮಾತನಾಡಿದ ಮಟೋಸ್‌ ‘ಧೀರಜ್‌ ಅವರಿಗೆ ಐ ಲೀಗ್‌ನಲ್ಲಿ ಸಾಧನೆ ಮಾಡಲು ಅವ ಕಾಶವಿದೆ. ಆದ್ದರಿಂದ ಈ ನಿರ್ಧಾರ ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ನನ್ನ ಮಾತಿನಲ್ಲಿ ನಿಜಾಂಶವಿಲ್ಲ ಎಂದು ಸಾಬೀತಾದರೆ ಅದರಿಂದ ನನಗೆ ಖುಷಿಯಾಗಲಿದೆ’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ಸರ್ಕಾರಿ ಹುದ್ದೆಗಳಲ್ಲಿ ಕ್ರೀಡಾಪಟುಗಳಿಗೆ ಶೇ 2ರಷ್ಟು ಮೀಸಲು: ತೆಲಂಗಾಣ ಸರ್ಕಾರ ಘೋಷಣೆ

ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದ ಸೈನಾ, ಸಿಂಧುಗೆ ಅಭಿನಂದನೆ
ಸರ್ಕಾರಿ ಹುದ್ದೆಗಳಲ್ಲಿ ಕ್ರೀಡಾಪಟುಗಳಿಗೆ ಶೇ 2ರಷ್ಟು ಮೀಸಲು: ತೆಲಂಗಾಣ ಸರ್ಕಾರ ಘೋಷಣೆ

21 Apr, 2018
ಟೆನಿಸ್‌: ನಿಕ್ಷೇಪ್‌ಗೆ ಡಬಲ್ಸ್‌ ಗರಿ

ಪುರುಷರ 50ಕೆ ಟೆನಿಸ್‌ ಟೂರ್ನಿ
ಟೆನಿಸ್‌: ನಿಕ್ಷೇಪ್‌ಗೆ ಡಬಲ್ಸ್‌ ಗರಿ

21 Apr, 2018
ಅರ್ಜುನ ಪ್ರಶಸ್ತಿಗೆ ಮಣಿಕಾ ಬಾತ್ರಾ ಹೆಸರು ಶಿಫಾರಸು

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಮಣಿಕಾ
ಅರ್ಜುನ ಪ್ರಶಸ್ತಿಗೆ ಮಣಿಕಾ ಬಾತ್ರಾ ಹೆಸರು ಶಿಫಾರಸು

21 Apr, 2018
ಸೆಮಿಫೈನಲ್‌ಗೆ ನಡಾಲ್‌

ಮಾಂಟೆ ಕಾರ್ಲೊ ಟೆನಿಸ್‌ ಟೂರ್ನಿ
ಸೆಮಿಫೈನಲ್‌ಗೆ ನಡಾಲ್‌

21 Apr, 2018
ಸೂಪರ್ ಕಪ್ ಗೆದ್ದ ಬಿಎಫ್‌ಸಿ

ಬೆಂಗಾಲ್‌ ತಂಡವನ್ನು 4–1 ಗೋಲುಗಳಿಂದ ಮಣಿಸಿದ ಚೆಟ್ರಿ ಬಳಗ
ಸೂಪರ್ ಕಪ್ ಗೆದ್ದ ಬಿಎಫ್‌ಸಿ

21 Apr, 2018