ಐಲೀಗ್ ಫುಟ್‌ಬಾಲ್‌ ಪಂದ್ಯ

ಆ್ಯರೋಸ್‌ಗೆ ಬೆಂಗಾಲ್‌ ಸವಾಲು

ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಈಸ್ಟ್‌ಬೆಂಗಾಲ್‌ ಜಯದಾಖಲಿಸುವ ನೆಚ್ಚಿನ ತಂಡ ಎನಿಸಿದೆ. ಆ್ಯರೋಸ್ ತಂಡದಲ್ಲಿ ಯುವ ಆಟಗಾರರು ಇದ್ದಾರೆ. ಆದ್ದರಿಂದ ಈ ತಂಡ ಯಾವುದೇ ಸಂದರ್ಭದಲ್ಲಿಯೂ ಪುಟಿದೇಳುವ ಗುಣ ಹೊಂದಿದೆ.

ಈಸ್ಟ್‌ ಬೆಂಗಾಲ್ ತಂಡ ಜಯದ ವಿಶ್ವಾಸದಲ್ಲಿದೆ.

ನವದೆಹಲಿ: ಅನುಭವಿ ಆಟಗಾರರನ್ನು ಹೊಂದಿರುವ ಈಸ್ಟ್‌ ಬೆಂಗಾಲ್ ತಂಡ ಐಲೀಗ್ ಫುಟ್‌ಬಾಲ್‌ ಪಂದ್ಯದಲ್ಲಿ ಮಂಗಳವಾರ ಇಂಡಿಯನ್ ಆ್ಯರೋಸ್ ಎದುರು ಆಡಲಿದೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಈಸ್ಟ್‌ಬೆಂಗಾಲ್‌ ಜಯದಾಖಲಿಸುವ ನೆಚ್ಚಿನ ತಂಡ ಎನಿಸಿದೆ. ಆ್ಯರೋಸ್ ತಂಡದಲ್ಲಿ ಯುವ ಆಟಗಾರರು ಇದ್ದಾರೆ. ಆದ್ದರಿಂದ ಈ ತಂಡ ಯಾವುದೇ ಸಂದರ್ಭದಲ್ಲಿಯೂ ಪುಟಿದೇಳುವ ಗುಣ ಹೊಂದಿದೆ. ಆ್ಯರೋಸ್ ಆಡಿದ ಆರು ಪಂದ್ಯಗಳಿಂದ ಏಳು ಪಾಯಿಂಟ್ಸ್ ಪಡೆದು ಏಳನೇ ಸ್ಥಾನದಲ್ಲಿದೆ.

ಹಿಂದಿನ ಪಂದ್ಯದಲ್ಲಿ ಈಸ್ಟ್‌ ಬೆಂಗಾಲ್‌ 1–1ಗೋಲಿನಿಂದ ಮೋಹನ್ ಬಾಗನ್ ಎದುರು ಡ್ರಾ ಮಾಡಿಕೊಂಡಿತ್ತು.

‘ಆ್ಯರೋಸ್ ತಂಡದಲ್ಲಿ ಅನುಭವಿ ಆಟಗಾರರು ಇಲ್ಲ. ಆದರೆ ತಂಡವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ನಮ್ಮ ತಂಡ ಪೂರ್ಣ ಸಿದ್ಧತೆಯೊಂದಿಗೆ ಆಡಲಿದೆ’ ಎಂದು ಈಸ್ಟ್‌ಬೆಂಗಾಲ್ ತಂಡದ ಕೋಚ್‌ ಖಾಲಿದ್ ಜಮೀಲ್ ಹೇಳಿದ್ದಾರೆ.

‘ಯುವ ತಂಡದೊಂದಿಗೆ ಆಡಲು ಆಟಗಾರರು ಉತ್ಸಾಹದಲ್ಲಿ ಇದ್ದಾರೆ. ಅವರಲ್ಲಿ ಕಲಿಯುವುದು ಸಾಕಷ್ಟಿದೆ. ಆ್ಯರೋಸ್ ತಂಡದಲ್ಲಿ ಇದ್ದ ಸ್ಟಾರ್ ಗೋಲ್‌ಕೀಪರ್ ಧೀರಜ್ ಸಿಂಗ್ ಐಲೀಗ್‌ನಿಂದ ಹಿಂದೆಸರಿದರು. ಅವರು ಪಂದ್ಯವನ್ನು ಬದಲಿಸುವ ಗುಣ ಹೊಂದಿದ್ದರು.

