ಕೈಗಾರಿಕಾ ಸಚಿವಾಲಯ ಮಾಹಿತಿ

ಮೂಲಸೌಕರ್ಯ ಶೇ 6.8 ಪ್ರಗತಿ

2016ರ ನವೆಂಬರ್‌ನಲ್ಲಿ ಶೇ 3.2 ರಷ್ಟು ಪ್ರಗತಿ ಇತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಪ್ರಗತಿ ಪ್ರಮಾಣ ಶೇ 3.6ರಷ್ಟು ಹೆಚ್ಚಾಗಿದೆ.

ಮೂಲಸೌಕರ್ಯ ಶೇ 6.8 ಪ್ರಗತಿ

ನವದೆಹಲಿ: ಮೂಲಸೌಕರ್ಯ ವಲಯದ ಪ್ರಮುಖ 8 ಕೈಗಾರಿಕೆಗಳು ನವೆಂಬರ್‌ನಲ್ಲಿ ಶೇ 6.8ರಷ್ಟು ಪ್ರಗತಿ ಸಾಧಿಸಿವೆ.

2016ರ ನವೆಂಬರ್‌ನಲ್ಲಿ ಶೇ 3.2 ರಷ್ಟು ಪ್ರಗತಿ ಇತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಪ್ರಗತಿ ಪ್ರಮಾಣ ಶೇ 3.6ರಷ್ಟು ಹೆಚ್ಚಾಗಿದೆ.

ತೈಲಾಗಾರ, ಉಕ್ಕು ಮತ್ತು ಸಿಮೆಂಟ್‌ ವಲಯಗಳ ಉತ್ತಮ ಸಾಧನೆಯಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ತೈಲಾಗಾರ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್‌ ಮತ್ತು ವಿದ್ಯುತ್‌ ವಲಯಗಳು ಮೂಲಸೌಕರ್ಯ ವಲಯದ ಪ್ರಮುಖ ಎಂಟು ಕೈಗಾರಿಕೆಗಳಾಗಿವೆ.

ಕಲ್ಲಿದ್ದಲು ವಲಯದ ಪ್ರಗತಿ ಮಾತ್ರವೇ ಶೇ 6.1 ರಿಂದ ಶೇ 0.2ಕ್ಕೆ ಇಳಿಕೆ ಕಂಡಿದೆ. ಏಪ್ರಿಲ್‌–ನವೆಂಬರ್ ಅವಧಿಯಲ್ಲಿ 8 ಕೈಗಾರಿಕೆಗಳ ಪ್ರಗತಿ ಶೇ 5.3 ರಿಂದ ಶೇ 3.9ಕ್ಕೆ ಇಳಿಕೆ ಕಂಡಿದೆ.

ಮೂಲಸೌಕರ್ಯ ವಲಯವು ಕೈಗಾರಿಕಾ ಪ್ರಗತಿಗೆ ಶೇ 41 ರಷ್ಟು ಕೊಡುಗೆ ನೀಡುತ್ತಿದೆ. ಹೀಗಾಗಿ 8 ಕೈಗಾರಿಕೆಗಳ ಉತ್ತಮ ಪ್ರಗತಿಯಿಂದ ಕೈಗಾರಿಕಾ ಪ್ರಗತಿ ಸೂಚ್ಯಂಕವೂ ಏರಿಕೆ ಕಾಣುವ ವಿಶ್ವಾಸ ವ್ಯಕ್ತವಾಗಿದೆ ಎಂದು ತಜ್ಞರು ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ವಂಚನೆ: ಜಿಎಸ್‌ಟಿ ಮಂಡಳಿ ಶಂಕೆ

ಬೆಂಗಳೂರು
ವಂಚನೆ: ಜಿಎಸ್‌ಟಿ ಮಂಡಳಿ ಶಂಕೆ

18 Jan, 2018

ನವದೆಹಲಿ
ಎನ್‌ಪಿಎಸ್‌ ನಿಯಮ ಸಡಿಲಿಕೆ

ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ (ಎನ್‌ಪಿಎಸ್‌) ಭಾಗಶಃ ಹಣ ವಾಪಸ್‌ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

18 Jan, 2018
ಆಲೂಗೆಡ್ಡೆ ಖರೀದಿಗೆ ಒಪ್ಪಂದ

ಉತ್ತರ ಪ್ರದೇಶದಿಂದ 25,000 ಟನ್‌ ಪೂರೈಕೆ
ಆಲೂಗೆಡ್ಡೆ ಖರೀದಿಗೆ ಒಪ್ಪಂದ

18 Jan, 2018
ಸೂಚ್ಯಂಕದ ಹೊಸ ಮೈಲುಗಲ್ಲು

17 ವಹಿವಾಟಿನ ದಿನಗಳಲ್ಲಿ 1 ಸಾವಿರ ಅಂಶಗಳ ಹೆಚ್ಚಳ
ಸೂಚ್ಯಂಕದ ಹೊಸ ಮೈಲುಗಲ್ಲು

18 Jan, 2018
14 ಬಗೆಯ ₹ 10 ಮುಖಬೆಲೆಯ ನಾಣ್ಯ ಚಲಾವಣೆಗೆ ಅರ್ಹ: ಆರ್‌ಬಿಐ ಮತ್ತೆ ಸ್ಪಷ್ಟನೆ

ಗೊಂದಲ ನಿವಾರಿಸಲು ಪ್ರಕಟಣೆ
14 ಬಗೆಯ ₹ 10 ಮುಖಬೆಲೆಯ ನಾಣ್ಯ ಚಲಾವಣೆಗೆ ಅರ್ಹ: ಆರ್‌ಬಿಐ ಮತ್ತೆ ಸ್ಪಷ್ಟನೆ

17 Jan, 2018