ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶದಲ್ಲಿ ಸೂಕ್ಷ್ಮ ಜೀವಿ!

Last Updated 3 ಜನವರಿ 2018, 20:28 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್‌ಎಸ್‌) ಗಗನಯಾನಿಗಳು ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಸೂಕ್ಷ್ಮ ಜೀವಿಗಳನ್ನು ಪತ್ತೆ ಹಚ್ಚಿದ್ದಾರೆ. ಆದರೆ ಹೆಚ್ಚಿನ ಸಂಶೋಧನೆಗಾಗಿ ಅವುಗಳ ಮಾದರಿಯನ್ನು ಭೂಮಿಗೆ ತರಲು ಸಾಧ್ಯವಾಗಿಲ್ಲ.

‘ಪತ್ತೆಯಾಗಿರುವ ಸೂಕ್ಷ್ಮಜೀವಿಯಲ್ಲಿರುವ ಡಿಎನ್‌ಎ ಅನ್ನು ಆ ಜೀವಿಯಿಂದ ಮೊದಲಿಗೆ ಪ್ರತ್ಯೇಕಿಸಲಾಯಿತು. ನಂತರ ಡಿಎನ್‌ಎ ಅನ್ನು ಹಿಗ್ಗಿಸಿ  ಅಧ್ಯಯನಕ್ಕೆ ಒಳಪಡಿಸಲಾಯಿತು. ಈ ಸಂಶೋಧನೆಯಲ್ಲಿ ಎರಡು ಭಾಗಗಳಿವೆ. ಸೂಕ್ಷ್ಮ ಜೀವಿಗಳ ಮಾದರಿಯನ್ನು ಸಂಗ್ರಹಿಸಿ ಅವನ್ನು ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್‌) ಮೂಲಕ ಹಿಗ್ಗಿಸುವುದು ಒಂದು ಭಾಗ. ಜೀವಿಗಳ ಅನುಕ್ರಮಣಿಕೆ ಗುರುತಿಸುವ ಕೆಲಸ ಮುಂದಿನ ಭಾಗದಲ್ಲಿ ಸೇರುತ್ತದೆ’ ಎಂದು ನಾಸಾದ ಜೈವಿಕಶಾಸ್ತ್ರಜ್ಞ ಆರನ್ ಬರ್ಟನ್ ತಿಳಿಸಿದ್ದಾರೆ.

‘ನಾಸಾ ಗಗನಯಾತ್ರಿ ಪೆಗ್ಗಿ ವ್ಯಾಟ್ಸನ್ ಅವರು ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ಈ ಪ್ರಯೋಗ ನಡೆಸುತ್ತಿದ್ದರೆ, ನಾಸಾದ ಸೂಕ್ಷ್ಮಜೀವಿಶಾಸ್ತ್ರಜ್ಞೆ ಸರಾ ವಲ್ಲಾಸ್ ಹಾಗೂ ಅವರ ತಂಡವು ಅಮೆರಿಕದಿಂದ ಮಾರ್ಗದರ್ಶನ ನೀಡುತ್ತಿತ್ತು. ಒಂದು ವಾರದ ಬಳಿಕ ಜೀವಕೋಶಗಳನ್ನು ಪ್ರತ್ಯೇಕಿಸಿ ಕಿರಿದಾದ ಟ್ಯೂಬ್‌ಗಳಿಗೆ ಅವನ್ನು ವರ್ಗಾಯಿಸುವಲ್ಲಿ ಪಿಗ್ಗಿ ಯಶಸ್ವಿಯಾದರು. ಈ ಯತ್ನ ಬಾಹ್ಯಾಕಾಶ ಪ್ರಯೋಗಾಲಯದಲ್ಲೇ ಮೊದಲು.

ಹಲವು ಅನುಕೂಲ

* ಬಾಹ್ಯಾಕಾಶಯಾನಿಗಳಿಗೆ ಉಂಟಾಗುವ ಅನಾರೋಗ್ಯ ಹಾಗೂ ಅದಕ್ಕೆ ಚಿಕಿತ್ಸೆ ನೀಡುವ ವಿಚಾರದಲ್ಲಿ ಈ ಜೀವಿಗಳ ಅಧ್ಯಯನವು ಸಹಾಯಕವಾಗಲಿದೆ.

* ಅನ್ಯಗ್ರಹದ‌ಲ್ಲಿ ಇರಬಹುದಾದ ಡಿಎನ್‌ಎ ಆಧರಿತ ಜೀವಿಗಳ ಅನ್ವೇಷಣೆ ಹಾಗೂ ಸಂಶೋಧನೆಗೂ ನೆರವಾಗಲಿದೆ.

* ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ನಡೆಯುತ್ತಿರುವ ಇತರ ಪ್ರಯೋಗಗಳಿಗೂ ಇದರಿಂದ ಅನುಕೂವಾಗುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT