ಎರಡನೇ ಟಿ–20 ಪಂದ್ಯ

ನ್ಯೂಜಿಲೆಂಡ್‌–ವಿಂಡೀಸ್‌ ಪಂದ್ಯ ಮಳೆಗೆ ಆಹುತಿ

ನ್ಯೂಜಿಲೆಂಡ್‌ ತಂಡ 9 ಓವರ್‌ಗಳಲ್ಲಿ 102ರನ್‌ ಗಳಿಸಿದ್ದ ವೇಳೆ ಮತ್ತೆ ವರುಣನ ಆರ್ಭಟ ಶುರುವಾಯಿತು. ಸಾಕಷ್ಟು ಸಮಯ ಕಾದರೂ ಮಳೆ ನಿಲ್ಲಲಿಲ್ಲ. ಹೀಗಾಗಿ ಅಧಿಕಾರಿಗಳು ಪಂದ್ಯ ರದ್ದು ಮಾಡುವ ನಿರ್ಧಾರ ಪ್ರಕಟಿಸಿದರು.

ವೆಸ್ಟ್ ಇಂಡೀಸ್‌ ಎದುರಿನ ಎರಡನೇ ಟಿ–20 ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ ನ್ಯೂಜಿಲೆಂಡ್‌ ತಂಡದ ಕಾಲಿನ್‌ ಮನ್ರೊ ಬ್ಯಾಟಿಂಗ್‌ ವೈಖರಿ. -ಎಎಫ್‌ಪಿ ಚಿತ್ರ

ಮೌಂಟ್‌ ಮೌಂಗಾನುಯಿ, ನ್ಯೂಜಿಲೆಂಡ್‌: ನ್ಯೂಜಿಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಎರಡನೇ ಟಿ–20 ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ಸೋಮವಾರ ಬೆಳಗಿನಿಂದಲೇ ಧಾರಾಕಾರ ಮಳೆ ಸುರಿಯಿತು. ಮಳೆ ನಿಂತ ನಂತರ (ನಿಗದಿತ ಅವಧಿಗಿಂತ 20 ನಿಮಿಷ ತಡವಾಗಿ) ಪಂದ್ಯ ಆರಂಭಿಸಲಾಯಿತು.

ಟಾಸ್‌ ಗೆದ್ದ ಕೆರಿಬಿಯನ್‌ ನಾಡಿನ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ ನಾಡಿನ ತಂಡ ಮಾರ್ಟಿನ್‌ ಗಪ್ಟಿಲ್‌ (2) ವಿಕೆಟ್‌ ಬೇಗನೆ ಕಳೆದುಕೊಂಡಿತು.

ಶೆಲ್ಡನ್‌ ಕಾಟ್ರೆಲ್‌ ಬೌಲ್‌ ಮಾಡಿದ ದಿನದ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಗಪ್ಟಿಲ್‌, ವಿಕೆಟ್‌ ಕೀಪರ್‌ ಚಾಡ್ವಿಕ್‌ ವಾಲ್ಟನ್‌ಗೆ ಕ್ಯಾಚ್‌ ನೀಡಿದರು.

ಆ ನಂತರ ಕಾಲಿನ್‌ ಮನ್ರೊ ಗರ್ಜಿಸಿದರು. ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದ ಅವರು ಬೇ ಓವಲ್‌ ಅಂಗಳದಲ್ಲೂ ವಿಂಡೀಸ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದರು.

ಸ್ಫೋಟಕ ಆಟ ಆಡಿದ ಮನ್ರೊ, 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕವೂ ಮಿಂಚಿದ ಅವರು 23 ಎಸೆತಗಳಲ್ಲಿ 66ರನ್‌ ಗಳಿಸಿ ಔಟಾದರು. ಇದರಲ್ಲಿ 11 ಬೌಂಡರಿ ಮತ್ತು 3 ಸಿಕ್ಸರ್‌ಗಳೂ ಸೇರಿದ್ದವು. ಎಂಟನೇ ಓವರ್‌ನಲ್ಲಿ ಗ್ಲೆನ್‌ ಫಿಲಿಪ್ಸ್‌ (10; 5ಎ, 1ಸಿ) ಅವರನ್ನು ಸ್ಯಾಮುಯೆಲ್‌ ಬದ್ರಿ ಎಲ್‌ಬಿಡಬ್ಲ್ಯು ಬಲೆಯಲ್ಲಿ ಬಂದಿಸಿದರು. ಆಗ ಕಿವೀಸ್‌ ನಾಡಿನ ತಂಡದ ಖಾತೆಯಲ್ಲಿ 92ರನ್‌ ಗಳಿದ್ದವು. ಟಾಮ್‌ ಬ್ರೂಸ್‌ (3) ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡರು.

ಬಳಿಕ ನಾಯಕ ಕೇನ್‌ ವಿಲಿಯಮ್ಸನ್‌ (ಔಟಾಗದೆ 17; 15ಎ, 1ಬೌಂ) ಮತ್ತು ಅನರು ಕಿಚನ್‌ (ಔಟಾಗದೆ 1) ಎಚ್ಚರಿಕೆಯ ಆಟ ಆಡಿದರು.

ನ್ಯೂಜಿಲೆಂಡ್‌ ತಂಡ 9 ಓವರ್‌ಗಳಲ್ಲಿ 102ರನ್‌ ಗಳಿಸಿದ್ದ ವೇಳೆ ಮತ್ತೆ ವರುಣನ ಆರ್ಭಟ ಶುರುವಾಯಿತು. ಸಾಕಷ್ಟು ಸಮಯ ಕಾದರೂ ಮಳೆ ನಿಲ್ಲಲಿಲ್ಲ. ಹೀಗಾಗಿ ಅಧಿಕಾರಿಗಳು ಪಂದ್ಯ ರದ್ದು ಮಾಡುವ ನಿರ್ಧಾರ ಪ್ರಕಟಿಸಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌: 9 ಓವರ್‌ಗಳಲ್ಲಿ 4 ವಿಕೆಟ್‌ಗೆ 102 (ಕಾಲಿನ್‌ ಮನ್ರೊ 66, ಕೇನ್‌ ವಿಲಿಯಮ್ಸನ್‌ ಔಟಾಗದೆ 17, ಗ್ಲೆನ್‌ ಫಿಲಿಪ್ಸ್‌ 10; ಶೆಲ್ಡನ್‌ ಕಾಟ್ರೆಲ್‌ 21ಕ್ಕೆ1, ಸ್ಯಾಮುಯೆಲ್‌ ಬದ್ರಿ 23ಕ್ಕೆ1, ಕೇಸ್ರಿಕ್‌ ವಿಲಿಯಮ್ಸ್‌ 24ಕ್ಕೆ1, ಆ್ಯಷ್ಲೆ ನರ್ಸ್‌ 13ಕ್ಕೆ1).

Comments
ಈ ವಿಭಾಗದಿಂದ ಇನ್ನಷ್ಟು
ಐಎಸ್‌ಎಲ್‌: ಎಫ್‌ಸಿ ಗೋವಾಗೆ ಜಯ

ಕೊಚ್ಚಿ
ಐಎಸ್‌ಎಲ್‌: ಎಫ್‌ಸಿ ಗೋವಾಗೆ ಜಯ

22 Jan, 2018
ಹಾಕಿ: ಫೈನಲ್‌ನಲ್ಲಿ ಮುಗ್ಗರಿಸಿದ ಭಾರತ

ಬೆಲ್ಜಿಯಂಗೆ 2–1ರಲ್ಲಿ ಗೆಲುವು
ಹಾಕಿ: ಫೈನಲ್‌ನಲ್ಲಿ ಮುಗ್ಗರಿಸಿದ ಭಾರತ

22 Jan, 2018
ವಿಶ್ವಕಪ್ ಗೆಲ್ಲುವ ಭರವಸೆಯಲ್ಲಿ ಪೃಥ್ವಿ ಶಾ

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್
ವಿಶ್ವಕಪ್ ಗೆಲ್ಲುವ ಭರವಸೆಯಲ್ಲಿ ಪೃಥ್ವಿ ಶಾ

22 Jan, 2018
ಎಚ್‌ಪಿಎಲ್‌: ನೈಟ್ಸ್ ಚಾಂಪಿಯನ್‌

ಕ್ರಿಕೆಟ್‌ ಟೂರ್ನಿ
ಎಚ್‌ಪಿಎಲ್‌: ನೈಟ್ಸ್ ಚಾಂಪಿಯನ್‌

22 Jan, 2018

ಗಾಲ್ಫ್‌ ಚಾಂಪಿಯನ್‌ಷಿಪ್‌
ಕಪೂರ್‌ಗೆ 23ನೇ ಸ್ಥಾನ

ಭಾನುವಾರ ನಡೆದ ನಿರ್ಣಾಯಕ ಸುತ್ತಿನಲ್ಲಿ ಶಿವ, ಪರಿಣಾಮಕಾರಿ ಸಾಮರ್ಥ್ಯ ತೋರಲು ವಿಫಲರಾದರು. ಜ್ಯೋತಿ ರಾಂಧವ ಮತ್ತು ಗಗನ್‌ಜೀತ್‌ ಭುಲ್ಲಾರ್‌, ಜಂಟಿ 27 ನೇ ಸ್ಥಾನದಲ್ಲಿ...

22 Jan, 2018