ಈಗ ನಮ್ಮ ತಂಡದ ಜಯದ ಹಾದಿ ಸುಗಮವಾಗಿದೆ ’ ಎಂದು ಜಮೀಲ್ ಹೇಳಿದ್ದಾರೆ.

ಬಾಗನ್‌–ಚೆನೈ ಪೈಪೋಟಿ: ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮೋಹನ್ ಬಾಗನ್ ಹಾಗೂ ಚೆನ್ನೈ ಸಿಟಿ ಎಫ್‌ಸಿ ತಂಡಗಳು ಆಡಲಿವೆ.

ಡಿಸೆಂಬರ್‌ 2 ರಂದು ನಡೆದ ಪಂದ್ಯದಲ್ಲಿ ಮೋಹನ್ ಬಾಗನ್‌ ತಂಡ ಚರ್ಚಿಲ್ ಬ್ರದರ್ಸ್ ಎದುರು 5–0 ಗೋಲುಗಳಿಂದ ಗೆದ್ದಿದೆ. ಆ ಬಳಿಕ ಈ ತಂಡ ಒಂದೂ ಪಂದ್ಯ ಗೆದ್ದಿಲ್ಲ. ಎರಡು ಪಂದ್ಯ ಡ್ರಾ ಮಾಡಿಕೊಂಡಿದೆ. ಇದರಿಂದಾಗಿ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ.

ಹಿಂದಿನ ಪಂದ್ಯದಲ್ಲಿ ಚೆನ್ನೈ ತಂಡ 1–2ಗೋಲುಗಳಲ್ಲಿ ಈಸ್ಟ್‌ ಬೆಂಗಾಲ್ ಎದುರು ಸೋತಿದೆ. ಕೋಲ್ಕತ್ತದಲ್ಲಿ ನಡೆಯುವ ಪೈಪೋಟಿಯಲ್ಲಿ ಬಾಗನ್ ಜಯದ ವಿಶ್ವಾಸ ಹೊಂದಿದೆ.

Comments
ಈ ವಿಭಾಗದಿಂದ ಇನ್ನಷ್ಟು

ಬೆಂಗಳೂರು
ರಾಜ್ಯ ನೆಟ್‌ಬಾಲ್ ತಂಡ ಪ್ರಕಟ

ಚಂಡಿಗಡದ ಪಂಜಾಬ್ ವಿ.ವಿ. ಆಶ್ರಯದಲ್ಲಿ ಇದೇ 27ರಿಂದ ನಡೆಯಲಿರುವ ಫೆಡರೇಷನ್ ಕಪ್‌ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ರಾಜ್ಯ ಪುರುಷ ಮತ್ತು ಮಹಿಳಾ ತಂಡಗಳನ್ನು...

24 Apr, 2018
ಕಿಂಗ್ಸ್‌ ಇಲೆವನ್‌ಗೆ ರೋಚಕ ಗೆಲುವು

ಗೇಲ್‌ಗೆ ವಿಶ್ರಾಂತಿ; ಶ್ರೇಯಸ್‌ ಅಯ್ಯರ್‌ ಆಟ ವ್ಯರ್ಥ
ಕಿಂಗ್ಸ್‌ ಇಲೆವನ್‌ಗೆ ರೋಚಕ ಗೆಲುವು

24 Apr, 2018
ಸೆಂಥಿಲ್‌ ಕುಮಾರ್‌ಗೆ ಪ್ರಶಸ್ತಿ

ಮ್ಯಾಡಿಸನ್‌ ಓಪನ್‌ ಸ್ಕ್ವಾಷ್‌ ಟೂರ್ನಿ
ಸೆಂಥಿಲ್‌ ಕುಮಾರ್‌ಗೆ ಪ್ರಶಸ್ತಿ

24 Apr, 2018
ಕೊಹ್ಲಿ ಅಪರೂಪದ ನಾಯಕ

ಆರ್‌ಸಿಬಿ ಆಟಗಾರ ಎಬಿ ಡಿವಿಲಿಯರ್ಸ್‌ ಅನಿಸಿಕೆ
ಕೊಹ್ಲಿ ಅಪರೂಪದ ನಾಯಕ

24 Apr, 2018

ಜೊಹಾನ್ಸ್‌ಬರ್ಗ್‌
ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿ ಪ್ರಕಟ

ದಕ್ಷಿಣ ಆಫ್ರಿಕಾ ತಂಡವು 2018–19ರ ಋತುವಿನಲ್ಲಿ ಪಾಕಿಸ್ತಾನ ವಿರುದ್ಧ ಮೂರು ಹಾಗೂ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

24 Apr, 2018